More

    ಬೆಳೆಹಾನಿ ಪರಿಹಾರ ತಕ್ಷಣ ಒದಗಿಸಲಿ

    ರಾಯಬಾಗ: ರೈತ ಸಂಘದ ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಪಟ್ಟಣದ ಹನುಮಾನ ಮಂದಿರ ಎದುರಿನ ರಸ್ತೆ ಸಂಚಾರ ಬಂದ ಮಾಡಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಆರ್.ಮುಂಜೆ ಅವರಿಗೆ ಮನವಿ ಸಲ್ಲಿಸಿದರು.

    ತಾಲೂಕಿನಲ್ಲಿ ಬರ ಆವರಿಸಿದೆ. ನೀರಿಲ್ಲದೆ ಬೆಳೆಗಳು ಒಣಗಿದ್ದು, ಗ್ರಾಮಲೆಕ್ಕಾಧಿಕಾರಿಗಳಿಂದ ಶೀಘ್ರ ಸರ್ವೇ ಮಾಡಿಸಿ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು. ಹೆಸ್ಕಾಂ ಅಧಿಕಾರಿಗಳು ಸೋಲಾರ್ ಟಿ.ಸಿ.ಗಳಿಗೆ ರೈತರಿಂದ 2 ಲಕ್ಷ ರೂ. ಹಣ ಪಡೆಯುತ್ತಿದ್ದು, ಉಚಿತವಾಗಿ ಕೊಡಿಸಬೇಕು. ಕಾಲುವೆಗಳನ್ನು ಸ್ವಚ್ಛ ಗೊಳಿಸಿ ನೀರು ಹರಿಸಬೇಕೆಂದು ಒತ್ತಾಯಿಸಿದರು.

    ಜೆಎಲ್‌ಬಿಸಿ ಎಇಇ ಹಾಲಪ್ಪ ಪೂಜಾರಿ, ಹೆಸ್ಕಾಂ ಎಇ ಆನಂದ ನಾಯಿಕ ಅವರಿಗೂ ರೈತರು ಮನವಿ ಸಲ್ಲಿಸಿದರು. ಮುಖಂಡರಾದ ಗುರುನಾಥ ಹೆಗಡೆ, ರಮೇಶ ಮಾಳಿ, ದಸ್ತಗೀರ ಮುಲ್ತಾನಿ, ಸಂಜು ಮನಿಗಿನಿ, ಶಿವಾಜಿ ಪಾಟೀಲ, ಸುಮಿತ್ರಾ ಧರ್ಮಟ್ಟಿ, ಗೌರವ್ವ ಸಪ್ತಸಾಗರೆ, ವಿಜಯಲಕ್ಷ್ಮೀ ಪೂಜಾರಿ, ಪ್ರಕಾಶ ಪಾಟೀಲ, ಪುಂಡಲೀಕ ಮಾನೆ, ರಾಮಪ್ಪ ಹಸರೆ, ಸಿದ್ದಪ್ಪ ಧನಗರ, ಸೇವಂತಿ ಸಪ್ತಸಾಗರೆ, ಬಾಲಚಂದ್ರ ತಳದಮನಿ, ಭೀಮಪ್ಪ ಅಳಗುಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts