More

    ಒಲಿಂಪಿಕ್ಸ್ ರೋಯಿಂಗ್‌ನಲ್ಲಿ ಕೊವ್ರೇಷಿಯಾ ಸಹೋದರರ ಅಪರೂಪದ ಸಾಧನೆ

    ಟೋಕಿಯೊ: ಕ್ರೊವೇಷಿಯಾದ ಸಹೋದರರಾದ ಮಾರ್ಟಿನ್ ಸಿನ್ಕೊವಿಕ್ ಹಾಗೂ ವ್ಯಾಲೆಂಟ್ ಸಿನ್ಕೊವಿಕ್, ರೋಯಿಂಗ್‌ನ ಪುರುಷರ ಡಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಈ ಮೂಲಕ ಪುರುಷರ ಡಬಲ್ಸ್ ವಿಭಾಗದ ರೋಯಿಂಗ್‌ನಲ್ಲಿ ದೇಶಕ್ಕೆ ಮೊದಲ ಸ್ವರ್ಣ ಗೆದ್ದು ಕೊಟ್ಟಿತು. 2012ರ ಕೂಟದಲ್ಲಿ ಕ್ವಾಡ್ರುಪ್ಲೆ ಸ್ಕಲ್ಸ್ ವಿಭಾಗದಲ್ಲಿ ಈ ಜೋಡಿ ಬೆಳ್ಳಿ ಪದಕ ಜಯಿಸಿತ್ತು. ನಾವು ಹಾಕಿಕೊಂಡಿದ್ದ ಯೋಜನೆ ಕೈಗೂಡಿತು. 250 ರಿಂದ 1000 ಮೀಟರ್‌ವರೆಗೆ ಅತಿವೇಗದಲ್ಲಿ ಚಲಿಸಿದೇವು, ನಮಗೆ ರೊಮೆನಿಯಾ ಬಲಿಷ್ಠ ತಂಡವಾಗಿತ್ತು. ನಮಗೆ ಅವರೇ ಪ್ರಮುಖ ಎದುರಾಳಿಯಾಗಿದ್ದರು ಎಂದು ವ್ಯಾಲೆಂಟ್ ತಿಳಿಸಿದ್ದಾರೆ.

    ಇದನ್ನೂ ಓದಿ: ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿದ್ದವಳು ಈಗ ಒಲಿಂಪಿಕ್ಸ್ ಪದಕಕ್ಕೆ ಸನಿಹ!

    ಹಾಲಿ ಚಾಂಪಿಯನ್ ಐರ್ಲೆಂಡ್‌ನ ಸನಿತಾ ಪುಸ್ಪೆರ್ ಸೆಮಿಫೈನಲ್‌ನಲ್ಲಿ 5ನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೇರಲು ವಿಫಲರಾಗಿದ್ದರು. 39 ವರ್ಷದ ಪುಸ್ಪೆರ್, 2018 ಹಾಗೂ 2019ರ ವಿಶ್ವ ಚಾಂಪಿಯನ್‌ಷಿಪ್, 2019 ಹಾಗೂ 2020ರ ಯರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

    ಇದನ್ನೂ ಓದಿ: ಡಾಕ್ಟರ್ ಆಗಬೇಕೆಂಬ ರೈತನ ಮಗಳ ಕನಸು ನನಸಾಗಿಸಿದ ಕ್ರಿಕೆಟ್ ದಿಗ್ಗಜ ತೆಂಡುಲ್ಕರ್

    ಕ್ರೊವೇಷಿಯಾ ತಂಡ 6 ನಿಮಿಷ 15.29 ಸೆಕೆಂಡ್‌ಗಳಲ್ಲಿ 2 ಸಾವಿರ ಮೀಟರ್ ದೂರ ಕ್ರಮಿಸಿದರೆ, ರೊಮೆನಿಯಾ ತಂಡ 6 ನಿಮಿಷ.17.58 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಹಾಗೂ ಡೆನ್ಮಾರ್ಕ್ ತಂಡ (6ನಿಮಿಷ 19.88ಸೆ) ಬೆಳ್ಳಿ ಗೆದ್ದುಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts