More

    ಬಿಡಿಎಯಿಂದ ಅಕ್ರಮ ಪರಿಹಾರ ಪಡೆಯುವವರ ವಿರುದ್ಧ ಕ್ರಿಮಿನಲ್​ ಪ್ರಕರಣ

    ಬೆಂಗಳೂರು: ಬಿಡಿಎ ಸ್ವಾಧಿನ ಪ್ರಕ್ರಿಯೆಗೊಳಪಟ್ಟಿರುವ ಬಡಾವಣೆಗಳಿಗೆ ಭೂಮಿ ನೀಡಿ ಪರಿಹಾರ ಪಡೆದವರು, ಅದೇ ಭೂ ದಾಖಲೆ ಆಧಾರದಲ್ಲಿ ಮತ್ತೊಮ್ಮೆ ಪರಿಹಾರ ತೆಗೆದುಕೊಂಡು ವಂಚಿಸುತ್ತಿರುವವರ ಪತ್ತೆಹಚ್ಚಿ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್​.ಆರ್​.ವಿಶ್ವನಾಥ್​ ಎಚ್ಚರಿಕೆ ನೀಡಿದ್ದಾರೆ.

    ಬಿಡಿಎ ಕೇಂದ್ರ ಕಚೇರಿಯಲ್ಲಿ ಸೋಮವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ಪರಿಹಾರ ನೀಡುವಾಗ ಎಲ್ಲ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲನೆ ನಡೆಸಬೇಕು. ಪರಿಹಾರ ಪಡೆಯುವಲ್ಲಿ ವಂಚಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅದೇ ರೀತಿ ಅಂತಹ ಅಕ್ರಮಕ್ಕೆ ನೆರವು ನೀಡುವ ಬಿಡಿಎ ಅಧಿಕಾರಿಗಳನ್ನು ಅಮಾನತು ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಬದಲಿ ನಿವೇಶನ, ಖಾಲಿ ನಿವೇಶನ ಮತ್ತು ಬಿಡಿಎ ಆಸ್ತಿ ವಿವರವನ್ನು ಮುಚ್ಚಿಡುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಕ್ರಾಂತಿಕಾರಿ ಬದಲಾವಣೆಗೆ ಸರ್ಕಾರ ಸನ್ನದ್ಧ: ಶಿಕ್ಷಣ ನೀತಿಯಲ್ಲಿ ಸಮಾನತೆ ಉತ್ತೇಜನ

    ಬಿಡಿಎ ಸ್ವಾಧಿನಕ್ಕೆ ಒಳಪಟ್ಟ ಬಡಾವಣೆಗಳಲ್ಲಿ ಅಕ್ರಮವಾಗಿ ಮನೆ, ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡುವ ಅಥವಾ ನೋಂದಣಿ ಮಾಡಿಕೊಡುವ ಅಧಿಕಾರಿಗಳನ್ನು ಶಿೆಗೆ ಗುರಿತಪಡಿಸಲಾಗುವುದು. ಯಾವುದೇ ಕಾರಣಕ್ಕೂ ಬಿಡಿಎ ಉನ್ನತಾಧಿಕಾರಿಗಳ ಗಮನಕ್ಕೆ ತರದೆ ಬದಲಿ ನಿವೇಶನ ನೀಡಬಾರದು. ಬಿಡಿಎ ನಿರ್ಮಾಣ ಮಾಡಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಅಪಾರ್ಟ್​ಮೆಂಟ್​ಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. 
    ಸಭೆಯಲ್ಲಿ ಬಿಡಿಎ ಆಯುಕ್ತ ಡಾ.ಎಚ್​.ಆರ್​.ಮಹದೇವ ಸೇರಿ ಹಿರಿಯ ಅಧಿಕಾರಿಗಳಿದ್ದರು.

    ಬೆಂಗಳೂರಿನ ನಂದಿನಿ ಲೇ ಔಟ್​ನಲ್ಲಿ ನಸುಕಿನಲ್ಲಿ ಮೊಳಗಿತು ಗುಂಡಿನ ಸದ್ದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts