More

    ದೇಶದ ಶೇಕಡ 44 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ; ಸರಾಸರಿ ಆಸ್ತಿ ಮೌಲ್ಯದಲ್ಲಿ ಕರ್ನಾಟಕ ಮೊದಲ ಸ್ಥಾನ

    ನವದೆಹಲಿ: ದೇಶದ ಎಲ್ಲ ರಾಜ್ಯಗಳ ಶಾಸನಸಭೆಯ ಸದಸ್ಯರ ಪೈಕಿ ಶೇ. 44ರಷ್ಟು ಮಂದಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ಎಡಿಆರ್) ತಿಳಿಸಿದೆ. 28 ರಾಜ್ಯ ಮತ್ತು ಶಾಸನಸಭೆ ಹೊಂದಿರುವ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 4,033 ಶಾಸಕರ ಬಲ ಇದ್ದು, 4,001 ಶಾಸಕರು ಚುನಾವಣೆ ಸ್ಪರ್ಧಿಸಿದ್ದ ವೇಳೆ ಸಲ್ಲಿಸಿದ್ದ ಅಫಿಡವಿಟ್ ಅಧ್ಯಯನ ನಡೆಸಿರುವ ಎಡಿಆರ್, 1,136 (ಶೇ.28) ಶಾಸಕರ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣ ಇದೆ. ಕೇರಳದ 135 ಶಾಸಕರ ಪೈಕಿ 95 ಶಾಸಕರು (ಶೇ. 70) ಕ್ರಿಮಿನಲ್ ಕೇಸ್ ಇದ್ದು, ನಂತರದ ಸ್ಥಾನದಲ್ಲಿರುವ ಬಿಹಾರದಲ್ಲಿ 242 ಶಾಸಕರ ಪೈಕಿ 161 ಮಂದಿ (ಶೇ. 67) ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ಇದೆ.

    ದೆಹಲಿ 70 ಶಾಸಕರ ಪೈಕಿ 44 (ಶೇ. 63), ಮಹಾರಾಷ್ಟ್ರ 284 ಎಂಎಲ್​ಎಗಳ ಪೈಕಿ 175 (ಶೇ.62) ತೆಲಂಗಾಣ 118 ಶಾಸಕರಲ್ಲಿ 72 (ಶೇ.61), ತಮಿಳುನಾಡು 224 ಎಂಎಲ್​ಎಗಳಲ್ಲಿ 134 ಮಂದಿ (ಶೇ. 60) ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಎಡಿಆರ್ ತಿಳಿಸಿದೆ.

    ಶಾಸಕರ ಆಸ್ತಿ ಮೌಲ್ಯದಲ್ಲಿ ಕರ್ನಾಟಕದ ಎಂಎಲ್​ಎಗಳು ಮೊದಲ ಸ್ಥಾನದಲ್ಲಿ ಇದ್ದಾರೆ. ಈ ರಾಜ್ಯದ ಶಾಸಕರ ಸರಾಸರಿ ಆಸ್ತಿ ಮೌಲ್ಯ 64.39 ಕೋಟಿ ರೂ. ನಂತರದ ಸ್ಥಾನದಲ್ಲಿ ಆಂಧ್ರ (28.24 ಕೋಟಿ ರೂ.), ಮಹಾರಾಷ್ಟ್ರ (23.51 ಕೋಟಿ ರೂ.) ಇವೆ. ಅತ್ಯಂತ ಕಡಿಮೆ ಆಸ್ತಿ ಮೌಲ್ಯದ ಶಾಸಕರನ್ನು ಹೊಂದಿ ರುವ ರಾಜ್ಯ ತ್ರಿಪುರಾ (1.59 ಕೋಟಿ ರೂ.).

    ಬೆಂಗಳೂರಿನ ಎಲ್ಲ ಆಸ್ತಿಗಳ ದಾಖಲೆ ಸಂಗ್ರಹಿಸಿ ಸ್ಕ್ಯಾನ್​ ಮಾಡಲಿದೆ ಸರ್ಕಾರ: ಉದ್ದೇಶ ಏನೆಂದು ತಿಳಿಸಿದ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts