More

    ಕರ್ತವ್ಯಲೋಪದ ವಿರುದ್ಧ ಕ್ರಿಮಿನಲ್ ಮೊಕದ್ದಮೆ

    ಚಿತ್ರದುರ್ಗ:ಪರಿಶಿಷ್ಟ ಜಾತಿ,ಪಂಗಡ ಹಾಗೂ ಹಿಂದುಳಿದ ವರ್ಗದವರ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲ ಹಾಸ್ಟೆಲ್‌ಗಳು ಸಹಕಾರಿಯಾಗಬೇಕು. ಯಾರಿ ಗೂ ತೊಂದರೆಯಾಗದಂತೆ ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸ ಬೇಕೆಂದು ಜಿಪಂ ಸಿಇಒ ಎಂ.ಎಸ್.ದಿವಾಕರ ಹಾಸ್ಟೆಲ್ ವಾರ್ಡ್ ನ್‌ಗಳಿಗೆ ತಾಕೀತು ಮಾಡಿದರು.
    ಜಿಪಂದಲ್ಲಿ ಗುರುವಾರ ಜಿಲ್ಲೆಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಗಳ ಹಾಸ್ಟೆಲ್ ವಾರ್ಡ್‌ನಗಳ ಸಭೆಯಲ್ಲಿ ಮಾತನಾಡಿ,ಈಚೆಗೆ ನಾನು ಭೇಟಿ ನೀಡಿದ್ದ ಅನೇಕ ಹಾಸ್ಟೆಲ್‌ಗಳಲ್ಲಿ ನ್ಯೂನತೆಗಳಿರುವುದನ್ನು ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಕೆಲವರನ್ನು ಸೇವೆಯಿಂದಲೂ ಅಮಾನತು ಮಾಡಲಾಗಿದೆ.
    ಸ್ವಚ್ಛತೆ,ಆಹಾರ ವಿತರಣೆ,ಕುಡಿಯುವ ನೀರಿನ ವ್ಯವಸ್ಥೆ,ತಟ್ಟೆ,ಲೋಟ,ಬೆಡ್,ಬೆಡ್‌ಶೀಟ್ ಇತ್ಯಾದಿ ಸವಲತ್ತುಗಳ ವಿತರಣೆ ಅಥವಾ ನಿ ರ್ವಹಣೆಯಲ್ಲಿ ಲೋಪಗಳಾದರೆ ತಕ್ಷಣ ವಾರ್ಡನ್ ವಿರುದ್ಧ ಶಿಸ್ತು ಕ್ರಮ ಜರುಗಿಸಿ,ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಆಯಾ ಇಲಾಖೆ ತಾಲೂಕು ಹಾಗೂ ಜಿಲ್ಲಾ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಜರುಗಿಸಲಾಗುವುದು. ಉತ್ತಮವಾಗಿ ಕೆಲಸ ಮಾಡುವ ವಾರ್ಡನ್‌ಗಳನ್ನು ಗೌರವಿಸುವುದಾಗಿ ಹೇಳಿದರು.
    ಜಿಪಂ ಡಿಎಸ್ ಡಾ.ರಂಗಸ್ವಾಮಿ,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts