More

    ದೇವಳ ಆವರಣ ಅಪವಿತ್ರಗೊಳಿಸಿದ ಕಿಡಿಗೇಡಿಗಳ ಬಂಧನ: ಹಣ ದೊರೆಯದಿದ್ದಾಗ ಮಲವಿಸರ್ಜಿಸಿ ವಿಕೃತಿ ಮೆರೆದರು

    ಮಂಗಳೂರು: ಜಿಲ್ಲೆಯ ವಿವಿಧ ದೇವಳಗಳಲ್ಲಿ ಕಳವು, ಕೊಣಾಜೆ ದೇವಸ್ಥಾನದಲ್ಲಿ ಆವರಣದಲ್ಲಿ ಮಲಮೂತ್ರ ವಿಸರ್ಜಿಸಿ ವಿಕೃತಿ ಮೆರೆದ ಇಬ್ಬರು ಧೂರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಪೊಲೀಸರ ತನಿಖೆ ದಿಕ್ಕು ತಪ್ಪಿಸಲು ಶ್ರದ್ಧಾಕೇಂದ್ರಗಳ ಮುಂಭಾಗ ಮಲ ಮೂತ್ರ ವಿಸರ್ಜಿಸಿರುವುದಾಗಿ ತನಿಖೆ ವೇಳೆ ಆರೋಪಿಗಳು ತಿಳಿಸಿದ್ದಾರೆ.
    ತಲಪಾಡಿ ಕೆ.ಸಿ.ರೋಡ್‌ನ ಕೊಮರಂಗಳ ಮನೆ ನಿವಾಸಿ ಮಹಮ್ಮದ್ ಸುಹೈಲ್(19) ಹಾಗೂ ತಲಪಾಡಿ ಕೆ.ಸಿ.ರೋಡಿನ ಪಿಲಿಕೂರು ಮನೆ ನಿವಾಸಿ ನಿಜಾಮುದ್ದೀನ್(21) ಬಂಧಿತರು.

    ಹಣ ಸಿಗದಿದ್ದಾಗ ಮಲವಿಸರ್ಜಿಸಿ ವಿಕೃತಿ: ಕಳೆದ ನವೆಂಬರ್‌ನಲ್ಲಿ ಕೊಣಾಜೆ ಮಲಾರಿನ ಅರಸು ಮುಂಡಿತ್ತಾಯ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು, ಜನವರಿ 15ರಂದು ಮುಂಜಾನೆ ಮಾಡೂರಿನಲ್ಲಿ ರಸ್ತೆ ಬದಿಯ ಕಾಣಿಕೆ ಡಬ್ಬಿ ಕಳವು, ಕುತ್ತಾರು ಆದಿಸ್ಥಳದ ಕೊರಗಜ್ಜ ದೈವಸ್ಥಾನದಲ್ಲಿ ಕಳವು ಯತ್ನ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸೇವಾ ಕೌಂಟರಿಗೆ ನುಗ್ಗಿ ಕಳವು ಯತ್ನ ಮಾಡಿದವರು. ಕೊಣಾಜೆ ಪೇರಂಡೆಯಲ್ಲಿರುವ ಗೋಪಾಲಕೃಷ್ಣ ಮಂದಿರಕ್ಕೆ ತೆರಳಿ ಅಲ್ಲಿ ಕೂಡಾ ಕಳವು ಯತ್ನ ಮಾಡಿ ಯಾವುದೇ ಸೊತ್ತು ಸಿಗದ ಹಿನ್ನೆಲೆಯಲ್ಲಿ ಭಗವಾಧ್ವಜಕ್ಕೆ ಮಲಮೂತ್ರವಿಸರ್ಜಿಸಿ ಅಪವಿತ್ರಗೊಳಿಸಿದ್ದರು. ಪೊಲೀಸರ ತನಿಖೆ ದಿಕ್ಕು ತಪ್ಪಿಸುವುದಕ್ಕಾಗಿ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ಮಲಮೂತ್ರ ವಿಸರ್ಜಿಸಿದ್ದೆವು, ಇಲ್ಲವಾದರೆ ನಮ್ಮತ್ತ ತನಿಖೆ ಕೇಂದ್ರೀಕೃತವಾಗಬಹುದು ಎಂಬ ಹೆದರಿಕೆಯಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಆಯುಕ್ತ ಶಶಿಕುಮಾರ್ ತಿಳಿಸಿದರು.

    ಎಂಎನ್‌ಜಿ-1ಫೆಬ್-ಸುಹೈಲ್
    ಎಂಎನ್‌ಜಿ-1ಫೆಬ್-ನಿಜಾಮುದ್ದೀನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts