More

    PHOTO | ರಕ್ಷಾ ಬಂಧನದ ಸಂಭ್ರಮದಲ್ಲಿ ಕ್ರೀಡಾತಾರೆಯರು

    ಬೆಂಗಳೂರು: ಸಹೋದರತ್ವದ ಸಂದೇಶವನ್ನು ಸಾರುವ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ದೇಶದ ಕ್ರೀಡಾತಾರೆಯರು ಸೋಮವಾರ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಜತೆಗೆ ಸಂಭ್ರಮ ಆಚರಿಸಿದರು. ಕ್ರಿಕೆಟ್ ತಾರೆಯರಾದ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಗೌತಮ್ ಗಂಭೀರ್, ಸುರೇಶ್ ರೈನಾ ಮತ್ತಿತರರು ರಕ್ಷಾ ಬಂಧನದ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಬಾರಿ ಕರೊನಾ ಹಾವಳಿಯಿಂದಾಗಿ ಹೆಚ್ಚಿವರಿಗೆ ಸಹೋದರಿಯರಿಂದ ರಕ್ಷೆ ಕಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಕೆಲವರು ಹಿಂದಿನ ನೆನಪುಗಳನ್ನೇ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಫ್ರೀಸ್ಟೈಲ್ ಫುಟ್‌ಬಾಲ್‌ನಲ್ಲಿ ಮಿಂಚಿದ ಬೆಂಗಳೂರಿನ ತೇಜಸ್

    ‘ನೆನಪಿನ ಲೋಕಕ್ಕೆ ಜಾರುತ್ತಿದ್ದೇನೆ. ಸಹೋದರಿಯರ ಜತೆ ಕಳೆದ ಕೆಲ ಅಪೂರ್ವ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಬಾಲ್ಯದ ದಿನಗಳಂತೆ ಈಗ ಹೆಚ್ಚಿನ ಸಮಯವನ್ನು ಜತೆಯಾಗಿ ಕಳೆಯಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ನಡುವಿನ ಬಾಂಧವ್ಯ ಈಗಲೂ ಅದೇ ರೀತಿ ಬಲವಾಗಿದೆ. ನನ್ನ ಎಲ್ಲ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು’ ಎಂದು ಯುವರಾಜ್ ಸಿಂಗ್ ಬರೆದುಕೊಂಡಿದ್ದಾರೆ. ಜತೆಗೆ ತಮ್ಮ ಸಹೋದರಿಯರ ಚಿತ್ರಗಳನ್ನು ಪ್ರಕಟಿಸಿದ್ದಾರೆ.

    ‘ಈ ವರ್ಷದ ರಕ್ಷಾ ಬಂಧನ ಸ್ವಲ್ಪ ಭಿನ್ನವಾದುದು. ತಾತ್ಕಾಲಿಕ ಅಂತರದ ನಡುವೆಯೂ ಸಹೋದರಿಯರ ಜತೆಗಿನ ನನ್ನ ಬಾಂಧವ್ಯ ಹಿಂದಿಗಿಂತ ಸದೃಢವಾಗಿದೆ. ಎಲ್ಲರೂ ರಕ್ಷಾ ಬಂಧನ ಕಟ್ಟಿಸಿಕೊಂಡಿದ್ದೀರಿ ಎಂಬ ಭರವಸೆ ಇದೆ’ ಎಂದು ಸಚಿನ್ ತೆಂಡುಲ್ಕರ್ ಟ್ವೀಟಿಸಿದ್ದಾರೆ. ಗೌತಮ್ ಗಂಭೀರ್, ಸುರೇಶ್ ರೈನಾ, ಇಶಾಂತ್ ಶರ್ಮ, ಶಿಖರ್ ಧವನ್ ಕೂಡ ಸಹೋದರಿಯರಿಂದ ರಕ್ಷಾ ಬಂಧನ ಕಟ್ಟಿಸಿಕೊಂಡ ಕ್ಷಣದ ಚಿತ್ರದೊಂದಿಗೆ ಸಂಭ್ರಮಿಸಿದ್ದಾರೆ. ಅಥ್ಲೆಟಿಕ್ಸ್ ಮಾಜಿ ತಾರೆ ಪಿಟಿ ಉಷಾ ಸಹಿತ ಕೆಲ ಮಹಿಳಾ ಕ್ರೀಡಾಪಟುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts