More

    ಭಾರತ ಟಿ-20 ವಿಶ್ವಕಪ್ ಗೆಲ್ಲಬೇಕಾದರೆ ಈ ಸ್ಫೋಟಕ ಅಲ್ರೌಂಡರ್ ಪಾತ್ರವೇ ಪ್ರಮುಖ: ದಿನೇಶ್ ಕಾರ್ತಿಕ್

    ಕರೊನಾ ಮಹಾಮಾರಿ ನಡುವೆಯೂ ಟಿ-20 ವಿಶ್ವಕಪ್​ ಆರಂಭಕ್ಕೆ ಐಸಿಸಿ ದಿನಾಂಕ ನಿಗದಿ ಮಾಡಿದ್ದು, ಇನ್ನು ಎರಡು ತಿಂಗಳು ಮಾತ್ರವೇ ಬಾಕಿಯಿದೆ. ಯುಎಇ ಮತ್ತು ಒಮನ್ ದೇಶಗಳಲ್ಲಿ ನಡೆಯುವ ಈ ಮಹತ್ವದ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎಲ್ಲಾ ದೇಶಗಳು ಸಕಲ ಸಿದ್ಧತೆ ನಡೆಸಿವೆ. ಇದರ ನಡುವೆ ಭಾರತ ತಂಡದ ಹಿರಿಯ ಬ್ಯಾಟ್ಸ್​​ಮನ್, ವಿಕೆಟ್ ಕೀಪರ್ ಹಾಗೂ ಕಾಮೆಂಟೇಟರ್ ದಿನೇಶ್ ಕಾರ್ತಿಕ್ ಭಾರತ ತಂಡ ಟ್ರೋಫಿ ಗೆಲ್ಲಬೇಕಾದರೆ ತಂಡಕ್ಕೆ ಈ ಆಟಗಾರನೇ ಪ್ರಮುಖ ಎಂದು ಓರ್ವ ಆಟಗಾರನ ಹೆಸರನ್ನು ಸೂಚಿಸಿದ್ದಾರೆ.

    36 ವರ್ಷದ ಡಿಕೆ ಹೀಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಟೀಮ್ ಇಂಡಿಯಾ ಸ್ಫೋಟಕ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರನಾಗಿರಲಿದ್ದಾರೆ ಎಂದು 2007 ಟಿ-20 ವಿಶ್ವಕಪ್ ವಿಜೇತ ತಂಡದ ಸದಸ್ಯ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

    ಅದರ ಜೊತೆ ವೆಸ್ಟ್ ಇಂಡೀಸ್ ತಂಡಕ್ಕು ಕೂಡ ಓರ್ವ ಆಟಗಾರ ನಿರ್ಣಾಯಕ ಪಾತ್ರ ವಹಿಸಲಿದ್ದಾನೆ ಎಂದು ಸ್ಫೋಟಕ ಆಲ್ರೌಂಡರ್ ನಿಕೋಲಸ್ ಪೂರನ್ ಹೆಸರನ್ನು ಸೂಚಿಸಿದ್ದಾರೆ. ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಟೂರ್ನಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

    ಅಫ್ಘಾನ್ ಕ್ರಿಕೆಟರ್ ಜೊತೆ ನಿಶ್ಚಿತಾರ್ಥಕ್ಕೆ ಮುಂದಾದ ನಟಿಗೆ ತಾಲಿಬಾನಿಗಳ ಶಾಕ್

    ಧರ್ಮಸ್ಥಳಕ್ಕೆ ಭೇಟಿ ನೀಡಿದ ‘ಬಿಗ್​ಬಾಸ್ ವಿನ್ನರ್’ ಮಂಜು ಪಾವಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts