More

    ಕೋಟಿ… ಕೋಟಿ ದೋಖಾ ಮಾಡಿದ ಮಾಜಿ ಕ್ರಿಕೆಟಿಗ ಅರೆಸ್ಟ್​

    ನವದೆಹಲಿ: ಐಪಿಎಸ್​ ಅಧಿಕಾರಿ, ಮುಂಬೈ ಇಂಡಿಯನ್ಸ್​ ತಂಡದ  ಆಟಗಾರ ಎಂದು ಹೀಗೆ ಪ್ರತಿ ಬಾರಿ ತನ್ನ ಗುರುತನ್ನು ಬದಲಿಸಿ ವಂಚಿಸುತ್ತಿದ್ದ 25 ವರ್ಷದ ಹರಿಯಾಣದ ಕ್ರಿಕೆಟಿಗ ಮೃಣಾಂಕ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಮೃಣಾಂಕ್ ಸಿಂಗ್ ಹರಿಯಾಣ ಮೂಲ. ಐಷಾರಾಮಿ ಜೀವನಶೈಲಿಯ ವ್ಯಾಮೋಹ ಹೊಂದಿದ್ದ ಈತ ಕಾಸು ಖರ್ಚು ಮಾಡದೇ ಸದಾ ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಭೋಜನ ಮಾಡುತ್ತಿದ್ದ ನಂತರ ಈತ ವಂಚನೆಗಳು ಬಯಲಿಗೆ ಬರುತ್ತಿದ್ದಂತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    2014ರಿಂದ 2018ರವರೆಗೆ ಮುಂಬೈ ಇಂಡಿಯನ್ಸ್‌ಗೆ ಈತ ಆಡಿದ್ದ. ಮುಂಬೈ ಇಂಡಿಯನ್ಸ್‌ ಐಪಿಎಲ್‌ ತಂಡದ ಆಟಗಾರನಾಗಿದ್ದ ಈತ ಈಗಲೂ ಅದರ ಆಟಗಾರನಂತೆ ಪೋಸ್ ನೀಡುತ್ತಿದ್ದ. ಅಂತಾರಾಷ್ಟ್ರೀಯ ಬ್ರಾಂಡ್‌ಗಳೊಂದಿಗೆ ವ್ಯವಹರಿಸಿದ್ದಾನೆ.  ಶ್ರೀಮಂತ ಮಹಿಳೆಯರ ಮೇಲೆ ಪ್ರಭಾವ ಬೀರುತ್ತಿದ್ದ. ದುಬಾರಿ ಪಂಚತಾರಾ ಹೋಟೆಲ್‌ಗಳಲ್ಲಿ ಬಿಲ್‌ಗಳನ್ನು ಪಾವತಿಸದೆ ಉಳಿದುಕೊಳ್ಳುತ್ತಿದ್ದ. ಸ್ಟಾರ್​​ ಕ್ರಿಕೆಟ್​ ಆಟಗಾರರಿಗೂ ಕೋಡಿ ಕೋಡಿ ದೋಖಾ ಮಾಡಿದ್ದಾನೆ.

    2022ರಲ್ಲಿ ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಮೃಣಾಂಕ್ ಸಿಂಗ್ ಒಂದು ವಾರ ತಂಗಿದ್ದ. ₹5.53 ಲಕ್ಷ ಬಿಲ್ ಹಣವನ್ನು ಅಡಿಡಾಸ್ ಕಂಪನಿ ಪಾವತಿಸುವುದಾಗಿ ಸಿಬ್ಬಂದಿಗೆ ತಿಳಿಸಿದ್ದ.  ಬಾಕಿ ಪಾವತಿಸಲು ಹೋಟೆಲ್ ಹಲವಾರು ಬಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಇವನು ಫೋನ್ ಸ್ವಿಚ್ ಆಫ್ ಮಾಡಿ ಕಣ್ಮರೆಯಾಗಿದ್ದ. ಹೋಟೆಲ್‌ನವರು ಪೊಲೀಸ್‌ ದೂರು ನೀಡಿದ್ದರು.

    ಪೊಲೀಸರು ತನ್ನ ಹಿಂದೆ ಬಿದ್ದಿರುವುದು ಗೊತ್ತಾಗಿ ತನ್ನ ಫೋನ್ ಅನ್ನು ಆಫ್ ಮಾಡಿದ್ದ. ತಾನು ದುಬೈನಲ್ಲಿ ನೆಲೆಸಿದ್ದೇನೆ ಎಂದು ಪರಿಚಯಸ್ಥರನ್ನು ನಂಬಿಸಿದ್ದ. ಈತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಕೆಲ ಹೋಟೆಲ್‌ಗಳಲ್ಲಿ, ಮೃಣಾಂಕ್ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯಾಗಿ ಪೋಸ್ ನೀಡಿದರೆ, ಇತರರಲ್ಲಿ ಯಶಸ್ವಿ ಕ್ರಿಕೆಟಿಗ ಎಂದು ಪರಿಚಯಿಸಿಕೊಳ್ಳುತ್ತಿದ್ದನು. ಘಟನೆ ನಡೆದ ಸುಮಾರು ಒಂದು ವರ್ಷದ ನಂತರ ಡಿಸೆಂಬರ್ 25ರಂದು ಹಾಂಗ್ ಕಾಂಗ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ನಂತರ ಈತನ ವಿವಾರಣೆ ಮಾಡಿದಾಗ ಕೆಲವು ಸತ್ಯ ಬಾಯಿಬಿಟ್ಟಿದ್ದಾನೆ.

    2020- 2021ರಲ್ಲಿ ಕ್ರಿಕೆಟಿಗ ರಿಷಬ್‌ ಪಂತ್ ಅವರಿಗೆ ₹1.63 ಕೋಟಿ ವಂಚಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇವನ ಇತರ ಬಲಿಪಶುಗಳಲ್ಲಿ ಕ್ಯಾಬ್ ಡ್ರೈವರ್‌ಗಳು, ಯುವತಿಯರು, ಬಾರ್‌ಗಳು, ರೆಸ್ಟೋರೆಂಟ್‌ಗಳು ಇತ್ಯಾದಿ ಸೇರಿವೆ. 2022ರಲ್ಲಿ,  ರಿಷಭ್ ಪಂತ್ ಬಳಿ ಮೃಣಾಂಕ್ ತಾನು ಐಷಾರಾಮಿ ವಸ್ತುಗಳ ವ್ಯವಹಾರದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದು, ಅತ್ಯಂತ ಸಮಂಜಸವಾದ ವೆಚ್ಚದಲ್ಲಿ ಖರೀದಿಸಬಹುದು ಎಂದು ಪಂತ್ ಗೆ ಹೇಳಿದ್ದ. ನಂಬಿದ್ದ ಪಂತ್ ದುಬಾರಿ ವಾಚ್‌ಗಳನ್ನು ಖರೀದಿಸಲು ಮೃಣಾಂಕ್‌ಗೆ ಗಣನೀಯ ಪ್ರಮಾಣದ ಹಣವನ್ನು ವರ್ಗಾಯಿಸಿದ್ದರು. ಮೃಣಾಂಕ್ ಹೇಳಿದ ವಸ್ತುಗಳನ್ನು ನೀಡದೆ ಇದ್ದಾಗ, ಪಂತ್ ಅವರು ಲೀಗಲ್ ನೋಟಿಸ್ ನೀಡಿದರು. ಈ ವೇಳೆ ಮೃಣಾಂಕ್ 1.63 ಕೋಟಿ ರೂ. ಚೆಕ್ ಅನ್ನು ನೀಡಿದ್ದ, ಆದರೆ ಪಂತ್ ಅದನ್ನು ನಗದು ಮಾಡಲು ಪ್ರಯತ್ನಿಸಿದಾಗ, ಸಾಕಷ್ಟು ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು.

    2014 ರಿಂದ 2018 ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದೇನೆ ಎಂದು ತಿಳಿಸಿದ್ದಾನೆ. ಆದರೆ ಐಪಿಎಲ್ ಆಟಗಾರರ ಪಟ್ಟಿಯಲ್ಲಿ ಎಲ್ಲೂ ಮೃಣಾಂಕ್ ಸಿಂಗ್ ಹೆಸರು ಕಾಣಿಸಿಕೊಂಡಿಲ್ಲ. ಆತನ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    success story; 10 ರೂ. ಸಂಭಾವನೆ ಪಡೆದಿದ್ದ ವ್ಯಕ್ತಿ ಇದೀಗ 30 ಕೋಟಿ ರೂ. ಪಡೆಯುವ ಸ್ಟಾರ್​ ಹೀರೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts