More

    ಪಾಕಿಸ್ತಾನದ ಕ್ರಿಕೆಟ್ ಮೈದಾನದ ಮೇಲೆ ಗುಂಡಿನ ದಾಳಿ ನಡೆಸಿದ್ರು ಉಗ್ರರು

    ಇಸ್ಲಾಮಾಬಾದ್​: ಪಾಕಿಸ್ತಾನದ ಖೈಬರ್​ ಪಖ್ತುನ್​ಖ್ವಾ ಪ್ರಾಂತ್ಯದ ಕೋಹಟ್ ಡಿವಿಷನ್​ನಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗಲೇ ಉಗ್ರರು ಗುಂಡಿನ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ವೀಕ್ಷಕರು ಮತ್ತು ಆಟಗಾರರು ಉಗ್ರ ದಾಳಿಯಿಂದ ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯವಿಲ್ಲದೇ ಬಚಾವ್ ಆಗಿದ್ದಾರೆ.

    ಶುಕ್ರವಾರದ ಈ ದಾಳಿ ಘಟನೆ 2009ರಲ್ಲಿ ಶ್ರೀಲಂಕಾ ಟೀಮ್​ನ ಬಸ್​ ಮೇಲೆ ನಡೆದ ಉಗ್ರ ದಾಳಿಯನ್ನು ಮತ್ತೊಮ್ಮೆ ನೆನಪಿಸಿದೆ. ಕ್ರಿಕೆಟ್ ಪಂದ್ಯಗಳನ್ನು ಆಡುವುದಕ್ಕೆ ಪಾಕಿಸ್ತಾನ ಸುರಕ್ಷಿತ ದೇಶ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳುತ್ತ ಬಂದಿದ್ದು, ವೆಸ್ಟ್​ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶದಂತಹ ತಂಡಗಳು ಮತ್ತೆ ಪಾಕ್ ಪ್ರವಾಸ ಆರಂಭಿಸಿದ್ದವು. ಆದರೆ ಈ ದಾಳಿ ಈಗ ಮತ್ತೊಮ್ಮೆ ಪಾಕಿಸ್ತಾನ ಸುರಕ್ಷಿತವಲ್ಲ ಎಂಬುದನ್ನು ಸಾಬೀತು ಮಾಡಿದೆ.

    ಇದನ್ನೂ ಓದಿ: ಮನೆ ಬಾಗಿಲ ತೆರೆದು ಬೆಚ್ಚಿ ಬಿದ್ರು ಪಳನಿಯ ಜನ!

    ದ ಡೇಲಿ ಸ್ಟಾರ್ ವರದಿ ಪ್ರಕಾರ, ಕೋವಿಡ್​ 19 ಸೋಂಕು ಇದ್ದಾಗ್ಯೂ, ಓರ್ಕಝೈ ಜಿಲ್ಲೆಯ ಇಸ್ಮಾಯಲ್​ಝೈ ತಾಲೂಕಿನ ದ್ರಾದರ್​ ಮಮಝೈ ಪ್ರದೇಶದಲ್ಲಿ ಆಯೋಜಿತಗೊಂಡಿದ್ದ ಅಮ್ನ್​ ಕ್ರಿಕೆಟ್​ ಪಂದ್ಯಾವಳಿಯ ಫೈನಲ್ ಮ್ಯಾಚ್​ ನಡೆಯುತ್ತಿತ್ತು. ಸಾಕಷ್ಟು ಸಂಖ್ಯೆಯ ವೀಕ್ಷಕರೂ ಅಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ರಾಜಕೀಯ ನಾಯಕರು, ಕಾರ್ಯಕರ್ತರೂ ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿದ್ದರು. ಪಂದ್ಯ ಆರಂಭವಾಗಿ ಸ್ವಲ್ಪ ಹೊತ್ತಿನಲ್ಲೇ ಸಮೀಪದ ಬೆಟ್ಟ ಪ್ರದೇಶದಿಂದ ಉಗ್ರರು ಗುಂಡಿನ ದಾಳಿ ಶುರುಮಾಡಿದ್ದರು. ಆ ಕ್ಷಣವೇ ಪಂದ್ಯವೂ ನಿಂತುಹೋಗಿದ್ದು. ಎಲ್ಲರೂ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದರು.

    ಇದನ್ನೂ ಓದಿ: PHOTOS|ಹಂದಿಯನ್ನು ಬೆತ್ತಲೆಯಾಗಿ ಬೆನ್ನಟ್ಟಿದ ವ್ಯಕ್ತಿ: ಹಳದಿ ಬಣ್ಣದ ಬ್ಯಾಗ್​ನಲ್ಲಿ ಅಂಥದ್ದೇನಿದೆ?

    ಆ ಭಾಗದಲ್ಲಿ ಕೆಲವು ಉಗ್ರರು ಇರುವುದನ್ನು ಖಚಿತ ಪಡಿಸಿರುವ ಪೊಲೀಸರು, ದಾಳಿಯಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಹೇಳಿದರು. ಆದಾಗ್ಯೂ, ಉಗ್ರ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)

    ಹಿಂದು ಮಹಾಸಾಗರದಲ್ಲಿ ನೌಕಾ ನಿಯೋಜನೆ ಹೆಚ್ಚಿಸಿದ ಇಂಡಿಯನ್ ನೇವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts