More

    ಮೂರು ಮೈದಾನಗಳಲ್ಲಿ ಕ್ರಿಕೆಟ್ ಕಲರವ

    ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ ನಿಮಿತ್ತ ಅಭಿಮಾನಿ ಬಳಗ ಹಮ್ಮಿಕೊಂಡಿರುವ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕ ಕ್ರಿಕೆಟ್ ಕಪ್-2023ರ ಭಾನುವಾರದ ಪಂದ್ಯದಲ್ಲಿ ಗುಲ್ಬರ್ಗ ಬಾಕ್ಸ್ ಕ್ರಿಕೆಟ್ ಎಕ್ಸ್1, ಕೆಎಸ್‌ಐಎಸ್‌ಎಫ್ ಏರ್‌ಪೋರ್ಟ್ ಇಲೆವನ್ ಕಲಬುರಗಿ, ಕೋಕಿಲಾ ಪರಮೇಶ್ವರಿ ಟೆಂಪಲ್ ಬಾಯ್ಸ್, ವಿಂಗ್ಸ್, ಲಕ್ಕಿ ಸಿ ಚಿತ್ತಾಪುರ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ, ಕಿಚ್ಚ ಬಾಯ್ಸ್ ದೇವಲಗಾಣಗಾಪುರ, ಭೀಮಶಕ್ತಿ ಬ್ಲೂ ಬಾಯ್ಸ್ ಆಶ್ರಯ ಕಾಲನಿ, ಫರಹತಾಬಾದ್ ಫೈಟರ್, ರಾಯಲ್ ವಾರಿಯರ್ಸ್, ಮಾತಾ ರಾಣಿ, ಪಿಕೆ ಬಾಸ್ ಕಣಸೂರು ತಂಡಗಳು ಗೆಲುವಿನ ನಗೆ ಬೀರಿವೆ.

    ನಿಗದಿತ 8 ಓವರ್‌ಗಳ ಟೂರ್ನಿ ಇದಾಗಿದ್ದು, ಎನ್‌ವಿ ಮೈದಾನ, ಎಂಎಸ್‌ಕೆ ಮಿಲ್ ಗ್ರೌಂಡ್, ಪೀರ್ ಬೆಂಗಾಲಿ ಗ್ರೌಂಡ್‌ನಲ್ಲಿ ಮ್ಯಾಚ್‌ಗಳನ್ನು ಹಮ್ಮಿಕೊಳ್ಳಲಾಗಿತ್ತು. ಎನ್‌ವಿ ಮೈದಾನದಲ್ಲಿ ಬೆಳಗ್ಗೆ ನಡೆದ ಗುಲ್ಗರ್ಗ ಬಾಕ್ಸ್ ಎಕ್ಸ್1 ಹಾಗೂ ರಾಯಲ್ ಕ್ರಿಕೆಟ್ ಪಂದ್ಯದಲ್ಲಿ ಗುಲ್ಬರ್ಗ 38 ರನ್‌ಗಳ ಅಂತರದಿAದ ಗೆಲುವು ಸಾಧಿಸಿತು. ಮಧ್ಯಾಹ್ನ ಜರುಗಿದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ- ಅಂಬಿಗರ ಚೌಡಯ್ಯ ಕ್ರಿಕೆಟ್ ಕ್ಲಬ್ ಜೇವರ್ಗಿ ಮ್ಯಾಚ್‌ನಲ್ಲಿ ಶ್ರೀ ನಿಜಶರಣ ತಂಡ 20 ರನ್‌ಗಳಿಂದ ಗೆದ್ದು ಬೀಗಿತು. ಮೂರನೇ ಮ್ಯಾಚ್‌ನಲ್ಲಿ ಭೀಮಶಕ್ತಿ ಬ್ಲುÈ ಬಾಯ್ಸ್ ಆಶ್ರಯ ಕಾಲನಿ- ಬೆಡಸೂರ ಪಿಕೆ ಫ್ಯಾನ್ಸ್ ಮಧ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭೀಮಶಕ್ತಿ ಟೀಮ್ ಬರೋಬ್ಬರಿ 64 ರನ್‌ಗಳ ಅಂತರದಿAದ ಗೆದ್ದಿತು. ನಾಲ್ಕನೆ ಪಂದ್ಯದಲ್ಲಿ ಮಾತಾ ರಾಣಿ- ಭೀಮಾ ಸುಲ್ತಾನ ಫೈಟ್ ಮಾಡಿದವು. ಸಂಘಟಿತ ಹೋರಾಟದಿಂದ ಮಾತಾ ರಾಣಿ 37 ರನ್ ಅಂತದಿAದ ಗೆಲುವು ಸಾಧಿಸಿತು.

    ಪೀರ್ ಬೆಂಗಾಲಿ ಮೈದಾನದಲ್ಲಿ ಬೆಳಗ್ಗೆ ನಡೆದ ರಾಜರಾಜೇಶ್ವರಿ ನಗರ ಕೋಟನೂರು (ಡಿ)- ಕೋಕಿಲ ಪರಮೇಶ್ವರಿ ಟೆಂಪಲ್ ಬಾಯ್ಸ್ ಮ್ಯಾಚ್‌ನಲ್ಲಿ ಕೋಕಿಲ ಪರಮೇಶ್ವರಿ ಟೀಮ್ 1 ವಿಕೆಟ್‌ನಿಂದ ರೋಚಕ ಜಯ ದಾಖಲಿಸಿತು. ಮಧ್ಯಾಹ್ನದ ಮ್ಯಾಚ್‌ನಲ್ಲಿ ಶಿವಾನಂದ ಹೊನಗುಂಡಿ ಬಾಯ್ಸ್ ಹೊನಗುಂಟಾ- ವಿಂಗ್ಸ್ ಮಧ್ಯ ಕಾದಾಡಿದವು. ಕೊನೆಗೆ ವಿಂಗ್ಸ್ 7 ವಿಕೆಟ್ ಅಂತರದಿAದ ಗೆಲುವು ಸಾಧಿಸಿತು. ಮೂರನೇ ಮ್ಯಾಚ್‌ನಲ್ಲಿ ಸ್ಮಾರ‍್ಸ್- ಫರಹತಾಬಾದ್ ಫೈಟರ್ ಮಧ್ಯೆ ಜರುಗಿತು. ಫೈಟರ್ 6 ವಿಕೆಟ್‌ನಿಂದ ಗೆಲುವು ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ಸಹರಾ- ಪಿಕೆ ಬಾಸ್ ಕಣಸೂರ ಗೆಲುವಿಗಾಗಿ ಕಾದಾಟ ನಡೆಸಿದವು. ಕಣಸೂರು ಟೀಮ್ 7 ವಿಕೆಟ್ ಅಂತರದಿAದ ಗೆದ್ದಿತು.

    ಎಂಎಸ್‌ಕೆ ಮಿಲ್ ಮೈದಾನದಲ್ಲಿ ಕೆಎಸ್‌ಐಎಸ್‌ಎಫ್ ಏರ್‌ಪೋರ್ಟ್ ಇಲೆವನ್ ಕಲಬುರಗಿ- ಆರ್ಯ ಸುಪರ್ ಕಿಂಗ್ ಮಧ್ಯೆ ನಡೆದ ಮೊದಲ ಪಂದ್ಯ ಸಾಕಷ್ಟು ರೋಚಕವಾಗಿ ನಡೆಯಿತು. ಏರ್‌ಪೋರ್ಟ್ ಇಲೆವನ್ 50 ರನ್‌ಗಳಿಂದ ಗೆಲುವು ಸಾಧಿಸಿತು. ಮಧ್ಯಾಹ್ನದ ಮ್ಯಾಚ್‌ನಲ್ಲಿ ಬಿಲಗುಂದಿ ಬಾಯ್ಸ್- ಲಕ್ಕಿ ಸಿ ಚಿತ್ತಾಪುರ ಸೆಣಸಾಡಿದವು. ಚಿತ್ತಾಪುರ 6 ವಿಕೆಟ್‌ಗಳಿಂದ ಗೆದ್ದಿತು. ಮೂರನೇ ಮ್ಯಾಚ್‌ನಲ್ಲಿ ಕಿಚ್ಚ ಬಾಯ್ಸ್ ದೇವಲಗಾಣಗಾಪುರ- ಪರ್ಪಲ್ ವಾರಿಯರ್ಸ್ ಗೆಲುವಿಗಾಗಿ ಕಾದಾಟ ನಡೆಸಿದವು. ಕಿಚ್ಚಾ ಬಾಯ್ಸ್ 8 ರನ್‌ಗಳಿಂದ ಗೆಲುವು ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ರಾಯಲ್ ವಾರಿಯರ್ಸ್- ಜೈಶ್ರೀರಾಮ ಯಡ್ರಾಮಿ ತಾಂಡಾ ಸೆಣಸಾಡಿದವು. ರಾಯಲ್ ವಾರಿಯರ್ಸ್ 27 ರನ್‌ಗಳಿಂದ ಗೆದ್ದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts