More

    ಶ್ರೀ ಕೃಷ್ಣ ಯುವಕ ಸಂಘದಿಂದ ಕ್ರಿಕೆಟ್

    ಮಡಿಕೇರಿ:

    ಭಾಗಮಂಡಲ ಸಮೀಪದ ಅಯ್ಯಂಗೇರಿಯ ಶ್ರೀ ಕೃಷ್ಣ ಯುವಕ ಸಂಘ ವತಿಯಿಂದ ೨೦೨೪ನೇ ಸಾಲಿನ ೪ನೇ ವರ್ಷದ ಗೊಲ್ಲ ಜನಾಂಗ ಬಾಂಧವರ ನಡುವಿನ ಕ್ರಿಕೆಟ್ ಕ್ರೀಡಾಕೂಟವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಭಾಗಮಂಡಲದ ಶ್ರೀ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ಜನಾಂಗದ ಪ್ರಮುಖರಾದ ಆಚೀರ ಭೀಮಯ್ಯ ಉದ್ಘಾಟಿಸಿದರು. ೧೦ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಆತಿಥೇಯ ಶ್ರೀ ಕೃಷ್ಣ ಯೂತ್ ಕ್ಲಬ್ ಅಯ್ಯಂಗೇರಿ ತಂಡ ಮತ್ತು ಎಲೈಟ್ ಬೆಂಗ್ನಾಡ್ ತಂಡ ಫೈನಲ್ ಪ್ರವೇಶಿಸಿ ಅಂತಿಮವಾಗಿ ಶ್ರೀ ಕೃಷ್ಣ ಯೂತ್ ಕ್ಲಬ್ ಅಯ್ಯಂಗೇರಿ ತಂಡ ಚಾಂಪಿಯನ್ ಪಟ್ಟ ಗಳಿಸಿತು. ಎಲೈಟ್ ಬೆಂಗ್ನಾಡ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

    ಇದೇ ಸಂದರ್ಭದಲ್ಲಿ ಜನಾಂಗದ ಪ್ರಾಥಮಿಕ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆ, ಜನಾಂಗದ ಮಹಿಳೆಯರಿಗೆ ಮ್ಯಾಜಿಕ್ ಬಾಕ್ಸ್ ಮತ್ತು ಪುರುಷರಿಗೆ ಹಗ್ಗಜಗ್ಗಾಟ ಕ್ರೀಡೆ ಆಯೋಜಿಸಲಾಗಿತ್ತು. ಕಾಫಿ ಬೆಳೆಗಾರ ತೊತ್ತಿಯಂಡ ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಆಚೀರ ಭೀಮಯ್ಯ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಜನಾಂಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಒಳ್ಳೆಯ ಗುಣ ಮತ್ತು ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು. ತೊತ್ತಿಯಂಡ ಜೀವನ್ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದಲ್ಲದೆ ಇನ್ನಿತ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ನಡೆಸುವ ನಿಟ್ಟಿನಲ್ಲಿ ಸದಾ ಪ್ರಯತ್ನಪಡಬೇಕು ಎಂದರು.

    ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನಾಂಗದ ಸಾಧಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಿದ್ದಿಯಂಡ ಮಂಜು ಪಳಂಗಪ್ಪ, ಚಿಂಗಂಡ ಪ್ರತಿನ್, ಬಿದ್ದಿಯಂಡ ಗೀತಾ, ಉದ್ದುಮಾಡಂಡ ಪ್ರತೀಶ್, ಅಯ್ಯಂಗೇರಿ ಶ್ರೀ ಚಿನ್ನತಪ್ಪ ದೇವಸ್ಥಾನದ ದೇವತಕ್ಕ ಬಿದ್ದಿಯಂಡ ಸುಭಾಷ್, ಕೊಡಗು ಜಿಲ್ಲಾ ಗೊಲ್ಲ ಸಮಾಜ ಸದಸ್ಯ ಚೋಕಿರ ಭೀಮಯ್ಯ, ಆಚೀರ ಲವ ಚಂಗಪ್ಪ, ಕಡವಡಿರ ಸಂತೋಷ್, ಬಿದ್ದಿಯಂಡ ಪಳಂಗಪ್ಪ, ಅರೆಯಂಡ ಜಯಂತಿ,ಅರೆಯಂಡ ಕಾಳಪ್ಪ, ಬಿದ್ದಿಯಂಡ ಅಭಿಷೇಕ್, ಬಿದ್ದಿಯಂದ ದೀಕ್ಷಿತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts