More

    ಆಪರೇಷನ್ ಕಮಲ ಅನ್ನೋದು ಕೈ ನಾಯಕರ ಸೃಷ್ಟಿ: ಬಿ.ಶ್ರೀರಾಮುಲು

    ಹೊಸಪೇಟೆ: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶ ಇರುವಾಗ ಆಪರೇಷನ್ ಕಮಲದ ಅಗತ್ಯವೇ ಇಲ್ಲ. ಇದು ಕಾಂಗ್ರೆಸ್ ಶಾಸಕರ ಸೃಷ್ಟಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ನಡೆದ ಆಪರೇಷನ್ ಕಮಲದ ಪರಿಸ್ಥಿತಿ ಬೇರೆಯಿತ್ತು. ಆದರೆ, ಈಗ ೧೩೫ ಶಾಸಕರೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ಐದು ವರ್ಷಗಳ ಕಾಲ ಗಟ್ಟಿಯಾಗಿ ಇರಲಿ. ಚುನಾವಣೆ ವೇಳೆ ಮತದಾರರಿಗೆ ನೀರುವ ಭರವಸೆಯಂತೆ ಎಲ್ಲ ಗ್ಯಾರೆಂಟಿಗಳನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರಿರುವುದರಿಂದ ಯಾವೊಬ್ಬ ಶಾಸಕನಿಗೂ ಅನುದಾನ ಸಿಗುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಷ್ಟು ದಿನಗಳು ಕಳೆದರೂ, ಅಭಿವೃದ್ಧಿ ಕಾರ್ಯಕ್ಕೆ ಒಂದು ರೂಪಾಯಿ ಕೂಡಾ ಬಿಡುಗಡೆಯಾಗಿಲ್ಲ. ಹೀಗಾಗಿ ಜನರ ದಿಕ್ಕು ತಪ್ಪಿಸಲು ಕೆಲ ಶಾಸಕರು ಆಪರೇಷನ್ ಕಮಲ ಪ್ರಸ್ತಾಪಿಸುತ್ತಿದ್ದಾರೆ. ಗುತ್ತಿಗೆದಾರರಿಂದ ನೂರಾರು ಕೋಟಿ ರೂ. ಪಡೆದು, ಐಟಿ ದಾಳಿಯಲ್ಲಿ ಸಿಲುಕಿಕೊಂಡಾಗಲೂ ಜನರ ದಿಕ್ಕು ತಪ್ಪಿಸಲು ತಮ್ಮದೇ ಶಾಸಕರ ಮೂಲಕ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಹೇಳಿಕೆ ಕೊಡಿಸುತ್ತಿದ್ದಾರೆ. ಅಂತಹ ಶಾಸಕರಿಗೆ ರಾಜಕೀಯದ ಗಂಧವೇ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಈ ಹಿಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣ ಇತ್ತು. ಈಗ ಅವರಿಬ್ಬರೊಂದಿಗೆ ಡಾ.ಪರಮೇಶ್ವರ ಬಣ, ಬಿ.ಕೆ.ಹರಿಪ್ರಸಾದ್ ಮತ್ತಿತರರ ಬಣಗಳಾಗಿವೆ. ಮುಂಚೆ ಕಾಂಗ್ರೆಸ್ ೨ ಬಾಗಿಲು ಎನ್ನಲಾಗುತ್ತಿತ್ತು. ಈಗದು ಆರು ಬಾಗಿಲು ಆಗಿವೆ ಎಂದು ಲೇವಡಿ ಮಾಡಿದರು.

    ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರು ಮಾಡುತ್ತಿದ್ದ ಶೇ.೪೦ ಆರೋಪ ಶುದ್ಧ ಸುಳ್ಳು. ಈಗ ಅಧಿಕಾರದಲ್ಲಿರುವುದು ೬೦ ಪರ್ಸೆಮಟ್ ಸರ್ಕಾರ. ತಪ್ಪಿತಸ್ಥರು ಜೈಲಿಗೆ ಹೋಗುವುದು ಗ್ಯಾರೆಂಟಿ ಎಂದರು.

    ಆಡಳಿತ ನಡೆಸಲು ಸ್ಪಷ್ಟ ಜನಾದೇಶ ಇರುವಾಗ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಗ್ಯಾರೆಂಟಿಗಳ ಮೇಲೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕು. ಗ್ಯಾರೆಂಟಿ ಮೇಲೆ ಅಧಿಕಾರಕ್ಕೆ ಬಂದಿರುವ ಪಂಜಾಬ್, ರಾಜಸ್ಥಾನ ಹಾಗೂ ದೆಹಲಿಯ ಪರಿಸ್ಥಿತಿ ಮುಂದೆ ಕರ್ನಾಟಕಕ್ಕೂ ವಕ್ಕರಿಲಸಿದೆ. ಜನರಿಗೂ ಸತ್ಯ ಗೊತ್ತಾಗುತ್ತದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪುನಃ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕರ ಆಯ್ಕೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ನವರಾತ್ರಿ, ದಸರಾ ನಿಮಿತ್ತ ಕೊಂಚ ವಿಳಂಬವಾಗಿದೆ ಎಂದ ಅವರು, ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆಯಿಂದ ಡಿ.ಕೆ.ಶಿವಕುಮಾರ್ ಅವರ ಬೇನಾಮಿ ಹೆಸರಲ್ಲಿರುವ ಜಮೀನುಗಳ ಬೆಲೆ ದುಪ್ಪಟ್ಟಾಗುತ್ತದೆ. ಆದರೆ, ವಿಜಯನಗರವನ್ನೂ ಬಳ್ಳಾರಿಗೆ ಸೇರಿಸುತ್ತೇವೆ ಎಂಬ ಸಚಿವ ನಾಗೇಂದ್ರ ಹೇಳಿಕೆ ಅವೈಜ್ಞಾನಿಕ, ಬಾಲಿಷತನ ಎಂದು ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts