More

    ಜನಸ್ನೇಹಿ ಸಂಚಾರ ವ್ಯವಸ್ಥೆ ರಚಿಸಿ

    ಚಾಮರಾಜನಗರ: ಜಿಲ್ಲೆಯಲ್ಲಿ ಜನಸ್ನೇಹಿ ಸಂಚಾರ ವ್ಯವಸ್ಥೆ ರಚಿಸಬೇಕಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಹಾಲೇಖಪಾಲರ ತಪಾಸಣಾ ತಂಡದೊಂದಿಗೆ ಪಾಲುದಾರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ರಸ್ತೆ ಸುರಕ್ಷತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾತನಾಡಿದರು.
    ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವಲ್ಲಿ ಸಂಬಂಧಪಟ್ಟ ಇಲಾಖೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗಾಗಿ ರಸ್ತೆ ಅವಘಡಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಜನಸ್ನೇಹಿ ಸಂಚಾರ ವ್ಯವಸ್ಥೆ ರಚಿಸಬೇಕು. ಅಪಘಾತಗಳನ್ನು ನಿಯಂತ್ರಿಸಲು ಗುಣಮಟ್ಟದ ರಸ್ತೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಉತ್ತಮ ರಸ್ತೆಗಳ ನಿರ್ಮಾಣ ಮೊದಲ ಆದ್ಯತೆಯಾಗಬೇಕು ಎಂದರು.

    ಮಹಾಲೇಖಪಾಲರ ಅಡಿಟ್ ತಂಡ ಜಿಲ್ಲೆಯಲ್ಲಿ ಅಪಘಾತದ ಸಂಭವನೀಯ ಸ್ಥಳ(ಬ್ಯಾೃಕ್ ಸ್ಪಾಟ್)ಗಳನ್ನು ಈಗಾಗಲೇ ಗುರುತಿಸಿದೆ. ಹೆದ್ದಾರಿಗಳಲ್ಲಿನ ಅಪಘಾತ ವಲಯಗಳನ್ನು ಗುರುತಿಸಿ, ಅಲ್ಲಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಡುಬ್ಬಗಳನ್ನು ನಿರ್ಮಿಸಬೇಕು. ರಾಜ್ಯ ಹೆದ್ದಾರಿಗೆ ಸೇರಿರುವ ಪ್ರಮುಖ ಜಿಲ್ಲಾ ರಸ್ತೆಗಳು ಸಿಂಗಲ್ ಲೇನ್ ರಸ್ತೆಗಳಾಗಿದ್ದು, ಅವುಗಳನ್ನು ವಿಸ್ತರಿಸಬೇಕು ಎಂದು ತಿಳಿಸಿದರು.

    ರಸ್ತೆ ತಿರುವು ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಗೂ ಸೂಚನಾ ಲಕಗಳನ್ನು ಅಳವಡಿಸಬೇಕು. ಹಳ್ಳ-ಕೊಳ್ಳಗಳಿಂದ ಕೂಡಿರುವ ರಸ್ತೆಗೆ ತಡೆಗೋಡೆಗಳನ್ನು ನಿರ್ಮಿಸಬೇಕು. ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಯ ಎರಡೂ ಕಡೆ ವೈಟ್‌ಲೈನ್ ಹಾಕಬೇಕು. ಇದರಿಂದ ಸುರಕ್ಷಿತ ರಸ್ತೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸೂಚನೆ ನೀಡಿದರು.

    ಮಹಾಲೇಖಪಾಲರ ಕಚೇರಿಯ ಹಿರಿಯ ತಪಾಸಣಾ ಅಧಿಕಾರಿ ಬಿ.ವಿ.ಹರೀಶ್, ಉಮೇಶ್, ಸಹಾಯಕ ತಪಾಸಣಾ ಅಧಿಕಾರಿ ದತ್ತ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಸುರೇಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts