More

    ಪಂಚರತ್ನ ತಂಡ ರಚಿಸಿ ಕಾರ್ಯ ಪ್ರವೃತ್ತರಾಗಿ

    ದಾಂಡೇಲಿ: ನೂತನವಾಗಿ ರಚಿಸಲ್ಪಟ್ಟ ದಾಂಡೇಲಿ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬಹುಮತದಿಂದ ಆರಿಸಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಪಕ್ಷದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಪಂ ಚುನಾವಣೆಯ ಪ್ರತಿಯೊಂದು ಬೂತ್​ಗೆ ಐವರು ಕಾರ್ಯಕರ್ತರ ಪಂಚರತ್ನ ತಂಡ ರಚಿಸಿ, ಮತದಾರ ಪಟ್ಟಿಯ ಪ್ರತಿ 30 ಮತದಾರರನ್ನು ಸಂರ್ಪಸಿ ಮತ ಯಾಚಿಸಲು ಪೇಜ್ ಪ್ರಮುಖರನ್ನು ನೇಮಿಸಿ ಕಾರ್ಯ ನಿರ್ವಹಿಸಬೇಕು ಎಂದರು.

    ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ, ಮಾಜಿ ಶಾಸಕ ಸುನೀಲ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಪ್ರತಿ ಗ್ರಾಪಂ ಮಟ್ಟದಲ್ಲಿ ಮತದಾರರಿಗೆ ತಿಳಿವಳಿಕೆ ನೀಡಬೇಕು ಎಂದರು.

    ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಬಸವರಾಜ ಕಲಶೆಟ್ಟಿ, ಚಂದ್ರು ಎಸಳೆ, ಎಸ್.ಎನ್. ಹೆಗಡೆ, ಗೋವಿಂದ ನಾಯ್ಕ, ಹಳಿಯಾಳ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಗಣಪತಿ ಕರಂಜಿಕರ, ರಾಜ್ಯ ಸಮಿತಿಯ ಸದಸ್ಯ ಶಾರದಾ ಪರಶುರಾಮ, ಜಿಲ್ಲಾ ಬಿಜೆಪಿ ಘಟಕದ ವಿಶೇಷ ಅಹ್ವಾನಿತರಾದ ಮಂಗೇಶ ದೇಶಪಾಂಡೆ, ಅಶೋಕ ಪಾಟೀಲ, ವಿಶ್ವ ಹಿಂದು ಪರಿಷತ್ ನಗರ ಘಟಕದ ಅಧ್ಯಕ್ಷ ವಾಸುದೇವ ಪ್ರಭು ಇತರರು ಉಪಸ್ಥಿತರಿದ್ದರು.

    ದಾಂಡೇಲಿ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ ಸ್ವಾಗತಿಸಿದರು. ದಾಂಡೇಲಿ ಘಟಕದ ಪ್ರಧಾನ ಕಾರ್ಯದರ್ಶಿ ಗುರು ಮಠಪತಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts