More

    ಮತದಾನದ ಕುರಿತು ಜಾಗೃತಿ ಮೂಡಿಸಿರಿ

    ಕಿಕ್ಕೇರಿ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳೇ ಸಾರ್ವಭೌಮರಾಗಿದ್ದು, ಮತದಾನ ಮಾಡಲು ಎಲ್ಲರು ಮುಂದಾಗಲು ಜಾಗೃತಿ ಮೂಡಿಸಬೇಕು ಎಂದು ಪ್ರಾಂಶುಪಾಲ ದೊರೆಸ್ವಾಮಿ ತಿಳಿಸಿದರು.

    ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಭಾರತ ತನ್ನದೆ ಆದ ಗರಿಮೆಯನ್ನು ಹೊಂದಿದೆ. 18ವರ್ಷ ಮೇಲ್ಪಟ್ಟ ಎಲ್ಲ ಭಾರತೀಯರು ಮತದಾನ ಮಾಡಲು ಅರ್ಹರು. ನಿಷ್ಪಕ್ಷಪಾತ, ನಿರ್ಭಯವಾಗಿ ಮತದಾನ ಮಾಡಲು ನಾಗರೀಕರು ಮುಂದಾದಲ್ಲಿ ಸುಸ್ಥಿರ ಸಮಾಜ ನಿರ್ಮಿಸಬಹುದು ಎಂದರು.

    ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಮಾತನಾಡಿ, ವಿದ್ಯಾರ್ಥಿಗಳು ಮತದಾನದ ಹಕ್ಕು, ಪಾವಿತ್ರೃತೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾರರ ಪಾತ್ರ, ಮತವನ್ನು ಹಣಕ್ಕಾಗಿ ಮಾರಿಕೊಂಡರೆ ಆಗುವ ದುಷ್ಪರಿಣಾಮ, ಯೋಗ್ಯರಲ್ಲದವರನ್ನು ಆರಿಸಿದರೆ ಸಮಾಜದ ಮೇಲೆ ಆಗುವ ದುಷ್ಪರಿಣಾಮ ಕುರಿತು ಮಾತನಾಡಿದರು.

    ಮತದಾನದ ಪ್ರಾಮುಖ್ಯತೆಯನ್ನು ತಿಳಿದು ಸಾರ್ವಜನಿಕರು ಕಡ್ಡಾಯವಾಗಿ ಮತ ಚಲಾಯಿಸಲು ಜಾಗೃತಿ ಮೂಡಿಸುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.

    ಐಕನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜೇಗೌಡ, ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಇ. ಕುಮಾರ್, ಮುಖಂಡ ಅಣ್ಣಯ್ಯಪ್ಪ, ದಿನೇಶ್‌ಬಾಬು, ಸುಜಾತ ಶಂಕರೇಗೌಡ, ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಕ್ಯಾತೇಗೌಡ, ಘಟಕಾಧಿಕಾರಿ ಕುಮಾರಸ್ವಾಮಿ, ಉಪನ್ಯಾಸಕ ರವೀಂದ್ರ, ಮಂಜುನಾಥ್, ರಮೇಶ್, ವಿನಾಯಕ, ನಾಗೇಶ್, ಫಾಜಿಲ್ಲಾ ಖಾನಂ, ನಂದಿನಿ, ಚಂದ್ರಿಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts