More

    VIDEO | ವೇದಿಕೆಯಿಂದ ಕೆಳಗೆ ಇಳೀರಿ ಎಂದು ತಾಕೀತು ಮಾಡಿದ ಕುಸ್ತಿಪಟು! ಬೃಂದಾ ಕಾರಟ್‌ಗೆ ಭಾರೀ ಮುಖಭಂಗ

    ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್​ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ ಮಾಡಿರುವ ಕುಸ್ತಿ ಪಟುಗಳು ದೆಹಲಿಯ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಭಾರತೀಯ ಕುಸ್ತಿ ಫೆಡರೇಶನ್ ಹಾಗೂ ಕುಸ್ತಿಪಟುಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.

    ಭಾರತದ ಖ್ಯಾತ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಹಲವು ಕ್ರೀಡಾಪಟುಗಳು ಈ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಧರಣಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಬೃಂದಾ ಕಾರಾಟ್ ಹಾಗೂ ಸಿಪಿಐ ನಾಯಕಿಯರನ್ನು ಧರಣಿಯಿಂದಲೇ ಹೊರಕಳುಹಿಸಿರುವಂತಹ ಪ್ರಸಂಗ ನಡೆದಿದೆ.

    ಕ್ರೀಡಾಪಟುಗಳು ಸೇರಿಕೊಂಡು ಧರಣಿ ನಡೆಸುತ್ತಿದ್ದೇವೆ. ಇಲ್ಲಿ ಬಂದು ರಾಜಕೀಯ ಮಾಡಬೇಡಿ. ದಯಮಾಡಿ ವೇದಿಕೆಯಿಂದ ಹೊರಹೋಗಿ ಎಂದು ಕುಸ್ತಿಪಟು ಭದರಂಗ್ ಪೂನಿಯಾ ಹೇಳಿದ್ದಾರೆ. ಇದರಿಂದ ಧರಣಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಬೃಂದಾ ಕಾರಾಟ್​ ಮುಜುಗರಕ್ಕೆ ಒಳಗಾಗುವಂತಾಗಿದೆ.

    ಧರಣಿ ನಡೆಯುತ್ತಿದ್ದಲ್ಲಿ ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದಂತೆ ಬೃಂದಾ ಕಾರಾಟ್ ಹಾಗೂ ಸಿಪಿಐ ನಾಯಕಿಯರು ಸ್ಥಳದಿಂದ ಹೊರನಡೆದಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts