More

    ಸಿಪಿಐ ಕಾರ್ಯಕರ್ತರ ಪ್ರತಿಭಟನೆ

    ಗೋ ರಕ್ಷಣೆ ಹೆಸರಲ್ಲಿ ಮಂಡ್ಯ ಜಿಲ್ಲೆಯ ಇದ್ರಿಶ್ ಪಾಷಾ ಅವರನ್ನು ಕೊಲೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಿಪಿಐ(ಎಂ) ವತಿಯಿಂದ ನಗರದ ಗಾಂಧಿವತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

    3 ದಿನಗಳ ಹಿಂದೆ ಕನಕಪುರ ತಾಲೂಕಿನ ಸಾತನೂರು ಬಳಿ ಗೋರಕ್ಷಕ ವೇಷದ ಗೂಂಡಾ ಪಡೆ, ಇದ್ರಿಷ್ ಪಾಷಾ ಎಂಬ ಮುಸ್ಲಿಂ ಕಾರ್ಮಿಕನನ್ನು ಕೊಲೆ ಮಾಡಿರುವುದು ವರದಿಯಾಗಿದೆ. ಈ ಮತಾಂಧ ಶಕ್ತಿಗಳು ಕಾನೂನನ್ನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಗೆ ಸವಾಲು ಒಡ್ಡುತ್ತಿವೆ. ರಾಜ್ಯ ಸರ್ಕಾರ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮದ ಮೂಲಕ ನಿಗ್ರಹಿಸದೆ ಇರುವುದರಿಂದ ಮತಾಂಧ ದುಷ್ಕೃತ್ಯಗಳು, ಕೊಲೆಗಳು ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಿವೆ ಎಂದು ದೂರಿದರು.

    ದುಷ್ಕೃತ್ಯದ ಹಿಂದಿನ ಸಂಚನ್ನು ಬಯಲುಗೊಳಿಸಿ

    ಕೊಲೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು. ಮೃತನ ಕುಟುಂಬಕ್ಕೆ 25 ಲಕ್ಷ ರೂ. ನೆರವು, ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಈ ದುಷ್ಕೃತ್ಯದ ಹಿಂದಿನ ಸಂಚನ್ನು ಬಯಲುಗೊಳಿಸಬೇಕು ಎಂದು ಒತ್ತಾಯಿಸಿದರು.

    ಮತೀಯ ದ್ವೇಷದಿಂದ ಕೊಲ್ಲಲ್ಪಟ್ಟ ಗದಗ ಜಿಲ್ಲೆಯ ನರಗುಂದದ ಸಮೀರ್, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಾ ತಾಲೂಕಿನ ಬೆಳ್ಳಾರೆ ಮಸೂದ್, ಸೂರತ್ಕಲ್‌ನ ಮಂಗಳಪೇಟೆ ಾಜಿಲ್, ಕಾಟಿಪಳ್ಳದ ಜಲೀಲ್ ಕುಟುಂಬಗಳಿಗೂ ತಲಾ 25 ಲಕ್ಷ ರೂ. ನೆರವು, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ, ಮಕ್ಕಳಿಗೆ ಉಚಿತ ಶಿಕ್ಷಣದ ನೆರವು ನೀಡಬೇಕು ಎಂದು ಆಗ್ರಹಿಸಿದರು.

    ಹಕ್ಕೊತ್ತಾಯಗಳು

    ರೈತ ಹಾಗೂ ಹೈನೋದ್ಯಮ, ಮಾಂಸೋದ್ಯಮ, ಚರ್ಮೋದ್ಯಮ ನಾಶ ಮಾಡುವ, ಜನತೆಯ ಆಹಾರದ ಹಕ್ಕು, ಬದುಕುವ ಹಾಗೂ ಉದ್ಯೋಗದ ಹಕ್ಕಿನ ಮೇಲೆ ದಾಳಿ ಮಾಡಿರುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಅನ್ನು ವಾಪಸ್ ಪಡೆಯಬೇಕು. ಬಡ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ 2ಬಿ ಮೀಸಲಾತಿ ಸೌಲಭ್ಯ ರದ್ದು ಮಾಡಿರುವುದನ್ನು ತಡೆಯಬೇಕು. ಸಾರ್ವಜನಿಕ ರಂಗದ ಶಿಕ್ಷಣ, ಸಾರ್ವಜನಿಕ ಉದ್ಯಮ, ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಾಪಸ್ ಪಡೆಯಬೇಕು. ಖಾಲಿ ಇರುವ ಎಲ್ಲ ಸರ್ಕಾರಿ ಹುದ್ದೆಗಳನ್ನು ತುಂಬಬೇಕು. ಖಾಸಗಿ ರಂಗದಲ್ಲೂ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಲ.ಜಗನ್ನಾಥ್, ಕಾರ್ಯದರ್ಶಿ ಎಲ್.ಜಗದೀಶ್ ಸೂರ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts