More

    ಗೋಕಳವಿನ ವಿರುದ್ಧ ಜಾಗೃತಿ ಸಭೆ ನಡೆಯುತ್ತಿದ್ದಾಗಲೇ ಗೋಕಳ್ಳಸಾಗಣೆ; ಹೆದರಿ ಮಸೀದಿ ಪಕ್ಕ ಕಾರು ಬಿಟ್ಟು ಓಡಿದ್ರು..

    ಉಡುಪಿ: ಗೋಕಳವಿನ ವಿರುದ್ಧ ಜಾಗೃತಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಗೋವು ಕಳ್ಳಸಾಗಣೆ ನಡೆದ ಪ್ರಸಂಗವೊಂದು ವರದಿಯಾಗಿದೆ. ಕೊನೆಗೆ ಹಿಂದೂ ಕಾರ್ಯಕರ್ತರ ಕೈಗೆ ಸಿಕ್ಕಿಬೀಳುವ ದೃಷ್ಟಿಯಿಂದ ಕಳ್ಳರು ಮಸೀದಿ ಪಕ್ಕ ಕಾರು ಬಿಟ್ಟು ಓಡಿಹೋಗಿದ್ದಾರೆ.

    ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಮಾರುತಿ-800 ಕಾರಿನಲ್ಲಿ ಗೋವು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಕಾರು ಅಡ್ಡಗಟ್ಟಿದಾಗ ಅಸಲಿಯತ್ತು ಬಹಿರಂಗಗೊಂಡಿದೆ.

    ಕಾರಿನಲ್ಲಿ ಎರಡು ಹಸುಗಳ ಕಾಲುಗಳನ್ನು ಕಟ್ಟಿ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಸಿಕ್ಕಿ ಬೀಳುವ ಭಯದಿಂದ ಕಳ್ಳರು ಅಲ್ಲೇ ಮಸೀದಿ ಪಕ್ಕದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆ ವಿಡಿಯೋದಲ್ಲಿ ಇರುವುದು ನಾನಲ್ಲ: ವೈರಲ್ ವಿಡಿಯೋ ಕುರಿತು ಮಾಜಿ ಸಿಎಂ ಸದಾನಂದ ಗೌಡ ಸ್ಪಷ್ಟನೆ

    ಬೆಂಜ್ ಕಾರ್-ಡ್ಯೂಕ್​ ಬೈಕ್​ ಡಿಕ್ಕಿ; ದ್ವಿಚಕ್ರ ವಾಹನ ಸವಾರನ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts