ನವದೆಹಲಿ: ಪ್ರೇಮಿಗಳ ದಿನವಾದ ಫೆ. 14ರಂದ ಹಸುಗಳನ್ನು ಅಪ್ಪಿಕೊಳ್ಳುವ ಮೂಲಕ ಕೌ ಹಗ್ ಡೇ ಆಚರಿಸಬೇಕು ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಈ ಹಿಂದೆ ಮಾಡಿಕೊಂಡಿದ್ದ ಮನವಿಯನ್ನು ಹಿಂಪಡೆದುಕೊಂಡಿದೆ.
ಪ್ರಾಣಿ ಕಲ್ಯಾಣ ಮಂಡಳಿಯ ಈ ಮನವಿಯ ಬಗ್ಗೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ವಿಷಯ ವಿವಾದಾತ್ಮಕವಾಗಿ ಪರಿಣಮಿಸಿತ್ತು. ಅದಾಗ್ಯೂ ಮಂಡಳಿಯ ಈ ನಿಲುವನ್ನು ಉತ್ತರಪ್ರದೇಶದ ಸಚಿವರು ಸಮರ್ಥಿಸಿಕೊಂಡಿದ್ದರು.
ಗೋವನ್ನು ಸ್ಪರ್ಶಿಸುವುದು ಅಥವಾ ಅಪ್ಪಿಕೊಳ್ಳುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಮತ್ತು ರಕ್ತದೊತ್ತಡದ ಮಟ್ಟವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ ಎಂದು ಉತ್ತರ ಪ್ರದೇಶದ ಪಶುಸಂಗೋಪನೆ ಸಚಿವ ಧರಮ್ ಪಾಲ್ ಸಿಂಗ್ ಹೇಳಿದ್ದರು.
ಆದರೆ ಇಂದು ತನ್ನ ಮನವಿಯನ್ನು ಹಿಂಪಡೆದುಕೊಂಡಿರುವುದಾಗಿ ಪ್ರಾಣಿ ಕಲ್ಯಾಣ ಮಂಡಳಿ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದೆ. ಹೀಗಾಗಿ ಫೆ. 14ರಂದು ಕೌ ಹಗ್ ಡೇ ಆಚರಣೆ ಇರುವುದಿಲ್ಲ ಎಂಬುದನ್ನು ಪ್ರಾಣಿ ಕಲ್ಯಾಣ ಮಂಡಳಿ ತಿಳಿಸಿದೆ.
ಭೀಕರ ಅಪಘಾತ: ಕೆಟ್ಟು ನಿಂತಿದ್ದ ಕ್ಯಾಂಟರ್ಗೆ ಬುಲೆಟ್ ಡಿಕ್ಕಿ, ಯುವಕ-ಯುವತಿ ಸ್ಥಳದಲ್ಲೇ ಸಾವು
ಎಟಿಎಮ್ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್ನವರಿಗೆ ತಲೆನೋವಾಗಿರುವ ಖದೀಮರು!