More

    VIDEO ] ಕ್ವಾರಂಟೈನಿಗರ ಸ್ಫೂರ್ತಿದಾಯಕ ಕೋವಿಡಾನ್ಸಿಂಗ್ ಹೇಗಿದೆ ನೋಡಿ…!

    ಪಟನಾ: ಲಾಕ್‌ಡೌನ್ ಎಲ್ಲವನ್ನೂ ಕಸಿದುಕೊಂಡು ಎಲ್ಲರನ್ನೂ ಒಂದರ್ಥದಲ್ಲಿ ಬಂಧಿಸಿದೆ ನಿಜ, ಆದರೆ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಕೆಲವರು ಖುಷಿಯಿಂದ ಇರಲು, ಇತರರನ್ನು ಖುಷಿಯಾಗಿರಿಸಲು ತಮ್ಮ ವಿಶೇಷ ಕಲೆ, ಕೌಶಲ ಪ್ರದರ್ಶಿಸುತ್ತಾರೆ. ವಿಶೇಷವಾಗಿ ಪ್ರಭಾವಶಾಲಿಗಳು ಮತ್ತು ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲೇ ಹಾಡಿ, ಕುಣಿದು, ನಕ್ಕು ನಲಿಯುತ್ತಾರೆ. ಅಷ್ಟೇ ಅಲ್ಲದೆ ವಿಡಿಯೊಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಆದರೆ ಇದು ಅವರಿಗಷ್ಟೇ ಸೀಮಿತವಾಗಿಲ್ಲ. ಕ್ವಾರಂಟೈನ್ ನಲ್ಲಿರುವವರು ಆ ಅಸಹನೀಯ ಸ್ಥಿತಿಯಲ್ಲೂ ಸ್ವಯಂ ಸ್ಫೂರ್ತಿಗಾಗಿ ಕುಣಿದು, ನಕ್ಕು ನಲಿದ ಉದಾಹರಣೆಗಳೂ ಇವೆ.
    ಇಲ್ಲೊಂದು ವಿಡಿಯೊ ಇದೆ ನೋಡಿ.

    ಇದರಲ್ಲಿ ಬಿಹಾರದ ಕ್ಯಾರೆಂಟೈನ್ ಕೇಂದ್ರದ ನಿವಾಸಿಗಳು ಸಾಲಾಗಿ ನಿಂತು, ಸಾಮಾಜಿಕ ದೂರವನ್ನು ಕಾಪಾಡಿಕೊಂಡು ‘ಸಂದೇಸೆ ಆತೆ ಹೈ’ ಜನಪ್ರಿಯ ಹಾಡಿಗೆ ಡಾನ್ಸ್ ಮಾಡುತ್ತಿದ್ದಾರೆ.
    ತಮ್ಮ ಕುಟುಂಬಗಳಿಂದ ದೂರವಿದ್ದು, ಐಸೋಲೇಷನ್ ಕೇಂದ್ರಗಳಲ್ಲಿರುವ ಇವರೆಲ್ಲ ಸ್ವಯಂ ಪ್ರೇರಣೆ ಹಾಗೂ ಪ್ರೋತ್ಸಾಹಕ್ಕಾಗಿ ಮತ್ತು ಇತರರನ್ನೂ ಹುರಿದುಂಬಿಸಲು ಮಾಡಿದ ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
    ಕೆಲವು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ಕಂಡ 30 ಸೆಕೆಂಡುಗಳ ಈ ವಿಡಿಯೋವನ್ನು ಉತ್ತರ ಪ್ರದೇಶದ ಪೊಲೀಸ್ ರಾಹುಲ್ ಶ್ರೀವಾಸ್ತವ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅವರು ಅದನ್ನು ”ಕೋವಿಡಾನ್ಸ್” ಎಂದು ಶ್ಲಾಘಿಸಿದ್ದಾರೆ.

    ಕ್ಯಾರಂಟೈನಿಗರು ಐದು ಸಾಲುಗಳಲ್ಲಿ ನಿಂತು, ಅವರು ಕೊರಿಯೋಗ್ರಾಫರ್ ಹೇಳಿದಂತೆ ನೃತ್ಯ ಮಾಡುತ್ತಿದ್ದಾರೆ.
    “ಬಿಹಾರದ ಸಿವಾನ್‌ನಲ್ಲಿರುವ ಜುವಾಫರ್ ಕ್ಯಾರಂಟೈನ್ ಕೇಂದ್ರದಲ್ಲಿರುವವರು ಹಾಡು, ಸಂಗೀತ ಮತ್ತು ನೃತ್ಯ ಮಾಡುವ ಮೂಲಕ ಉತ್ಸಾಹವನ್ನು ಉಳಿಸಿಕೊಂಡಿದ್ದಾರೆ”ಎಂದು ವಿಡಿಯೋಗೆ ಶೀರ್ಷಿಕೆ ಬರೆಯಲಾಗಿದೆ.
    ಹಲವಾರು ನೆಟ್ಟಿಗರು ಈ ವೀಡಿಯೊವನ್ನು ಸ್ಪೂರ್ತಿದಾಯಕವೆಂದು ಬಣ್ಣಿಸಿದ್ದಾರೆ.

    ಶಿಕ್ಷಕರೆ, ಕ್ವಾರಂಟೈನ್​ನಲ್ಲಿ ಮನರಂಜಿಸಲು ಹೋಗಿ ಎಂದ ರಾಜಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts