More

    ಸೆಪ್ಟೆಂಬರ್​ನಿಂದ ಮಕ್ಕಳಿಗೂ ಕರೊನಾ ಲಸಿಕೆ ಆರಂಭ ಸಾಧ್ಯತೆ: ಏಮ್ಸ್​ ಮುಖ್ಯಸ್ಥ ಡಾ. ರಣದೀಪ್​ ಗುಲೇರಿಯಾ

    ನವದೆಹಲಿ: ಸೆಪ್ಟೆಂಬರ್​ನಿಂದ ಮಕ್ಕಳಿಗೂ ಕರೊನಾ ಲಸಿಕೆ ನೀಡುವ ಕೆಲಸ ಆರಂಭವಾಗುವ ಸಾಧ್ಯತೆ ಇದೆ ಎಂದು ಏಮ್ಸ್​ ಮುಖ್ಯಸ್ಥ ಡಾ. ರಣದೀಪ್​ ಗುಲೇರಿಯಾ ತಿಳಿಸಿದ್ದು, ಕರೊನಾ ಸರಪಳಿಗೆ ಬ್ರೇಕ್​ ಹಾಕಲು ಲಸಿಕೆ ಪ್ರಮುಖವಾಗಿರಲಿದೆ ಎಂದು ಉಲ್ಲೇಖಿಸಿದ್ದಾರೆ.

    ಜೈಡಸ್​ ಕಂಪನಿ ಈಗಾಗಲೇ ಲಸಿಕಾ ಟ್ರಯಲ್​ ಮುಗಿಸಿ, ತುರ್ತು ದೃಢೀಕರಣಕ್ಕೆ ಕಾಯುತ್ತಿದೆ ಎಂದು ಭಾವಿಸಿದ್ದೇನೆ. ಭಾರತ್​ ಬಯೋಟೆಕ್​ನ ಕೋವಾಕ್ಸಿನ್​ ಟ್ರಯಲ್ಸ್​ ಆಗಸ್ಟ್​ ಅಥವಾ ಸೆಪ್ಟೆಂಬರ್​ಗೆ ಮುಗಿಯಲಿದ್ದು, ಬಳಿಕ ಅನುಮೋದನೆ ಪಡೆದುಕೊಳ್ಳಲಿದೆ.

    ಫೈಜರ್ ಲಸಿಕೆಗೆ ಈಗಾಗಲೇ ಯುಸ್​ ರೆಗ್ಯುಲೇಟರ್​ ಎಫ್​ಡಿಎ (ಆಹಾರ ಮತ್ತು ಔಷಧ ಆಡಳಿತ) ಅನುಮೋದನೆ ನೀಡಿದೆ. ಹೀಗಾಗಿ ಸೆಪ್ಟೆಂಬರ್​ ಆರಂಭದಲ್ಲಿ ಕರೊನಾ ಮಕ್ಕಳಿಗೆ ಕರೊನಾ ಲಸಿಕೆ ಆರಂಭವಾಗಲಿದೆ ಎಂಬ ಭರವಸೆ ಇದೆ ಮತ್ತು ಈ ಲಸಿಕಾ ಅಭಿಯಾನ ಕರೊನಾ ಸರಪಳಿಯನ್ನು ಬ್ರೇಕ್​ ಮಾಡಲು ದೊಡ್ಡ ಮಟ್ಟದ ಉತ್ತೇಜನವನ್ನು ನೀಡಲಿದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ.

    ಭಾರತದಲ್ಲಿ ಈವರೆಗೆ 42 ಕೋಟಿಗೂ ಅಧಿಕ ಲಸಿಕೆಯನ್ನು ನೀಡಲಾಗಿದೆ. ಈ ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಆದಾಗ್ಯೂ, ಮೂರನೇ ಅಲೆ ಭೀತಿ ಇದ್ದು, ಆದಷ್ಟು ಬೇಗ ಮಕ್ಕಳಿಗೆ ಕರೊನಾ ಲಸಿಕೆ ಕಾರ್ಯ ಆರಂಭಿಸುವ ಕೆಲಸ ಆಗಬೇಕಿದೆ ಎಂದಿದ್ದಾರೆ. (ಏಜೆನ್ಸೀಸ್​)

    VIDEO| ಪ್ರಾಣವನ್ನೇ ಪಣಕ್ಕಿಟ್ಟು ಜಲಾವೃತಗೊಂಡ ಗ್ರಾಮಗಳಲ್ಲಿ ಬೆಳಕು ಹರಿಸಿದ ಪವರ್​ಮೆನ್​!

    ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಸಾವಿನ ಬೆನ್ನಲ್ಲೇ ಶವವಾಗಿ ಪತ್ತೆಯಾದ ಸ್ನೇಹಿತ!

    ಭಗವಾನ್ ಬುದ್ಧನ ಬೋಧನೆಗಳು ಕರೊನಾ ಸಾಂಕ್ರಮಿಕ ಕಾಲದಲ್ಲಿ ಹೆಚ್ಚು ಪ್ರಸ್ತುತ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts