More

    ಕೋವಿಡ್ ಪರೀಕ್ಷೆ ವರದಿ ವಿಳಂಬ

    ಮಂಗಳೂರು/ಉಡುಪಿ: ಕರೊನಾ ಸೋಂಕು ಏರುಗತಿಯಲ್ಲಿ ಸಾಗುತ್ತಿರುವ ಹೊತ್ತಿನಲ್ಲಿಯೇ ಸೋಂಕು ದೃಢಪಡಿಸುವ ಆರ್‌ಟಿ-ಪಿಸಿಆರ್ ಕೋವಿಡ್ ಪರೀಕ್ಷೆ ವರದಿ ವಿಳಂಬವರದಿಗಳು ವಿಳಂಬವಾಗುತ್ತಿರುವುದು ಕಂಡುಬರುತ್ತಿದೆ.

    ಸಾಮಾನ್ಯವಾಗಿ ಆರ್‌ಟಿ ಪಿಸಿಆರ್ ಪರೀಕ್ಷೆ ವರದಿ 24ರಿಂದ 48 ಗಂಟೆ ಅವಧಿಯಲ್ಲಿ ದೊರೆಯಬೇಕು. ಆದರೆ ಈಗ 4ರಿಂದ 6 ದಿನಗಳು ಬೇಕು. ಈಗ ದಿನಂಪ್ರತಿ 5, 6 ಸಾವಿರ ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿಳಂಬವಾಗುತ್ತಿದೆ. ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನವನ್ನು ನಮ್ಮ ತಾಂತ್ರಿಕ ವರ್ಗ ಹಗಲಿರುಳು ನಡೆಸುತ್ತಿದ್ದಾರೆ. ವಾರದೊಳಗೆ ನಿರೀಕ್ಷಿತ ಫಲಿತಾಂಶ ದೊರೆಯಬಹುದು ಎನ್ನುತ್ತಾರೆ ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್.
    ದಕ್ಷಿಣ ಕನ್ನಡ ಜಿಲ್ಲೆಯ 8 ವೈದ್ಯಕೀಯ ಕಾಲೇಜು ಹಾಗೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗಳಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆಗಳು ನಡೆಯುತ್ತಿವೆ. ವೆನ್ಲಾಕ್‌ನಲ್ಲಿ ದಿನಂಪ್ರತಿ ಸುಮಾರು 2,500 ಪರೀಕ್ಷೆಗಳು ವೈದ್ಯಕೀಯ ಕಾಲೇಜುಗಳಲ್ಲಿ ದಿನಂಪ್ರತಿ ತಲಾ 300ರಷ್ಟು ಪರೀಕ್ಷೆಗಳು ನಡೆಯುತ್ತಿವೆ. ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಶೀಘ್ರ ರೋಗ ಪತ್ತೆ ಅತ್ಯಂತ ಮುಖ್ಯವಾಗಿದೆ.

    ಉಡುಪಿ ಜಿಲ್ಲೆಯಲ್ಲೂ ಇದೇ ಸಮಸ್ಯೆ ಇದೆ. ‘ದಿನಕ್ಕೆ 3ರಿಂದ 4 ಸಾವಿರ ಸ್ಯಾಂಪಲ್ ಬರುತ್ತಿದ್ದು, ಜಿಲ್ಲಾಸ್ಪತ್ರೆ ಲ್ಯಾಬ್‌ನಲ್ಲಿ 1500 ಸ್ಯಾಂಪಲ್ ಪರೀಕ್ಷಿಸಲಾಗುತ್ತದೆ. ಹೀಗಾಗಿ ವರದಿ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಪ್ರತಿಕ್ರಿಯಿಸುತ್ತಾರೆ.

    ವ್ಯಾಕ್ಸಿನ್ ಕೊರತೆ: ಕೋವಿಡ್ ನಿರೋಧಕ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರ ಜತೆಯಲ್ಲಿ ಲಸಿಕೆ ಕೊರತೆಯೂ ಕಂಡು ಬಂದಿದೆ. ಸೋಮವಾರ ರಾತ್ರಿ 12 ಸಾವಿರ ಲಸಿಕೆ ಮಂಗಳೂರು ತಲುಪಿದ್ದು, 2- 3 ದಿನಕ್ಕೆ ಸಾಕಾಗಬಹುದು. ಅಷ್ಟರೊಳಗೆ ಮತ್ತೆ ಪೂರೈಕೆ ಮಾಡಿಕೊಳ್ಳಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 8,142 ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts