More

    ಅನ್​ಲಾಕ್ ಹತ್ತಿರ, ಕಾಣದ ಪರಿಹಾರ: ಅಗತ್ಯ ಚಿಕಿತ್ಸಾ ಸೌಲಭ್ಯಗಳ ಜಂಜಡದಿಂದ ರಾಜ್ಯ ಇನ್ನೂ ಹೊರಬಂದಿಲ್ಲ

    • ಮೃತ್ಯುಂಜಯ ಕಪಗಲ್ ಬೆಂಗಳೂರು

    ಕರೊನಾ ಎರಡನೇ ಅಲೆ ಪ್ರಭಾವ, ಸೋಂಕು ಪ್ರಕರಣಗಳು ದಿನಕಳೆದಂತೆ ಇಳಿಮುಖವಾಗಿ ಅನ್​ಲಾಕ್ ಅಂತ್ಯ ಸಮೀಪಿಸಿದ್ದರೂ ಅಗತ್ಯ ಚಿಕಿತ್ಸಾ ಸೌಲಭ್ಯಗಳ ಜಂಜಡದಿಂದ ರಾಜ್ಯ ಇನ್ನೂ ಹೊರಬಂದಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಹಾಹಾಕಾರ, ಸೋಂಕಿತ ಮೃತರ ಅಂತ್ಯಕ್ರಿಯೆಗೆ ಪರದಾಟ ಬಹುತೇಕ ಶಮನವಾಗಿದೆ. ಆದರೆ ಲಸಿಕೆ, ಔಷಧ, ಆಮ್ಲಜನಕ ಪೂರೈಕೆಯ ಸಮಸ್ಯೆಗಳು ಬಗೆಹರಿದಿಲ್ಲ.

    ಹೊಸ ಸೋಂಕು ಪ್ರಕರಣಗಳು ತಗ್ಗಿವೆ. ಅದೇ ರೀತಿ ಪಾಸಿಟಿವಿಟಿ ದರ ಮತ್ತು ಮರಣ ಪ್ರಮಾಣ ತಗ್ಗಿದರೆ ಎಲ್ಲ ಸೋಂಕಿತರಿಗೆ ಚಿಕಿತ್ಸೆಗೆ ಒದಗಿಸುವುದು ಸುಲಭ ಎನ್ನುವುದು ಸರ್ಕಾರದ ಲೆಕ್ಕಾಚಾರ. ಇದೇ ಕಾರಣಕ್ಕೆ ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಸುವ ಚಿಂತನೆ ನಡೆದಿದೆ. ಈ ಮಧ್ಯೆ ಅಗತ್ಯ ಚಿಕಿತ್ಸಾ ಪರಿಕರಗಳ ಲಭ್ಯತೆಯಲ್ಲಿ ಸಾಧ್ಯವಾಗದ ಸ್ಥಿರತೆ ಸರ್ಕಾರವನ್ನು ಚಿಂತೆಗೀಡು ಮಾಡಿದೆ.

    ದಾಸ್ತಾನು ಸಲೀಸು: ಬೇಡಿಕೆಗೆ ತಕ್ಕಂತೆ ಆಮ್ಲಜನಕ, ಲಸಿಕೆ, ಔಷಧ, ಆರೋಗ್ಯ ಸವಲತ್ತುಗಳನ್ನು ಮಾಡಿಕೊಂಡರೆ ಹೆಚ್ಚುವರಿ ಉತ್ಪಾದನೆ, ಲಭ್ಯತೆ, ದಾಸ್ತಾನು ಸಲೀಸಾಗುತ್ತದೆ. ಸಂಭಾವ್ಯ 3ನೇ ಅಲೆ ಎದುರಿಸಲು ಮಾಡಿಕೊಳ್ಳುವ ಸಿದ್ಧತೆ ವೇಗ ಹೆಚ್ಚುತ್ತದೆ. ಭವಿಷ್ಯದ ಬಿಕ್ಕಟ್ಟನ್ನು ಎದುರಿಸಲು ಆಡಳಿತ ಯಂತ್ರಾಂಗಕ್ಕೆ ಆತ್ಮಬಲ ಸಿಕ್ಕಂತಾಗುತ್ತದೆ. ಕಾಗದದ ಮೇಲಿನ ಈ ಕಾರ್ಯತಂತ್ರ ತ್ವರಿತವಾಗಿ ಕಾರ್ಯರೂಪಕ್ಕೆ ಬರಬೇಕು. ಆದರೆ ಆರೋಗ್ಯ ಮತ್ತು ವೈದ್ಯಕೀಯ ಪರಿಕರಗಳ ವ್ಯವಸ್ಥೆಯ ಆಮೆವೇಗ ಆತಂಕದ ಮೂಲವಾಗಿದೆ.

    ತುರ್ತು ಆಗಬೇಕಿರುವುದು

    ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆಗೆ 100 ಘಟಕಗಳ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಚಾಲನೆ ಪಡೆದ 32 ಘಟಕ ಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಜತೆಗೆ ಉಳಿದ ಘಟಕಗಳ ನಿರ್ಮಾಣ ಕಾಮಗಾರಿ ಆರಂಭಿಸಬೇಕಿದೆ

    ಕೇಂದ್ರ ಸರ್ಕಾರ ದಿನದ ಆಮ್ಲಜನಕ ಹಂಚಿಕೆ ಪ್ರಮಾಣವನ್ನು 1,200 ಮೆಟ್ರಿಕ್ ಟನ್​ಗೆ ಏರಿಸಿದ್ದರೂ ರಾಜ್ಯದಲ್ಲಿ ಉತ್ಪಾದಿಸುವ 1,100 ಮೆಟ್ರಿಕ್ ಟನ್ ಪೈಕಿ 730 ಟನ್ ಇತರೆಡೆ ಹಂಚಿದೆ. ಪೂರ್ತಿ ರಾಜ್ಯದಲ್ಲೇ ಬಳಕೆಗೆ ಅನುಮತಿ ನೀಡುವುದು ಬಾಕಿಯಿದೆ

    ರೆಮ್ೆಸಿವಿರ್ ಬೇಡಿಕೆಗಿಂತ ಪೂರೈಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅಂದರೆ, ಸಕ್ರಿಯ ಪ್ರಕರಣಗಳ ಆಧಾರಿತ ಹಂಚಿಕೆ ವ್ಯವಸ್ಥೆ ನಿಲ್ಲಲಿದ್ದು, ಆಸಕ್ತ ಕಂಪನಿಗಳ ಜತೆಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿ ಖರೀದಿ ಒಪ್ಪಂದದ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.

    2 ಕೋಟಿ ಡೋಸ್ ಕೋವಿಶೀಲ್ಡ್, 1 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಖರೀದಿಗೆ ಆದೇಶಿಸಿ ತಿಂಗಳುಗಳೇ ಉರುಳಿದ್ದು, ಈವರೆಗೆ 14 ಲಕ್ಷ ಡೋಸ್ ಲಸಿಕೆ ಪೂರೈಕೆ ಯಾಗಿದೆ. ಪೂರೈಕೆ ವೇಗ ಹೆಚ್ಚಿಸಲು ಸಂಬಂಧಿಸಿದ ಕಂಪನಿ ಗಳ ಮೇಲೆ ಒತ್ತಡ ಹೇರುವುದು ಅನಿವಾರ್ಯ

    ಕೋಟ್

    ರೆಮ್ೆಸಿವಿರ್ ಬೇಡಿಕೆಗಿಂತ ಪೂರೈಕೆ ಜಾಸ್ತಿಯಾಗಿರುವ ಕಾರಣಕ್ಕೆ ಕೇಂದ್ರ ಸರ್ಕಾರ ನಿಯಂತ್ರಿತ ಹಂಚಿಕೆ ವ್ಯವಸ್ಥೆ ಕೈಬಿಟ್ಟು, ಮಾರುಕಟ್ಟೆಯಲ್ಲಿ ಲಭ್ಯವಿರುವುದನ್ನು ಖರೀದಿಸಲು ಸೂಚಿಸಿದೆ. ಆಸಕ್ತ ಕಂಪನಿಗಳಿಂದ ಬೇಕಾ ದಷ್ಟು ರೆಮ್ೆಸಿವಿರ್ ಖರೀದಿಗೆ ಮುಕ್ತ ಅವಕಾಶ ಕಲ್ಪಿಸಿದೆ.

    | ಡಾ.ಕೆ.ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

    ಅಂಕಿ-ಅಂಶ

    · ಈವರೆಗೆ 1.31 ಕೋಟಿ ಜನರಿಗೆ ಲಸಿಕೆ ವಿತರಣೆ, ದೇಶದಲ್ಲಿ ರಾಜ್ಯಕ್ಕೆ 6ನೇ ಸ್ಥಾನ

    · ಬ್ಲಾ್ಯಕ್ ಫಂಗಸ್ ಚಿಕಿತ್ಸೆಗೆ 10,370 ಆಂಫೋಟೆರಿಸಿನ್-ಬಿ ಇಂಜೆಕ್ಷನ್ ಮೇ 27ರವರೆಗೆ ಹಂಚಿಕೆ

    · ಬ್ಲಾ್ಯಕ್ ಫಂಗಸ್ ಬಾಧಿತ ಒಬ್ಬ ರೋಗಿ ಪೂರ್ಣ ಗುಣಮುಖವಾಗಲು 50-90 ವೈಯಲ್ಸ್ ಬೇಕು

    · ಅಧಿಕೃತ ಬಾಕಿ ಮಾಹಿತಿ ಪ್ರಕಾರ ಈ ತನಕ 1,250 ಬ್ಲಾ್ಯಕ್ ಫಂಗಸ್ ಸೋಂಕು ಪ್ರಕರಣಗಳು ಪತ್ತೆ

    · ರೆಮ್ೆಸಿವಿರ್ 14,25,000 ವೈಯಲ್ಸ್ ಚುಚ್ಚುಮದ್ದು ಮೇ 30ರವರೆಗೆ ಹಂಚಿಕೆ

    · ಕರೊನಾ ಚಿಕಿತ್ಸೆಗೆ 13,935 ವೈಯಲ್ಸ್ ಟೊಸಿಲಿಜುಮಾಬ್ ಈತನಕ ಹಂಚಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts