More

    ಇನ್ನು ಮೂರುದಿನ ನಡೆಯೋದಿಲ್ಲ ಕೊವಿಡ್​-19 ಸ್ವಾಬ್​ ಟೆಸ್ಟ್​ !

    ಬೆಂಗಳೂರು: ನಾಳೆಯಿಂದ ಮೂರುದಿನ ಬೆಂಗಳೂರಿನ 198 ವಾರ್ಡ್​​ಗಳಲ್ಲಿ ಕೊವಿಡ್​-19 ತಪಾಸಣೆ ನಡೆಯುವುದಿಲ್ಲ. ಗಂಟಲು ದ್ರವದ ಮಾದರಿ ಪರೀಕ್ಷೆಗೆ ಬ್ರೇಕ್​ ಹಾಕಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬಹುತೇಕ ಎಲ್ಲ ವಾರ್ಡ್​ಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜ್ವರ ಚಿಕಿತ್ಸಾಲಯಗಳನ್ನು ಸ್ಥಾಪಿಸಿ, ಕೊವಿಡ್​-19 ತಪಾಸಣೆ ನಡೆಸಲಾಗುತ್ತಿದೆ. ಗಂಟಲು ದ್ರವದ ಮಾದರಿಯ ಸಂಗ್ರಹಣೆ, ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

    ಆದರೆ ಇದೀಗ ಗಂಟಲು ದ್ರವ ಪರೀಕ್ಷೆ ಮಾಡುವಾಗ ಕರೊನಾ ಲಕ್ಷಣ ಇರುವವರು ಮತ್ತು ಲಕ್ಷಣಗಳು ಇಲ್ಲದವರನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ತಪಾಸಣೆ ಮಾಡಲು ನಿರ್ಧರಿಸಲಾಗಿದೆ. ಸೋಂಕಿನ ಲಕ್ಷಣ ಇರುವವರ ಮತ್ತು ಇಲ್ಲದವರ ಗಂಟಲು ದ್ರವದ ಮಾದರಿಯನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸುವ ಸಲುವಾಗಿ ನಾಳೆಯಿಂದ ಮೂರು ದಿನ ಕರೊನಾ ಲಕ್ಷಣಗಳು ಇಲ್ಲದವರ ಪರೀಕ್ಷೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೇ, ಕೊವಿಡ್​-19 ಲಕ್ಷಣಗಳು ಇರುವವರ ಟೆಸ್ಟ್​ ಹಾಗೇ ಮುಂದುವರಿಯಲಿದೆ.
    ಈ ಮೂರು ದಿನದ ಅವಧಿಯಲ್ಲಿ ತುರ್ತು ಅಗತ್ಯ ಬಿದ್ದರೆ ಮಾತ್ರ ಆ್ಯಂಟಿಜನ್​ ಕಿಟ್​ ಮೂಲಕ ಪರೀಕ್ಷೆ ಪರೀಕ್ಷೆ ಮಾಡಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತರು ತಿಳಿಸಿದ್ದಾರೆ.

    ರಾಜಸ್ಥಾನ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್​​; ಗೆಹ್ಲೋಟ್​ ಸರ್ಕಾರ ಉಳಿಸಲು ಪಣ ತೊಟ್ಟ ಬಿಜೆಪಿ ನಾಯಕಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts