More

    ಅಫ್ಘಾನ್​​ನಿಂದ ಭಾರತಕ್ಕೆ ಬಂದ 78 ಜನರ ಪೈಕಿ 16 ಮಂದಿಗೆ ಕರೊನಾ

    ನವದೆಹಲಿ: ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಯುಪಡೆ ಮೂಲಕ ತಾಯ್ನಾಡಿಗೆ ಕರೆ ತರಲಾಗಿದೆ. ಮಂಗಳವಾರ ಸುಮಾರು 78 ಮಂದಿಯನ್ನು ಕರೆತರಲಾಗಿದೆ. ಅದರಲ್ಲಿ 16 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

    ವಾಯುಪಡೆ ವಿಮಾನದ ಮೂಲಕ ದೆಹಲಿಗೆ ಕರೆತಂದ ನಂತರ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ 16 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಕಾಬೂಲ್​ನಿಂದ ಸಿಖ್ಖರ ಪವಿತ್ರ ಗ್ರಂಥವಾದ ಗುರುಗ್ರಂಥ ಸಾಹೀಬ್ ಅನ್ನು ತಂದ ಕೆಲವು ಮಂದಿಯಲ್ಲೂ ಕೋವಿಡ್ ಸೋಂಕು ದೃಢಪಟ್ಟಿದೆ.

    ಅಫ್ಘಾನಿಸ್ತಾನದಿಂದ ಬಂದ ಎಲ್ಲರೂ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಗಾಗಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಬೂಲ್​ನಿಂದ ತಂದಿದ್ದ ಗುರು ಗ್ರಂಥ ಸಾಹಿಬ್ ಅನ್ನು ಸ್ವೀಕರಿಸಿದ್ದರು. 

    ಭಾರತದ 228 ಪ್ರಜೆಗಳು ಸೇರಿದಂತೆ ಒಟ್ಟು 626 ಮಂದಿಯನ್ನು ಭಾರತ ಅಲ್ಲಿಂದ ಸುರಕ್ಷಿತವಾಗಿ ಕರೆತಂದಿದೆ. ಇವರಲ್ಲಿ 77 ಮಂದಿ ಅಫ್ಘನ್ ಸಿಖ್ಖರಿದ್ದಾರೆ. ಹೀಗೆ ಸ್ಥಳಾಂತರವಾದ ಜನರ ಸಂಖ್ಯೆಯಲ್ಲಿ, ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸೇರಿಸಿಲ್ಲ ಎಂದು ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. (ಏಜೆನ್ಸೀಸ್)

    ಭಾರತ ಟಿ-20 ವಿಶ್ವಕಪ್ ಗೆಲ್ಲಬೇಕಾದರೆ ಈ ಸ್ಫೋಟಕ ಅಲ್ರೌಂಡರ್ ಪಾತ್ರವೇ ಪ್ರಮುಖ: ದಿನೇಶ್ ಕಾರ್ತಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts