More

    ಕೋವಿಡ್ ನಿಂದ ಸಾಯುವ ಸ್ಥಿತಿಯಲ್ಲಿದ್ದರೂ ‘ಲವ್ ಯು ಜಿಂದಗಿ’ ಎಂದು ಹಾಡು ಹೇಳಿದ ಯುವತಿ

    ಮುಂಬೈ; ಕರೊನಾ ಕಾಲದ ಕಥೆಗಳು ಸಾಕಷ್ಟು ಜನರಿಗೆ ನೋವು ತರಿಸುತ್ತಿವೆ. ಇದರಲ್ಲಿ ಕೆಲವು ಕಥೆಗಳು ಜೀವನೋತ್ಸಾಹವನ್ನು ತುಂಬುತ್ತಿವೆ.

    ಕಳೆದ ಎಂಟು ದಿನದ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ಯುವತಿಯೊಬ್ಬಳು ಇತರ ರೋಗಿಗಳಿಗೆ ಪ್ರೇರಣೆಯಾಗಿದ್ದಾಳೆ. ಆಶಾ ಎನ್ನುವ ಯುವತಿ ಸದ್ಯ ವೆಂಟಿಲೇಟರ್ ಅವಶ್ಯಕತೆ ಇದ್ದರೂ ವೆಂಟಿಲೇಟರ್ ಸಿಗುತ್ತಿಲ್ಲ. ಹೀಗಾಗಿ ಎನ್ ಐ ಯು ಸೌಲಭ್ಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಈ ವೇಳೆ ಚೀಟಿಯಲ್ಲಿ ಯುವತಿ ವೈದ್ಯರಿಗೆ ನನಗೆ ಲವ್ ಯು ಜಿಂದಗಿ ಹಿಂದಿ ಸಾಂಗ್ ಕೇಳಿಸಿ ಎಂದು ಹೇಳಿದ್ದಾಳೆ. ಯುವತಿಯ ಕೋರಿಕೆಗೆ ಖುಷಿಯಾದ ವೈದ್ಯರು ಲವ್ ಯು ಜಿಂದಗಿ ಹಾಡನ್ನು ಕೇಳಿಸಿದ್ದಾರೆ. ಇದಕ್ಕೆ ಯುವತಿ ತಲೆದೂಗಿದ್ದಾಳೆ.

    ಮೋನಿಕಾ ಲಂಗೇಶ್ ಎನ್ನುವರು ಟ್ವಿಟ್ಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಸಕತ್ ವೈರಲ್ ಆಗಿದೆ.

    ಇದನ್ನೂ ಓದಿ; ಮದುವೆಯ ಮಾರನೇ ದಿನವೇ ವರನಿಗೆ ಕರೊನಾ ದೃಢ! ಕುದುರೆ ಮೆರವಣಿಗೆ ಬಂದವನನ್ನು ಹೊತ್ತೊಯ್ದ ಯಮರಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts