More

    ಮುಳುವಾಗುತ್ತಿದೆ ಮುಂಬೈ ನಂಜು

    ಮಂಡ್ಯ: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮುಂಬೈನಿಂದ ತವರಿಗೆ ಆಗಮಿಸಿ, ವಸತಿ ಕ್ವಾರಂಟೈನ್‌ನಲ್ಲಿದ್ದ 71 ಜನರಿಗೆ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ160ಕ್ಕೆ ಏರಿಕೆಯಾಗಿದೆ.
    ಮಂಗಳವಾರ ಮಧ್ಯಾಹ್ನ ಬಿಡುಗಡೆಯಾದ ಬುಲೆಟಿನ್‌ನಲ್ಲಿ ರಾಜ್ಯದ 127 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 62 ಜನ ಜಿಲ್ಲೆಯವರಿದ್ದರೆ ಸಂಜೆ ಬಿಡುಗಡೆ ಆದ ಬುಲೆಟಿನ್‌ನಲ್ಲಿ 149 ಜನರಿಗೆ ದೃಢಪಟ್ಟು, ಜಿಲ್ಲೆಯವರ ಸಂಖ್ಯೆ 71 ಆಯಿತು. 71ರಲ್ಲಿ ಕೆ.ಆರ್.ಪೇಟೆಯ 50, ನಾಗಮಂಗಲದ 21 ಜನರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
    71 ಜನರಲ್ಲಿ 31 ಪುರುಷರು, 25 ಮಹಿಳೆಯರು, 15 ಮಕ್ಕಳು (7 ಗಂಡು, 8 ಹೆಣ್ಣು) ಇದ್ದು 1 ವರ್ಷದ 2ಮಕ್ಕಳಿಂದ ಹಿಡಿದು 65 ವರ್ಷದವರು ಇದ್ದಾರೆ. ಪಿ.1271 ಗಂಡು ಮಗು (1ವರ್ಷ), ಪಿ.1272 ಬಾಲಕಿ-16, ಮಹಿಳೆ-26, ಮಹಿಳೆ-60, ಮಹಿಳೆ-40, ಬಾಲಕ-17, ಮಹಿಳೆ-20, ಪುರುಷ-50, ಮಹಿಳೆ-52, ಬಾಲಕ-9, ಮಹಿಳೆ-33, ಬಾಲಕ-18, ಪುರುಷ-65, ಪುರುಷ-34, ಪಿ.1285 ಪುರುಷ-25.
    ಪಿ.1315 ಪುರುಷ-38, ಪಿ.1316 ಮಹಿಳೆ-30, ಪುರುಷ-20, ಪುರುಷ-45, ಬಾಲಕ-12, ಮಹಿಳೆ-39, ಬಾಲಕಿ-18, ಮಹಿಳೆ-19, ಬಾಲಕಿ-1, ಮಹಿಳೆ-50, ಪುರುಷ-52, ಮಹಿಳೆ-45, ಪುರುಷ-52, ಪುರುಷ-44, ಬಾಲಕಿ-12, ಮಹಿಳೆ-32, ಬಾಲಕಿ-12, ಪುರುಷ-34, ಬಾಲಕ-10, ಮಹಿಳೆ-28, ಪುರುಷ-41, ಬಾಲಕ-10, ಮಹಿಳೆ-35, ಮಹಿಳೆ-47, ಪುರುಷ-40, ಬಾಲಕಿ-16, ಮಹಿಳೆ-34, ಪುರುಷ-37, ಪುರುಷ-32, ಬಾಲಕಿ-8, ಪುರುಷ-40, ಪುರುಷ-38, ಮಹಿಳೆ-31, ಪುರುಷ-37, ಮಹಿಳೆ-40, ಮಹಿಳೆ-33, ಬಾಲಕಿ-15, ಪುರುಷ-47, ಪುರುಷ-35, ಪುರುಷ-54, ಪುರುಷ-46, ಮಹಿಳೆ-33, ಬಾಲಕ-5, ಪುರುಷ-26, ಬಾಲಕ-15, ಮಹಿಳೆ-27, ಪಿ.1361 ಪುರುಷ-35.
    ಪಿ.1379 ಮಹಿಳೆ-36, ಪುರುಷ-30, ಪುರುಷ-26, ಬಾಲಕಿ-13, ಪುರುಷ-48, ಪುರುಷ-20, ಬಾಲಕಿ-17, ಮಹಿಳೆ-37, ಪಿ.1387 ಪುರುಷ-21 ಸೋಂಕಿತರಾಗಿದ್ದಾರೆ.
    ಈ ಎಲ್ಲರೂ ಮುಂಬೈನ ಸಂತಾಕ್ರೂಸ್, ಹಂದೇರಿ, ನೆಹರುನಗರ, ವಿಲೆಪಾರ್ಲೆ, ವೆಸ್ಟ್‌ಮುಂಬೈನಲ್ಲಿ ಹೋಟೆಲ್‌ನಲ್ಲಿ ಕೆಲಸ, ಚಾಲಕರು, ಮನೆ ಕೆಲಸ ಮಾಡಿಕೊಂಡು ಜೀವನ ರೂಪಿಸಿಕೊಂಡಿದ್ದರು. ಮಹಾರಾಷ್ಟ್ರದಲ್ಲಿ ಕರೊನಾ ಡಂಗೂರು ಬಾರಿಸುತ್ತಿರುವ ಹಿನ್ನೆಲೆಯಲ್ಲಿ ಮೇ 14, 15, 16ರಂದು ಮುಂಬೈನಿಂದ ವಿವಿಧ ವಾಹನಗಳ ಮೂಲಕ ಮುಂಬೈ, ನಿಪ್ಪಾಣಿ ಚೆಕ್‌ಪೋಸ್ಟ್ ಮೂಲಕ ನಾಗಮಂಗಲ ತಾಲೂಕಿನ ಬೆಳ್ಳೂರು, ಕೆ.ಆರ್.ಪೇಟೆ ತಾಲೂಕಿನ ಆನೆಗೊಳ ಚೆಕ್‌ಪೋಸ್ಟ್‌ಗೆ ಆಗಮಿಸಿದ್ದರು.

    ಚೆಕ್‌ಪೋಸ್ಟ್ ಸಿಬ್ಬಂದಿ ಇವರನ್ನು ತಪಾಸಣೆ ಮಾಡಿ ವಸತಿ ಕ್ವಾರಂಟೈನ್ ಮಾಡಿ ಎಲ್ಲರ ಗಂಟಲು ದ್ರವವನ್ನು ಅವರು ಬಂದ ದಿನವೇ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈ ದಿನ ವರದಿ ಬಂದಿದ್ದು, 71 ಜನರಿಗೆ ಪಾಸಿಟಿವ್ ಇರುವುದು ಗೊತ್ತಾಗಿದೆ. ಎಲ್ಲರನ್ನು ಮಿಮ್ಸ್ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮಿಮ್ಸ್ ವೈದ್ಯರು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಶತಕ ದಾಟಿದ ಕೆ.ಆರ್.ಪೇಟೆ: ಮುಂಬೈ ನಂಟು ಅಧಿಕವಾಗಿರುವ ಕೆ.ಆರ್.ಪೇಟೆ ತಾಲೂಕಿನಲ್ಲಿ ನಿರೀಕ್ಷೆಯಂತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸೋಂಕಿತರ ಸಂಖ್ಯೆ ಈಗ 104ಕ್ಕೆ ಏರಿಕೆಯಾಗಿದೆ. ಇನ್ನೂ ಅನೇಕ ಜನತೆ ಬರುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 200 ದಾಟಬಹುದು ಎನ್ನಲಾಗುತ್ತಿದೆ.

    ಇತ್ತ ನಾಗಮಂಗಲದಲ್ಲಿ ಸೋಂಕಿತರ ಸಂಖ್ಯೆ ಈಗ ಕಾಲು ಶತಕವಾಗಿದೆ. ಆರಂಭದಲ್ಲಿ ಸೋಂಕು ಕಾಣಿಸಿಕೊಂಡಿದ್ದ ವ್ಯಕ್ತಿಗೆ ಗುಣಮುಖನಾಗಿದ್ದು, ಮತ್ತೇ ಮೂವರಿಗೆ ಸೋಂಕು ದೃಢಪಟ್ಟಿತ್ತು. ಈಗ 21 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

    ಆತಂಕ ಬೇಡ, ಜಾಗೃತರಾಗಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿರುವುದರಿಂದ ಜನತೆ ಆತಂಕ ಪಡುವುದು ಬೇಡ. ಬದಲಿಗೆ ಜಾಗೃತರಾಗಿರಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
    ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ 350 ಹಾಸಿಗೆಗಳನ್ನು ಸಿದ್ಧಪಡಿಸಿದ್ದೇವೆ. ಇನ್ನೂ ಹೆಚ್ಚು ಹಾಸಿಗೆಗಳನ್ನು ಸಿದ್ಧಪಡಿಸುತ್ತಿದ್ದೇವೆ.
    ಮುಂಬೈನಿಂದ ಬಂದ ಎಲ್ಲರನ್ನು ವಸತಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಿಗೆ ಹರಡುವುದು ಕಡಿಮೆಯಾಗುತ್ತಿದೆ. ವಸತಿ ಕ್ವಾರಂಟೈನ್ ಮಾಡುವುದಕ್ಕೆ ಯಾರು ವಿರೋಧಿಸದೇ ಸಹಕರಿಸಬೇಕೆಂದು ಅವರು ಕೋರಿದ್ದಾರೆ.
    ಇನ್ನೂ ಹೆಚ್ಚು ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಯುತ್ತಿದೆ. ವಸತಿ ಶಾಲೆಗಳನ್ನು ಪರಿಶೀಲನೆ ಮಾಡಿದ್ದು, ಮುಂಬೈ ಸೇರಿ ಹೊರಗಿನಿಂದ ಬರುವ ಎಲ್ಲರನ್ನು ಕ್ವಾರಂಟೈನ್ ಮಾಡುತ್ತೇವೆ. ಉತ್ತಮ ಊಟದ ವ್ಯವಸ್ಥೆಯನ್ನು ತಾಲೂಕು ಆಡಳಿತಗಳು ಮಾಡುತ್ತಿವೆ.
    ಜನತೆ ಆತ್ಮವಿಶ್ವಾಸದಿಂದ ಇದ್ದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಜಿಲ್ಲಾಡಳಿತದ ಜತೆ ಸಹಕರಿಸಿದರೆ ಮಾರಕ ಕರೊನಾ ವಿರುದ್ಧ ಗೆಲುವು ಸಾಧಿಸಬಹುದು ಎಂದವರು ಹೇಳಿದ್ದಾರೆ.

    ಜಿಲ್ಲೆಯ ಜನರು ಆತಂಕ ಪಡಬೇಕಿಲ್ಲ
    ಮಂಡ್ಯ: ಕರೊನಾ ಸೋಂಕಿತರ ಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿದ್ದರೂ, ಜಿಲ್ಲೆಯ ಜನರು ಆತಂಕ ಪಡಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.
    ಬೆಂಗಳೂರಿನ ವಿಕಾಸಸೌಧದಲ್ಲಿ ಮಂಗಳವಾರ ಜಿಲ್ಲೆಯ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಸೋಂಕಿತರೆಲ್ಲ ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗಿರುವವರು. ಅವರಿಂದ ಜಿಲ್ಲೆಯ ಜನರಿಗೆ ಸೋಂಕು ಹರಡಲು ಅವಕಾಶವಿಲ್ಲ ಎಂದರು.
    ಹೊರ ರಾಜ್ಯದಿಂದ ಜಿಲ್ಲೆಗೆ ಬರಲು 2 ಸಾವಿರಕ್ಕೂ ಹೆಚ್ಚು ಜನ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಈಗಾಗಲೇ ಸುಮಾರು 1,400 ಜನ ಬಂದಿದ್ದಾರೆ. ಇವರನ್ನೆಲ್ಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾದರೂ, ಅವರಿಂದ ಸ್ಥಳೀಯರಿಗೆ ಹರಡುವ ಸಾಧ್ಯತೆ ಇಲ್ಲ ಎಂದರು.
    ಕ್ವಾರಂಟೈನ್ ಆಗಿರುವವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಗುಣಮಟ್ಟದ ಊಟ, ತಿಂಡಿ ನೀಡಬೇಕು. ಅವರಿಂದ ಯಾವುದೇ ರೀತಿಯ ದೂರು ಬರಬಾರದು. ಅಗತ್ಯ ಇರುವ ಎಲ್ಲ ಸೌಲಭ್ಯ ಕಡ್ಡಾಯವಾಗಿ ನೀಡಬೇಕು. ಅಂತೆಯೇ, ಕ್ವಾರಂಟೈನ್ ಅವಧಿ ಮುಗಿಸಿದವರಿಗೆ ಮತ್ತೊಮ್ಮೆ ಪರೀಕ್ಷೆ ಮಾಡಿ ನೆಗೆಟಿವ್ ಬಂದವರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಇನ್ನು ಜಿಲ್ಲೆಗೆ ಆಗಮಿಸಲು ಇರುವ ಎಲ್ಲ ಮಾರ್ಗಗಳನ್ನ ಬಂದ್ ಮಾಡಲಾಗಿದೆ. ಜಿಲ್ಲೆಗೆ ತಮಿಳುನಾಡು, ಆಂಧ್ರ, ಉತ್ತರಾಖಂಡ್, ಪಶ್ಚಿಮಬಂಗಾಳ, ಕೇರಳ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್‌ನಿಂದ ಬಂದಿದ್ದಾರೆ ಎಂದರು. ಕೋವಿಡ್-19 ಪತ್ತೆ ಮಾಡಲು ಪ್ರತಿನಿತ್ಯ ಹೆಚ್ಚು ಪರೀಕ್ಷೆ ನಡೆಸಬೇಕು. ಪರೀಕ್ಷಾ ಸಾಧನ ಕೊರತೆ ಇದ್ದರೆ ತಕ್ಷಣ ತಿಳಿಸಬೇಕು. ಕ್ವಾರಂಟೈನ್‌ಗೆ ಸ್ಥಳಾವಕಾಶದ ಕೊರತೆ ಇದ್ದರೆ, ಅನುದಾನದ ಅಗತ್ಯ ಇದ್ದರೆ ತಿಳಿಸಬೇಕು. ಆರೋಗ್ಯ ಸೇತು ಆ್ಯಪ್ ಅನ್ನು ಸಾರ್ವಜನಿಕರು ಅಳವಡಿಸಿಕೊಳ್ಳಲು ಮಾಹಿತಿ ನೀಡಬೇಕು. ಕ್ವಾರಂಟೈನಲ್ಲಿರುವವರ ಪೈಕಿ 500ಕ್ಕೂ ಹೆಚ್ಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts