More

    ಸಹಜ ಸ್ಥಿತಿಗೆ ಬಂದ ಬಳ್ಳಾರಿ, ತೆರೆದ ಅಂಗಡಿ ಮುಂಗಟ್ಟುಗಳು

    ಬಳ್ಳಾರಿ: ಲಾಕ್‌ಡೌನ್ ಸಡಿಲಿಕೆ ಜಿಲ್ಲೆಯ ಜನರನ್ನು ನಿರಾಳವಾಗಿಸಿದೆ. ಮೂರನೇ ಹಂತದ ಲಾಕ್‌ಡೌನ್ ಮೊದಲ ದಿನವಾದ ಸೋಮವಾರ ಕರೊನಾ ವೈರಾಣುವಿನ ಯಾವುದೇ ಭಯವಿಲ್ಲದೆ ಜನರು ಮಾರುಕಟ್ಟೆಗೆ ಬಂದಿದ್ದರು.

    ಜಿಲ್ಲೆ ಕಿತ್ತಳೆ ವಲಯದಲ್ಲಿರುವುದರಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೊಸಪೇಟೆ ನಗರ ಹೊರತುಪಡಿಸಿ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಚಿನ್ನಾಭರಣ, ಬಟ್ಟೆ, ಚಪ್ಪಲಿ ಅಂಗಡಿಗಳಲ್ಲಿ ವ್ಯಾಪಾರ ಆರಂಭವಾಗಿದೆ. ಜನರು ಎಂದಿನಂತೆ ಖರೀದಿಯಲ್ಲಿ ತೊಡಗಿದ್ದರು. ಲಾಕ್‌ಡೌನ್‌ದಿಂದಾಗಿ ಕಳೆಗುಂದಿದ್ದ ರಸ್ತೆ ಹಾಗೂ ಮಾರುಕಟ್ಟೆಗೆ ಮತ್ತೆ ಜೀವ ಕಳೆ ಬಂದಂತಾಗಿತ್ತು.

    ಆಟೋಗಳ ಸಂಚಾರ ಆರಂಭವಾಗಿದೆ. ರಸ್ತೆಗಳು ಜನರು ಹಾಗೂ ವಾಹನಗಳಿಂದ ಗಿಜಿಗಿಡುತ್ತಿದ್ದವು. ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತಿದ್ದ ನಗರದ ಬೆಂಗಳೂರು ರಸ್ತೆ ಹಾಗೂ ಕಾಳಮ್ಮ ಬೀದಿಯಲ್ಲಿ ಎಂದಿನಂತೆ ಜನರ ದಟ್ಟಣೆ ಕಂಡುಬಂತು. ಕಾಳಮ್ಮ ಬೀದಿ ವೃತ್ತದಲ್ಲಿ ವಾಹನಗಳ ದಟ್ಟಣೆಯಿಂದ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ರಸ್ತೆ ಬದಿ ವ್ಯಾಪಾರಕ್ಕೂ ಚಾಲನೆ ಸಿಕ್ಕಿದೆ. ರಸ್ತೆ ಬದಿ ವ್ಯಾಪಾರಿಗಳು ನಿಗದಿತ ವಲಯದಲ್ಲಿ ಮಾತ್ರ ವಹಿವಾಟು ನಡೆಸಬೇಕೆಂಬ ಜಿಲ್ಲಾಡಳಿತದ ಸೂಚನೆ ಗಣನೆಗೇ ತೆಗೆದುಕೊಳ್ಳಲಿಲ್ಲ.

    ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಪರಸ್ಪರ ಅಂತರ ಕಾಪಾಡಬೇಕೆಂಬ ಮಹಾನಗರ ಪಾಲಿಕೆಯ ಆದೇಶವೂ ಸಮರ್ಪಕವಾಗಿ ಜಾರಿಯಾಗಿಲ್ಲ. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಇಲ್ಲ. ಅಂತರಜಿಲ್ಲೆ ಹಾಗೂ ಅಂತಾರಾಜ್ಯ ಸಂಚಾರ ನಿರ್ಬಂಧ ಮುಂದುವರಿದಿದೆ ಎಂಬುದನ್ನು ಹೊರತುಪಡಿಸಿದರೆ ಮೂರನೇ ಹಂತದ ಲಾಕ್‌ಡೌನ್ ಯಾವುದೇ ಪರಿಣಾಮ ಬೀರಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts