More

    ಕೋವಿಡ್-19 ಸೋಂಕಿಗೆ ಬಲಿಯಾದವರಲ್ಲಿ ಪುರುಷರೇ ಅಧಿಕ!

    ಬೆಂಗಳೂರು: ರಾಜಧಾನಿಯಲ್ಲಿ ಈವರೆಗೆ ಕೋವಿಡ್ ಸೋಂಕಿಗೆ 6,606 ಮಂದಿ ಮೃತಪಟ್ಟಿದ್ದು, ಈ ಪೈಕಿ ಶೇ.66 ಮಂದಿ ಪುರುಷರಾಗಿದ್ದಾರೆ. ರಾಜಧಾನಿಯಲ್ಲಿ ಕೋವಿಡ್ 2ನೇ ಅಲೆ ಅಬ್ಬರ ಹೆಚ್ಚಾಗಿದ್ದು ಸೋಂಕು ತೀವ್ರ ವೇಗವಾಗಿ ಹರಡುತ್ತಿದೆ. ಏಪ್ರಿಲ್​ನಲ್ಲಿ 3.19 ಲಕ್ಷ ಜನರಿಗೆ ಸೋಂಕು ತಗುಲಿದ್ದು, 1,907 ಜನ ಮೃತಪಟ್ಟಿದ್ದಾರೆ.

    ಕೋವಿಡ್-19 ಸೋಂಕಿಗೆ ಬಲಿಯಾದವರಲ್ಲಿ ಪುರುಷರೇ ಅಧಿಕ!ಪ್ರತಿನಿತ್ಯ ಉದ್ಯೋಗ, ವ್ಯಾಪಾರ, ವ್ಯವಹಾರ, ಸಭೆ- ಸಮಾರಂಭ, ಅಗತ್ಯ ಸೇವೆ ಆಧಾರದಲ್ಲಿ ಮನೆಯಿಂದ ಹೊರಗೆ ಬರುವ ಪುರುಷರೇ ಅಧಿಕವಾಗಿ ಮೃತಪಟ್ಟಿದ್ದಾರೆ. ಈವರೆಗೆ ಸೋಂಕಿನಿಂದ ಮೃತಪಟ್ಟವರಲ್ಲಿ 4,292 (ಶೇ.66) ಮಂದಿ ಪುರುಷರಾಗಿದ್ದಾರೆ. ಇನ್ನು ಸೋಂಕಿತರ ಸಂಪರ್ಕಕ್ಕೆ ಬಂದ ಮಹಿಳೆಯರು ಕೇವಲ 2,225 (ಶೇ.34) ಜನರು ಸಾವಿಗೀಡಾಗಿದ್ದಾರೆ. ರಾಜಧಾನಿಯಲ್ಲಿ ಈವರೆಗೆ 7.97 ಲಕ್ಷ ಜನರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಈ ಪೈಕಿ 4.85 ಲಕ್ಷ ಪುರುಷರು, 3.11 ಲಕ್ಷ ಮಹಿಳೆಯರು ಮತ್ತು 89 ಮಂದಿ ತೃತೀಯ ಲಿಂಗಿಗಳಿದ್ದಾರೆ. 20 ರಿಂದ 40 ವರ್ಷದೊಳಗಿನ ಶೇ.36 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಮಾರ್ಚ್​ನಲ್ಲಿ ಶೇ.94 ಇದ್ದ ಗುಣಮುಖರ ಪ್ರಮಾಣ ಈಗ ಶೇ.64ಕ್ಕೆ ಇಳಿಮುಖವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.81 ಲಕ್ಷಕ್ಕೆ ಏರಿಕೆಯಾಗಿದೆ.

     

    ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts