More

    ದ.ಕ. 272, ಉಡುಪಿ 152 ಪಾಸಿಟಿವ್

    ಮಂಗಳೂರು/ಉಡುಪಿ: ಆರು ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ದ.ಕ.ಜಿಲ್ಲೆಯ ಬಂಟ್ವಾಳ ತಾಕಲೂಕಿನ ಮಂಚಿ ಕುಕ್ಕಾಜೆಯ ಮನೆಯನ್ನು ಆರೋಗ್ಯ ಇಲಾಖೆ ಹೊಸ ಕಂಟೈನ್ಮೆಂಟ್ ವಯಲವೆಂದು ಗುರುತಿಸಿದೆ. ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 272 ಮಂದಿಯಲ್ಲಿ ಕರೊನಾ ದೃಢಪಟ್ಟಿದೆ. 131 ಮಂದಿ ಗುಣವಾಗಿದ್ದು, ಸಕ್ರಿಯ ಪ್ರಕರಣಗಳು 1764 ಕ್ಕೆ ಏರಿದೆ. ನಗರದ ಇಬ್ಬರು ಹಿರಿಯ ಪತ್ರಕರ್ತರಲ್ಲಿ ಸೋಂಕು ದೃಢಪಟಿದೆ.

    ಸ್ಮಾರ್ಟ್ ಸಿಟಿ ಯೋಜನೆಯ ಇಂಟಿಗ್ರೇಟೆಡ್ ಕಮಾಂಡಿಂಗ್ ಸೆಂಟರ್ ಕೋವಿಡ್ ನಿಯಂತ್ರಣ ಸಂಬಂಧಿಸಿದ ತಾಂತ್ರಿಕ ಮಾಹಿತಿ ಸಂಗ್ರಹ ಮತ್ತು ನಿರ್ವಹಣೆಗೆ ಪೂರಕ ವಾರ್ ರೂಂ ಆಗಿ ಕಾರ್ಯನಿರ್ವಹಿಸಲಿದೆ. ಕೋವಿಡ್ ಸೋಂಕಿತರಿಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಬೆಡ್‌ಗಳ ನಿರ್ವಹಣೆ, ಪೂರಕ ದಾಖಲೆಗಳ ಸಂಗ್ರಹ ನಿರ್ವಹಣೆಗೆ ಜಿಲ್ಲೆಯ ವೈದ್ಯಕೀಯ ಕಾಲೇಜುಗಳ ತಾಂತ್ರಿಕ ವಿಭಾಗದ ಸಿಬ್ಬಂದಿ ಬಳಕೆ ಕುರಿತು ಸಮಾಲೋಚನೆ ನಡೆಯಿತು. ಉಡುಪಿ ಜಿಲ್ಲೆಯಲ್ಲಿ ಭಾನುವಾರ 152 ಮಂದಿಗೆ ಕರೊನಾ ದೃಢಪಟ್ಟಿದೆ. ಸೋಂಕಿತರಲ್ಲಿ 107 ಮಂದಿ ಉಡುಪಿ, 28 ಮಂದಿ ಕುಂದಾಪುರ, 16 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. ಓರ್ವ ಹೊರ ಜಿಲ್ಲೆಯವರು. ಕಾಸರಗೋಡು ಜಿಲ್ಲೆಯ 622 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.

    ಒಂದೇ ದಿನ 93,900 ರೂ. ವಸೂಲಿ!: ಉಡುಪಿ: ಜಿಲ್ಲೆಯಲ್ಲಿ ಶನಿವಾರ ಮಾಸ್ಕ್ ಧರಿಸದವರಿಂದ 93,900 ರೂ. ದಂಡ ವಸೂಲಿ ಮಾಡಲಾಗಿದೆ. ಪೊಲೀಸ್ ಇಲಾಖೆ 889 ಜನರಿಗೆ 88,900 ರೂ.ದಂಡ ವಿಧಿಸಿದ್ದು, ನಗರ ಸ್ಥಳೀಯಾಡಳಿತ ಸಂಸ್ಥೆಗಳು 20 ಜನರಿಂದ 2,000 ರೂ., ಗ್ರಾಪಂ ವ್ಯಾಪ್ತಿಯಲ್ಲಿ 8 ಜನರಿಂದ 800 ರೂ., ಅಬಕಾರಿ ಇಲಾಖೆ 10 ಜನರಿಂದ 1000 ರೂ., ಕಂದಾಯ ಇಲಾಖೆ 12 ಜನರಿಂದ 1200 ರೂ., ದಂಡ ವಸೂಲಿ ಮಾಡಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 27995 ಜನರಿಗೆ 2975900 ರೂ. ದಂಡ ವಿಧಿಸಲಾಗಿದೆ.

    ಕೋವಿಡ್ ಕೇರ್ ಸೆಂಟರ್‌ಗಳಾಗಿ ಬಳಸಲು ನಗರದ ಶಿವಭಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆ, ಸುರತ್ಕಲ್ ಎನ್‌ಐಟಿಕೆ ಹಾಸ್ಟೆಲ್ ಹಾಗೂ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಸೋಂಕಿಗೆ ಒಳಗಾದವರ ಪೈಕಿ ಹೆಚ್ಚಿನವರು ಮನೆಯಲ್ಲೇ ಪ್ರತ್ಯೇಕವಾಗಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕಿನಿಂದ ಸಣ್ಣ ರೀತಿಯ ಸಮಸ್ಯೆ ಎದುರಿಸುವವರಿಗೆ ಕೋವಿಡ್ ಕೇರ್ ಬಳಕೆಯಾಗಲಿದೆ.
    – ಡಾ.ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts