More

    ರಾಜಧಾನಿಯಲ್ಲಿ ಒಂದು ಲಕ್ಷಕ್ಕೆ ತಲುಪಿದ ಸೋಂಕಿತರ ಸಂಖ್ಯೆ; ನಿನ್ನೆ ರಾಜ್ಯಾದ್ಯಂತ 7,385 ಜನರಿಗೆ ಕೋವಿಡ್​

    ಬೆಂಗಳೂರು: ರಾಜ್ಯದಲ್ಲಿ ಬುಧವಾರ ಒಂದೇ ದಿನ 7,385 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಕೇಸ್​ಗಳ ಸಂಖ್ಯೆ 2,56,975ಕ್ಕೆ ತಲುಪಿದೆ. ಈ ಪೈಕಿ ರಾಜಧಾನಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಲಕ್ಷಕ್ಕೆ ಸನಿಹದಲ್ಲಿದ್ದು, ಈವರೆಗಿನ ಸಂಖ್ಯೆ 99,822 ಆಗಿದೆ.

    ನಿನ್ನೆ 6,231 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೋವಿಡ್​ನಿಂದ ಚೇತರಿಸಿಕೊಂಡವರ ಸಂಖ್ಯೆ ಒಟ್ಟಾರೆ 1,70,381ಕ್ಕೆ ಏರಿಕೆಯಾಗಿದೆ. ಅಂತೆಯೇ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 82,149 ಆಗಿದೆ.

    ಇದನ್ನೂ ಓದಿ; ಶುಭಸುದ್ದಿ…! ಮೋದಿ ಬಯಸಿದಲ್ಲಿ ತುರ್ತು ಬಳಕೆಗೆ ಸಜ್ಜಾಗುತ್ತೆ ದೇಶಿಯ ಕರೊನಾ ಲಸಿಕೆ 

    ಇನ್ನೊಂದೆಡೆ ಸಾವಿನ ಪ್ರಕರಣಗಳು ಕೂಡ ಹೆಚ್ಚಾಗುತ್ತಲೇ ಇವೆ. ಕಳೆದೊಂದು ವಾರದಿಂದ ಪ್ರತಿದಿನ ಸಾಯುವವರ ಸಂಖ್ಯೆ ನೂರಕ್ಕಿಂತಲೂ ಹೆಚ್ಚಾಗಿದೆ. ನಿನ್ನೆ ಕೂಡ 102 ಜನರ ಮೃತಪಟ್ಟಿದ್ದಾರೆ. ಜತೆಗೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 702ಕ್ಕೆ ತಲುಪಿದೆ.

    ಇನ್ನು, ರಾಜಧಾನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ನಿನ್ನೆ 2,912 ಜನರು ಸೋಂಕಿಗೆ ಒಳಗಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 99,822 ಆಗಿದೆ. 1,981 ಜನರು ಡಿಸ್ಚಾರ್ಜ್​ ಆಗಿದ್ದು, ಒಟ್ಟಾರೆ ಗುಣವಾದವರು 64,022. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 34,186 ಆಗಿದೆ.

    ಇದನ್ನೂ ಓದಿ; ಎಂಟು ವರ್ಷಗಳಿಂದ ಕರೊನಾವನ್ನು ಪೋಷಿಸುತ್ತಿತ್ತಾ ಚೀನಾ…? 

    ಕರೊನಾದಿಂದಾಗಿ ರಾಜಧಾನಿಯಲ್ಲಿ ನಿನ್ನೆ ಮೃತಪಟ್ಟವರ ಸಂಖ್ಯೆ 25. ಒಟ್ಟಾರೆ ಸಾವಿನ ಸಂಖ್ಯೆ 1,613ಕ್ಕೆ ಏರಿಕೆಯಾಗಿದೆ. ಬೆಂಗಳೂರು ಹೊರತುಪಡಿಸಿ ಬಳ್ಳಾರಿಯಲ್ಲಿ ಅತಿ ಹೆಚ್ಚು ಕರೊನಾ ಪ್ರಕರಣಗಳಿದ್ದು, ಈವರೆಗೆ 16,200 ಆಗಿದೆ.

    ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ

    ರಾಜಧಾನಿಯಲ್ಲಿ ಒಂದು ಲಕ್ಷಕ್ಕೆ ತಲುಪಿದ ಸೋಂಕಿತರ ಸಂಖ್ಯೆ; ನಿನ್ನೆ ರಾಜ್ಯಾದ್ಯಂತ 7,385 ಜನರಿಗೆ ಕೋವಿಡ್​

    ಅನುಕಂಪ ಆಧಾರದ ಸರ್ಕಾರಿ ಕೆಲಸ; ಗಳಿಸಿದ್ದು ಕೆಜಿಗಟ್ಟಲೇ ಚಿನ್ನ, ಬೆಳ್ಳಿ; ಕೋಟ್ಯಂತರ ಮೌಲ್ಯದ ಸ್ವತ್ತು ವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts