More

    ದ.ಕ. ಪಾಸಿಟಿವಿಟಿ ಶೇ.4.50ಕ್ಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 377 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ 4.50ಕ್ಕಿಳಿದಿದೆ. 540 ಮಂದಿ ಡಿಸ್ಚಾರ್ಜ್ ಆಗಿದ್ದು, 6414 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 9,04,649ಕ್ಕೆ, ಸಾವಿನ ಸಂಖ್ಯೆ 1122ಕ್ಕೆ ಏರಿಕೆಯಾಗಿದೆ.

    1 ಬ್ಲ್ಯಾಕ್ ಫಂಗಸ್ ಪ್ರಕರಣ: ಜಿಲ್ಲೆಯ ವ್ಯಕ್ತಿಯಲ್ಲಿ ಶುಕ್ರವಾರ 1 ಬ್ಲ್ಯಾಕ್ ಫಂಗಸ್ (ಮ್ಯೂಕೋರ್ ಮೈಕೋಸಿಸ್) ಪ್ರಕರಣ ದಾಖಲಾಗಿದೆ. 28 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 9 ದಕ್ಷಿಣ ಕನ್ನಡ ಹಾಗೂ 19 ಹೊರ ಜಿಲ್ಲೆಯವರು.
    8822 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 8822 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಬಂಟ್ವಾಳ 270, ಬೆಳ್ತಂಗಡಿ 450, ಮಂಗಳೂರು 7985, ಪುತ್ತೂರು 8, ಸುಳ್ಯ 109 ಮಂದಿ ಲಸಿಕೆ ಪಡೆದರು. ಕಾಸರಗೋಡು ಜಿಲ್ಲೆಯ 729 ಮಂದಿಗೆ ಶುಕ್ರವಾರ ಕೋವಿಡ್-19 ಬಾಧಿಸಿದೆ. ಜಿಲ್ಲೆಯ 381 ಮಂದಿ ಗುಣಮುಖರಾಗಿದ್ದಾರೆ.

    ಉಡುಪಿ ಶೇ.3.28ಕ್ಕೆ ಇಳಿಕೆ: ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 92 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಉಡುಪಿಯಲ್ಲಿ 39 ವರ್ಷದ ಮಹಿಳೆ ಹಾಗೂ 65 ವರ್ಷದ ಪುರುಷ ಮೃತರಾಗಿದ್ದಾರೆ. ಸೋಂಕಿತರಲ್ಲಿ 49 ಉಡುಪಿ, 24 ಕುಂದಾಪುರ, 18 ಮಂದಿ ಕಾರ್ಕಳ ತಾಲೂಕಿನವರು, ಓರ್ವ ಹೊರ ಜಿಲ್ಲೆಯವರು. ಇವರಲ್ಲಿ 50 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 17 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 75 ಮಂದಿ ಹೋಂ ಐಸೋಲೇಶನ್ನಲ್ಲಿದ್ದಾರೆ. 160 ಮಂದಿ ಗುಣವಾಗಿದ್ದಾರೆ. 1260 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಶುಕ್ರವಾರ ಪಾಸಿಟಿವಿಟಿ ರೇಟ್ ಶೇ.3.28ಕ್ಕೆ ಇಳಿಕೆಯಾಗಿದೆ. ಹೊರ ಜಿಲ್ಲೆಯ ಓರ್ವ ರೋಗಿ ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ದಾಖಲಾಗಿದ್ದು, ಸದ್ಯ 5 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts