More

    ಮತ್ತೆ ಕಲಬುರಗಿಯನ್ನು ಹಿಂದಿಕ್ಕಿದ ಉಡುಪಿ: ರಾಜ್ಯದಲ್ಲಿಂದು 257 ಹೊಸ ಕೋವಿಡ್ 19 ಪ್ರಕರಣ

    ಬೆಂಗಳೂರು: ಕರೊನಾ ಕೋವಿಡ್​ 19 ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಇಂದು 4320ಕ್ಕೆ ತಲುಪಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ನಡುವಿನ 24 ಗಂಟೆಯ ಅವಧಿಯಲ್ಲಿ ಹೊಸದಾಗಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 257. ಇಂದು ಮೃತಪಟ್ಟವರ ಸಂಖ್ಯೆ 4. ಇಬ್ಬರು ಬೆಂಗಳೂರು ನಗರದ ಮಹಿಳೆಯರು. ಇನ್ನೊಬ್ಬರು ದಾವಣಗೆರೆ, ಮತ್ತೊಬ್ಬರು ಗದಗದವರು. ಈ ಪೈಕಿ ಮೂವರು 60 ವರ್ಷ ಮೇಲ್ಪಟ್ಟವರಾದರೆ, ಒಬ್ಬರು 44 ವರ್ಷದವರು. ಮೃತರಾದವರ ಒಟ್ಟು ಸಂಖ್ಯೆ 57ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಬ್ಬರು ಅನ್ಯಕಾರಣಕ್ಕೆ ಮೃತರಾಗಿದ್ದಾರೆ.

    ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…

    ಇದೇ ರೀತಿ ಸದ್ಯ ಸಕ್ರಿಯವಾಗಿರುವ ಕೋವಿಡ್ 19 ಪ್ರಕರಣಗಳ ಸಂಖ್ಯೆ 2651. ಈ ದಿನ ಆಸ್ಪತ್ರೆಯಿಂದ ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ 106. ಇದರೊಂದಿಗೆ ಇದುವರೆಗೆ ಸೋಂಕು ಮುಕ್ತರಾದವರ ಸಂಖ್ಯೆ 1,610. ವಿಶೇಷ ಎಂದರೆ ಕಲಬರುಗಿಯಲ್ಲಿ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ. ನಿನ್ನೆ ಎರಡನೇ ಸ್ಥಾನದಲ್ಲಿದ್ದ ಉಡುಪಿಯಲ್ಲಿ ಇಂದು 92 ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಗಳ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಏರಿದೆ. ಇಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 564.

    ಇದನ್ನೂ ಓದಿ: ಒಬ್ಬನಿಗೆ ಸೋಂಕು, 20 ಸಾವಿರ ಜನರಿಗೆ ಆತಂಕ…!

    ಕಲಬುರಗಿ ಎರಡನೇ ಸ್ಥಾನದಲ್ಲಿದ್ದು 510 ಪ್ರಕರಣಗಳಾಗಿವೆ. ಇನ್ನುಳಿದಂತೆ ಬೆಂಗಳೂರು ನಗರ ಮೂರನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಇಲ್ಲಿ ಇಂದು 9 ಪ್ರಕರಣ ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 424ಕ್ಕೆ ಏರಿಕೆಯಾಗಿದೆ. ನಾಲ್ಕನೇ ಸ್ಥಾನದಲ್ಲಿರುವ ರಾಯಚೂರಿನಲ್ಲಿ ಇಂದು 88 ಪ್ರಕರಣ ಪತ್ತೆಯಾಗಿದ್ದು ಒಟ್ಟು 356 ಪ್ರಕರಣಗಳಾಗಿವೆ. ಐದನೇ ಸ್ಥಾನದಲ್ಲಿ ಮಂಡ್ಯ ಇದ್ದು ಈ ದಿನ 15 ಪ್ರಕರಣಗಳೊಂದಿಗೆ ಒಟ್ಟು 317 ಪ್ರಕರಣಗಳಾಗಿವೆ. ಪೂರ್ಣವಿವರಗಳಿಗೆ ಗ್ಯಾಲರಿಯಲ್ಲಿರುವ ಕೋವಿಡ್ 19 ವರದಿಯನ್ನು ಗಮನಿಸಬಹುದು.

    ಬಿಪಿಎಲ್ ಕಾರ್ಡುದಾರರ ಗಮನಕ್ಕೆ: ನಕಲಿ ಮತ್ತು ಅನರ್ಹರ ವಿರುದ್ಧ ಕ್ರಮ ತೆಗೆದುಕೊಳ್ತೇವೆ ಎಂದು ಎಚ್ಚರಿಕೆ ನೀಡಿದ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts