More

    ರಾಷ್ಟ್ರದ ಎಷ್ಟು ಮಂದಿ ಕರೊನಾ ಸೋಂಕಿತರು ಇಲ್ಲಿವರೆಗೆ ಚೇತರಿಸಿಕೊಂಡಿದ್ದಾರೆ? ಸಾವಿನ ಪ್ರಮಾಣ ಎಷ್ಟು?

    ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್​ ರೋಗಿಗಳ ಚೇತರಿಕೆ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ರಾಷ್ಟ್ರದಲ್ಲಿ 15 ದಿನಗಳ ಹಿಂದೆ ಚೇತರಿಕೆ ಪ್ರಮಾಣ ಶೇ.13 ಇತ್ತು. ಈಗ ಅದು ಶೇ. 25.19ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಸಾವಿನ ಪ್ರಮಾಣ ಶೇ.3.5 ಮಾತ್ರ: ಸೋಂಕಿತರ ಸಾವಿನ ಪ್ರಮಾಣ ಶೇ.3.2 ಮಾತ್ರ ಇದೆ. ಪುರಷರಲ್ಲಿ ಸಾವಿನ ಪ್ರಮಾಣ ಅಧಿಕವಾಗಿದ್ದರೆ ಮಹಿಳೆಯರಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ.

    ಕಳೆದ 24 ಗಂಟೆಗಳಲ್ಲಿ 630 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇಲ್ಲಿವರೆಗೂ ಒಟ್ಟು 8,324 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕರೊನಾ ವೈರಸ್​ ಸೋಂಕಿಗೆ ಬಲಿಯಾದವರಲ್ಲಿ ಶೇ.19 ಮಂದಿ ಮಧುಮೇಹ, ಅಧಿಕ ರಕ್ತದೊತ್ತಸ ಸೇರಿದಂತೆ ಇತರೆ ಕಾಯಿಲೆಗಳಿಗೆ ತುತ್ತಾಗಿದ್ದರು ಎಂದು ತಿಳಿದು ಬಂದಿದೆ.

    ರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 1,718 ಹೊಸ ಕರೊನಾ ವೈರಸ್​ ಸೋಂಕು ಪ್ರಕರಣಗಳು ದೃಢಪಟ್ಟಿವೆ. 33,050 ಮಂದಿಗೆ ಸೋಂಕು ಹರಡಿದ್ದು, ಇದರಲ್ಲಿ 23,651 ಪ್ರಕರಣಗಳು ಸಕ್ರಿವಾಗಿವೆ. ಇಲ್ಲಿವರೆಗೆ 1074 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಕೋವಿಡ್​ ವಿರುದ್ಧ ಹೋರಾಟದ ನಡುವೆ ಆರ್ಥಿಕ ಚೇತನ ಹೆಚ್ಚಿಸಿಕೊಳ್ಳಲು ತಮಿಳುನಾಡು ಯತ್ನ, ಚೀನಾದಿಂದ ಹೊರಹೋಗುತ್ತಿರುವ ಕಂಪನಿಗಳ ಮೇಲೆ ಕಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts