More

    ಕೋವಿಡ್​-19 ಒಂಥರ ವರ್ಲ್ಡ್ ವಾರ್-2; ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಜಗತ್ತಿನಾದ್ಯಂತ ಕಾಡುತ್ತಿರುವ ಕೋವಿಡ್​-19 ಪಿಡುಗನ್ನು ಎದುರಿಸಲು ಜಗತ್ತೇ ಒಂದಾಗಿ ಶ್ರಮಿಸುತ್ತಿದ್ದು, ಬಹುತೇಕ ಯುದ್ಧೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ. ಇನ್ನೂ ತೊಲಗಿಸಲಾಗದ ಕರೊನಾಗೆ ಭಾರತವೂ ಸೇರಿ ಹಲವು ದೇಶಗಳಲ್ಲಿ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದೆ.

    ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಕರೊನಾ ಹಿನ್ನೆಲೆಯಲ್ಲಿ ಎರಡನೇ ವಿಶ್ವ ಮಹಾಯುದ್ಧವನ್ನು ನೆನಪಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಭಾರತ-ಇಟಲಿ ವರ್ಚುವಲ್ ಸಮ್ಮೇಳನದಲ್ಲಿ ಇಟಲಿಯ ಪ್ರಧಾನಿ ಗಿಸೆಪ್ಪೆ ಕಾಂಟೆ ಜತೆ ಮಾತನಾಡಿದ ಅವರು, ಕೋವಿಡ್​-19 ಇತಿಹಾಸದಲ್ಲಿ ವರ್ಲ್ಡ್​ ವಾರ್-2ರ ಥರ ನೆನಪಾಗಿ ಉಳಿಯಲಿದೆ ಎಂದರು.

    ಕರೊನೋತ್ತರ ಜಗತ್ತಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ಕರೊನಾ ಬಳಿಕದ ಅವಕಾಶ ಹಾಗೂ ಸವಾಲುಗಳಿಗೆ ನಾವು ಸಿದ್ಧರಾಗಿ ತೆರೆದುಕೊಳ್ಳಬೇಕಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟರು. ಹಾಗೆಯೇ ಕೋವಿಡ್​ನಿಂದಾಗಿ ಇಟಲಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಭಾರತದ ಪರವಾಗಿ ಮೋದಿ ಸಾಂತ್ವನ ಸಲ್ಲಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts