More

    ಉಡುಪಿ ಈಗ ನಂ.1; ರಾಜ್ಯದಲ್ಲಿ ಒಟ್ಟು 388 ಹೊಸ COVID19 ಪ್ರಕರಣಗಳು

    ಬೆಂಗಳೂರು: ಉಡುಪಿಯಲ್ಲಿ ಗರಿಷ್ಠ 150 ಸೇರಿ ರಾಜ್ಯದಲ್ಲಿ ಇಂದು ಒಟ್ಟು 388 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಈ ಸಂಖ್ಯೆ ನಿನ್ನೆ ಸಂಜೆ 5 ಗಂಟೆಯಿಂದ ಇಂದ ಸಂಜೆ 5 ಗಂಟೆಯ ನಡುವೆ ಪತ್ತೆಯಾದ ಪ್ರಕರಣಗಳಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳ ಸಂಖ್ಯೆ 3796 ಆಗಿದೆ. ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 2339. ಈ ವರೆಗೆ ಕೋವಿಡ್​19ಕ್ಕೆ ಮೃತಪಟ್ಟವರ ಸಂಖ್ಯೆ 52 ಆಗಿದ್ದು, ಇದರಲ್ಲಿ ಎರಡು ಪ್ರಕರಣಗಳಲ್ಲಿ ಅನ್ಯಕಾರಣಗಳಿಗೆ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!

    ಐಸಿಯುನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 14. ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 75 ಆಗಿದ್ದು, ಇದುವರೆಗೆ ಬಿಡುಗಡೆಯಾದವರು 1403. ಇನ್ನು ಜಿಲ್ಲಾವಾರು ಗಮನಿಸಿದರೆ, ಉಡುಪಿಯಲ್ಲಿ ಇಂದು ಗರಿಷ್ಠ 150 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 410ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಉಡುಪಿ ಜಿಲ್ಲೆ ಕಲಬುರಗಿಯನ್ನು ಹಿಂದಿಕ್ಕಿದೆ. ಕಲುಬರಗಿಯಲ್ಲಿ ಇಂದು 100 ಹೊಸ ಕೇಸ್​ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 405 ಆಗಿದೆ. ಮೂರನೇ ಸ್ಥಾನದಲ್ಲಿ ಬೆಂಗಳೂರು ಇದ್ದು ಹೊಸ ಪ್ರಕರಣಗಳು 12. ಒಟ್ಟು ಪ್ರಕರಣ 397. ಸಾವಿನ ಸಂಖ್ಯೆ 11.

    ಇದನ್ನೂ ಓದಿ: ಕರೊನಾಘಾತದ ನಡುವೆಯೇ 100ಕಿ.ಮೀ ವೇಗದಲ್ಲಿ ನುಗ್ಗುತಿದೆ ‘ನಿಸರ್ಗ’: ಮುಂಬೈನಲ್ಲಿ ನಡುಕ

    ಇನ್ನುಳಿದಂತೆ, ಬೆಳಗಾವಿಯಲ್ಲಿ ಇಂದು 51 ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತ ಸಂಖ್ಯೆ 211ಕ್ಕೆ ಏರಿಕೆಯಾಗಿದೆ. ಮಿಕ್ಕ ಜಿಲ್ಲೆಗಳಲ್ಲಿ ಬಹಳ ವ್ಯತ್ಯಾಸವೇನೂ ಆಗಿಲ್ಲ. ಉಳಿದ ಸಂಪೂರ್ಣ ಮಾಹಿತಿಗಾಗಿ ಕೋವಿಡ್ 19 ಸ್ಥಿತಿಗತಿ ವರದಿಯ ಪ್ರತಿಯನ್ನು ಕೆಳಗಿನ ಫೋಟೊ ಗ್ಯಾಲರಿ ಕ್ಲಿಕ್ ಮಾಡಿ ಓದಿಕೊಳ್ಳಬಹುದು.

    FULL DETAILS | ಸೈಕ್ಲೋನ್​ಗೆ ಹೆಸರಿಡೋದು ಯಾರು, ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts