More

    ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!

    ಹರಿದ್ವಾರ: ಮಹಾಮಾರಿ ಕರೊನಾ ವೈರಸ್​ ಮಣಿಸಲು ಔಷಧ ಕಂಡುಹಿಡಿಯುವ ಪ್ರಯತ್ನವು ವಿಶ್ವದ್ಯಾಂತ ನಡೆಯುತ್ತಿರುವ ನಡುವೆಯೇ ಯೋಗ ಗುರು ಬಾಬಾ ರಾಮದೇವ್​ ನೇತೃತ್ವದ ಪತಂಜಲಿ ಆಯುರ್ವೇದಿಕ್​ ಸಂಸ್ಥೆಯು ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇಂದು ಆಯುರ್ವೇದಿಕ್​ ಔಷಧ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

    “ಕರೊನಿಲ್​” ಹೆಸರಿನ ಔಷಧವು ಕರೊನಾ ವೈರಸ್​ ಸೋಂಕಿಗೆ ಸರಿಯಾದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಉತ್ತರಖಂಡದ ಹರಿದ್ವಾರದಲ್ಲಿರುವ ಪತಂಜಲಿ ಯೋಗಪೀಠವು ತಿಳಿಸಿದೆ. ಗಮನಾರ್ಹವೆಂದರೆ ಕೋವಿಡ್​ ವೈರಸ್​ ಗುಣಪಡಿಸುವ ಔಷಧವನ್ನು ಪತ್ತೆ ಮಾಡಿರುವುದಾಗಿ ಈ ತಿಂಗಳ ಆರಂಭದಲ್ಲೇ ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರು ವಾದಿಸಿದ್ದರು. ಇದನ್ನೂ ಓದಿ: ಒಬ್ಬ ವ್ಯಕ್ತಿಗೆ ಕರೊನಾ ಇದೆಯೆಂದು ಆತನ ನೆರೆಹೊರೆಯವರಿಗೆ ತಿಳಿಸಿದ ಡಾಕ್ಟರ್ ಗತಿ ಏನಾಯ್ತು ನೋಡಿ….

    ಕೋವಿಡ್​ -19 ರೋಗಿಗಳಿಗೆ ನೀಡಲಾಗುತ್ತಿರುವ ಕರೊನಿಲ್​ ಔಷಧವನ್ನು ಅಶ್ವಗಂಧ, ಗಿಲೊಯ್​ ಮತ್ತು ತುಳಸಿ ಮಿಶ್ರಣದಿಂದ ತಯಾರಿಸಲಾಗಿದೆ. ಶೇ. 100 ರಷ್ಟು ಚೇತರಿಕೆ ದರವಿದೆ ಎಂದು ಬಾಬಾ ರಾಮದೇವ್​ ಅವರು ಬಹಿರಂಗಪಡಿಸಿದ್ದಾರೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ಆಚಾರ್ಯ ಬಾಲಕೃಷ್ಣ ಅವರು, ಕರೊನಾ ವೈರಸ್​ ಗುಣಪಡಿಸುವ ಸಾಕ್ಷಿ ಆಧಾರಿತ ಮೊದಲ “ಕರೊನಿಲ್​” ಔಷಧವನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಪತಂಜಲಿ ಯೋಗಪೀಠ ಬಿಡುಗಡೆ ಮಾಡಲಿದೆ ಎಂದು ಹೇಳಲು ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ. ಕರೊನಿಲ್​ ಔಷಧವು ರೋಗಿಗಳನ್ನು 5 ರಿಂದ 14 ದಿನಗಳವರೆಗೆ ಗುಣಪಡಿಸಲಿದೆ ಎಂದು ಭರವಸೆ ನೀಡಿದ್ದಾರೆ.

    ಕರೊನಾ ವೈರಸ್​ ಸ್ಪೋಟಗೊಂಡ ಬೆನ್ನಲ್ಲೇ ನಾವು ವಿಜ್ಞಾನಿಗಳ ಒಂದು ತಂಡವನ್ನು ನೇಮಕ ಮಾಡಿಕೊಂಡೆವು. ಮೊದಲಿಗೆ ವೈರಸ್ ವಿರುದ್ಧ ಹೋರಾಡಬಹುದಾದ ಮತ್ತು ದೇಹದಲ್ಲಿ ಅದರ ಹರಡುವಿಕೆಯನ್ನು ನಿಲ್ಲಿಸಬಹುದಾದ ಉತ್ತೇಜಕಗಳನ್ನು ಹಾಗೂ ಸಂಯುಕ್ತಗಳನ್ನು ಗುರುತಿಸಲಾಯಿತು. ಬಳಿಕ ಕ್ಲೀನಿಕಲ್​ ಅಧ್ಯಯನ ನಡೆಸಲಾಯಿತು. 100 ಕರೊನಾ ರೋಗಿಗಳಲ್ಲಿ ಔಷಧದಿಂದ ಶೇ. 100 ರಷ್ಟು ಧನಾತ್ಮಕ ಫಲಿತಾಂಶ ಪಡೆಯಲಾಯಿತು ಎಂದು ಬಾಲಕೃಷ್ಣ ಅವರು ತಿಳಿಸಿದ್ದಾರೆ.

    ನಮ್ಮ ಔಷಧವನ್ನು ಪಡೆದ ಬಳಿಕ 5 ರಿಂದ 14 ದಿನಗಳಲ್ಲಿ ರೋಗಿಗಳಿಗೆ ಕರೊನಾ ನೆಗಿಟಿವ್​ ಬಂದಿದೆ. ಆದ್ದರಿಂದ, ಆಯುರ್ವೇದದ ಮೂಲಕ ಕೋವಿಡ್​-19ಗೆ ಚಿಕಿತ್ಸೆ ಸಾಧ್ಯ ಎಂದು ನಾವು ಹೇಳಬಹುದಾಗಿದೆ. ಸದ್ಯ ನಾವು ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳನ್ನು ಮಾತ್ರ ಮಾಡುತ್ತಿದ್ದೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸಾಕ್ಷಿ ಮತ್ತು ಡಾಟಾಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್​!

    ಇದೇ ವೇಳೆ ಯೋಗಾಭ್ಯಾಸ ಮಾಡುವುದರೊಂದಿಗೆ ಇಮ್ಯೂನಿಟಿ ಉತ್ತೇಜಿಸುವಂತಹ ಆಹಾರಗಳನ್ನು ಸೇವಿಸಲು ಬಾಲಕೃಷ್ಣ ಅವರು ಜನರಿಗೆ ಸಲಹೆ ನೀಡಿದರು. (ಏಜೆನ್ಸೀಸ್​)

    ಕರ್ಫ್ಯೂ ನಡುವೆ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts