More

    20 ವಿದೇಶಿ ತಬ್ಲಿಘಿಗಳ ಬಿಡುಗಡೆ: ಸಾಕ್ಷ್ಯಸಂಗ್ರಹಿಸುವಲ್ಲಿ ಎಡವಿದ ತನಿಖಾ ಸಂಸ್ಥೆಗಳು

    ಮುಂಬೈ: ಕರೊನಾ ವೈರಸ್ ಲಾಕ್​ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಆಗಮಿಸಿದ್ದ 20 ವಿದೇಶಿ ತಬ್ಲಿಘಿಗಳನ್ನು ಬಿಡುಗಡೆ ಮಾಡುವಂತೆ ಮುಂಬೈ ಕೋರ್ಟ್​ ಆದೇಶಿಸಿದೆ. ಅಂಧೇರಿಯ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಆರ್.ಆರ್.ಖಾನ್​ ಈ ಆದೇಶ ನೀಡಿದ್ದಾರೆ.

    ತಬ್ಲಿಘಿಗಳ ವಿರುದ್ಧ ಹೊರಿಸಿದ್ದ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಒದಗಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗಿವೆ. ಸಂದೇಹದ ಹೆಸರಿನಲ್ಲಿ ಬಹಳ ಕಾಲ ಯಾರನ್ನೂ ಬಂಧನದಲ್ಲಿ ಇರಿಸಲಾಗದು ಎಂದು ಕೋರ್ಟ್​ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: ಒಮ್ಮೆ ಗುಣವಾದವರಲ್ಲಿ ಮತ್ತೆ ಕರೊನಾ ಸೋಂಕು ಪತ್ತೆಯಾಗಬಹುದು; ಏಕೆಂದರೆ…

    ದಾಖಲೆಗಳಲ್ಲಿ ಇರುವ ಆರೋಪಗಳಿಗೂ ಸಾಕ್ಷ್ಯಗಳಿಗೂ ತಾಳ-ಮೇಳವಿಲ್ಲ. ಕಾನೂನು ಬದ್ಧವಾಗಿರುವ ಸಾಕ್ಷ್ಯಗಳೂ ಇರಲಿಲ್ಲ. ಪ್ರಾಸಿಕ್ಯೂಶನ್​ ಸಾಕ್ಷ್ಯದ ಪ್ರಕಾರ ಆರೋಪಿಗಳು ಲಾಕ್​ಡೌನ್ ನಿಯಮಗಳನ್ನು ಮತ್ತು ಪೊಲೀಸ್ ಕಮಿಷನರ್ ಆದೇಶವನ್ನು ಉಲ್ಲಂಘಿಸಿಲ್ಲ ಎಂಬುದು ದಾಖಲೆಯಲ್ಲಿದೆ. ಸಾಕ್ಷಿಗಳಿಗೂ ಆರೋಪಿಗಳ ಮೇಲಿನ ಆರೋಪವನ್ನು ವಿವರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

    ಇದನ್ನೂ ಓದಿ: ಟ್ರಾಫಿಕ್​ನಿಂದ ತಪ್ಪಿಸಿಕೊಳ್ಳಲು ಅಕ್ಷಯ್​ ಮಾಡಿದ ಐಡಿಯಾ ಹೇಗಿದೆ ನೋಡಿ…

    ಈ ತಬ್ಲಿಘಿಗಳ ಎರಡು ತಂಡದ ವಿರುದ್ಧ ಏಪ್ರಿಲ್​ನಲ್ಲಿ ಕೇಸ್ ದಾಖಲಾಗಿತ್ತು. (ಏಜೆನ್ಸೀಸ್ )

    ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ರೆಫರೆಂಡಂ: ಸುಪ್ರೀಂ ಕೋರ್ಟ್ ನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts