More

    ಮಾರ್ಗಸೂಚಿ ಪಾಲನೆ ಸೋಂಕು ತಡೆಗೆ ಅಸ್ತ್ರ

    ಸುಬ್ರಹ್ಮಣ್ಯ: ಕೋವಿಡ್-19ನ ಎರಡನೇ ಅಲೆಯ ಸಂದರ್ಭ ಎಲ್ಲರೂ ಜಾಗೃತರಾಗಿ ಸರ್ಕಾರದ ಮಾರ್ಗಸೂಚಿ ಸರಿಯಾಗಿ ಪಾಲನೆ ಮಾಡಬೇಕು. ಇದುವೇ ಸೋಂಕು ನಿರ್ಮೂಲನೆಗೆ ಪ್ರಧಾನ ಅಸ್ತ್ರ ಎಂದು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಹೇಳಿದರು.

    ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶುಕ್ರವಾರ ಕೋವಿಡ್-19 ಹರಡುವಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಲುವಾಗಿ ಟಾಸ್ಕ್‌ಫೋರ್ಸ್ ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ರೋಗ ಲಕ್ಷಣವಿರುವ ಜನರಿಗೆ ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಧೈರ್ಯ ತುಂಬುತ್ತ ಅವರು ಹೊರಗಡೆ ಹೋಗದಂತೆ ಎಚ್ಚರ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ರೋಗ ಹಬ್ಬದಂತೆ ಜಾಗರೂಕತೆ ವಹಿಸಿ ಮೂರನೇ ಅಲೆ ಬಾರದ ರೀತಿ ಈಗಿನಿಂದಲೇ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಡೆಂೆ ಜ್ವರದ ಹಾವಳಿಯೂ ಇರುವುದರಿಂದ ಮನೆ ಪಕ್ಕ ಸೊಳ್ಳೆಗಳು ಉತ್ಪತ್ತಿಯಾಗದಂತೆ ಹೆಚ್ಚಿನ ಕ್ರಮ ವಹಿಸಬೇಕು ಎಂದರು.

    ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅನವಶ್ಯಕವಾಗಿ ತಿರುಗಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಕುಲ್ಕುಂದ, ಪಂಜ ಮತ್ತು ಗುತ್ತಿಗಾರಿನಲ್ಲಿ ಚೆಕ್‌ಪೋಸ್ಟ್ ರಚನೆ ಮಾಡಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ ಸೂಕ್ತ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ ಹೇಳಿದರು. ಸುಬ್ರಹ್ಮಣ್ಯ ಗ್ರಾಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸವಿತಾ ಭಟ್, ಪಿಡಿಒ ಮುತ್ತಪ್ಪ ಧವಳಗಿ, ಕಾರ್ಯದರ್ಶಿ ಮೋಹನಪ್ಪ ಡಿ, ತಾಪಂ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ ಹಾಜರಿದ್ದರು. ಗ್ರಾಪಂ ಸಿಬ್ಬಂದಿ ರಘು ಎನ್.ಬಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts