More

    ರಾಜ್ಯ ಸರ್ಕಾರಗಳಿಗೆ ಅಗ್ಗವಾದ ಕೋವಾಕ್ಸಿನ್

    ನವದೆಹಲಿ : ರಾಜ್ಯ ಸರ್ಕಾರಗಳಿಗೆ ಕೋವಾಕ್ಸಿನ್ ಕರೊನಾ ಲಸಿಕೆಯನ್ನು ಪ್ರತಿ ಡೋಸ್​ಗೆ 400 ರೂ. ದರದಲ್ಲಿ ಒದಗಿಸುವುದಾಗಿ ಉತ್ಪಾದಕ ಭಾರತ್​ ಬಯೋಟೆಕ್​ ಕಂಪೆನಿ ಘೋಷಿಸಿದೆ. ಈ ಮುನ್ನ ನಿಗದಿ ಪಡಿಸಿದ 600 ರೂ. ಬೆಲೆಯನ್ನು ತಗ್ಗಿಸಿ ಕಂಪೆನಿ ಇಂದು ಹೇಳಿಕೆ ನೀಡಿದೆ.

    ಮತ್ತೊಂದು ಲಸಿಕೆ ಕೋವಿಶೀಲ್ಡ್​ನ ಬೆಲೆಯನ್ನು 400 ರೂ.ಗಳಿಂದ 300 ರೂ. ಗೆ ಇಳಿಸಿ ಸೀರಮ್​ ಇನ್ಸ್​ಟಿಟ್ಯೂಟ್ ನಿನ್ನೆ ಹೇಳಿಕೆ ನೀಡಿತ್ತು. ಅದರ ಬೆನ್ನಲ್ಲೇ ಭಾರತ್ ಬಯೋಟೆಕ್​​ ತನ್ನ ಕೋವಾಕ್ಸಿನ್ ಬೆಲೆಯನ್ನು ಕಡಿತಗೊಳಿಸಿದೆ. ಆದಾಗ್ಯೂ ಖಾಸಗಿ ಆಸ್ಪತ್ರೆಗಳಿಗೆ ಕೋವಾಕ್ಸಿನ್ ಬೆಲೆಯು ಒಂದು ಡೋಸ್​​ಗೆ 1200 ರೂ. ಆಗಿಯೇ ಮುಂದುವರಿಯಲಿದೆ ಎನ್ನಲಾಗಿದೆ.

    ಇದನ್ನೂ ಓದಿ: ಕೋವಿಶೀಲ್ಡ್​ ಬೆಲೆ ಕಡಿತ : ಒಂದು ಡೋಸ್​ಗೆ 300 ರೂ.

    “ಭಾರತ ಈ ಸಮಯದಲ್ಲಿ ಎದುರಿಸುತ್ತಿರುವ ತೀವ್ರ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ಭಾರತ್ ಬಯೋಟೆಕ್​ಗೆ ಕಾಳಜಿ ಇದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಎದುರಾಗಿರುವ ದೊಡ್ಡ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕೋವಾಕ್ಸಿನ್​ಅನ್ನು ರಾಜ್ಯ ಸರ್ಕಾರಗಳಿಗೆ 400 ರೂ. ದರದಲ್ಲಿ ಒದಗಿಸಿದ್ದೇವೆ” ಎಂದು ಕೃಷ್ಣ ಎಂ.ಎಲ್ಲ ಮಾಲೀಕತ್ವದ ಕಂಪೆನಿ ಹೇಳಿಕೆ ನೀಡಿದೆ.

    ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳ ಒಟ್ಟು ಉತ್ಪಾದನೆಯಲ್ಲಿ ಶೇ. 50 ರಷ್ಟನ್ನು ಕೇಂದ್ರ ಸರ್ಕಾರ 150 ರೂ.ಗಳ ಬೆಲೆಯಲ್ಲೇ ಖರೀದಿಸಿ ರಾಜ್ಯಗಳಿಗೆ ಅಗತ್ಯಾನುಸಾರ ವಿತರಿಸಲಿದೆ. ಉಳಿದ ಶೇ. 50 ರಷ್ಟು ಲಸಿಕೆಗಳಲ್ಲಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ಲಸಿಕೆಗಳನ್ನು ನಿಗದಿತ ದರಗಳಲ್ಲಿ ಖರೀದಿ ಮಾಡಿ, 18 ರಿಂದ 45 ವರ್ಷ ವಯೋಮಾನದ ನಾಗರೀಕರಿಗೂ ನೀಡಬಹುದಾಗಿದೆ. (ಏಜೆನ್ಸೀಸ್)

    ಕರೊನಾ ಕರ್ಫ್ಯೂ ಉಲ್ಲಂಘಿಸಿ ಶೂಟಿಂಗ್ ! ನಟ ಜಿಮ್ಮಿ ಶೇರ್​​ಗಿಲ್ ಸೇರಿ 35 ಜನರ ಮೇಲೆ ಕೇಸ್

    ಆಕ್ಸಿಜನ್ ಕೊರತೆಗೆ ಮಿಡಿದ ಮಾರುತಿ ಸುಜುಕಿ ; ಮೇ 1 ರಿಂದ 9 ಕಾರ್ಖಾನೆಗಳು ಬಂದ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts