More

  ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಓಲೈಕೆ ರಾಜಕಾರಣ

  ಕೋಲಾರ: ರಾಜ್ಯದಲ್ಲಿ ಸಂಭವಿಸಿರುವ ಬಂಬ್ ಸೋಟ, ಪಾಕ್ ಪರ ಘೋಷಣೆ ಹಾಗೂ ಹಿಂದು ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಗರದ ಡೂಂ ಲೈಟ್ ವೃತ್ತದಲ್ಲಿ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

  ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಓಲೈಕೆ ರಾಜಕಾರಣ ಮಾಡಿಕೊಂಡು ಬರುತ್ತಿದೆ. ರಾಜ್ಯ ಸರ್ಕಾರವು ದೇಶದ್ರೋಹಿ ಹಾಗೂ ಹಿಂದೂ ಧರ್ಮವಿರೋಽಗಳಿಗೆ ಕೃಪಾಕಟಾಕ್ಷ ನೀಡುತ್ತಿದೆ ಎಂಬುದಕ್ಕೆ ನಿದರ್ಶನಗಳು ಇವೆ ಎಂದು ಆಕ್ರೋಶವ್ಯಕ್ತಪಡಿಸಿದರು.

  ರಾಮಮಂದಿರ ಪ್ರತಿಷ್ಠಾಪನೆ ವೇಳೆ ಬ್ಯಾನರ್, ಭಜನೆಗೆ ಅನುಮತಿ ಕಡ್ಡಾಯ ಮಾಡಿದ್ದರು. ಆದರೆ ಮತಾಂದರ ಫೋಟೋ, ತಲ್ವಾರ್ ದ್ವಾರಬಾಗಿಲು ಹಾಕುವುದಕ್ಕೆ ಅನುಮತಿ ಬೇಕಿರಲಿಲ್ಲ. ಆದರೆ ರಾಷ್ಟಧ್ವಜ ಹಿಡಿದು ಹೋಗಲು ಸರ್ಕಾರದ ಅನುಮತಿ ಪಡೆಯಬೇಕೆಂದರೆ ಹೇಗೆ. ಎಸ್‌ಡಿಪಿಐ, ಪಿಎಪಿಐ ಹಾಗೂ ಪಾಕ್ ಏಜೆಂಟರಂತಿರುವ ಸರ್ಕಾರವು ಒಂದು ಸಮುದಾಯಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದರು.

  ವಿಧಾನಸೌಧದಲ್ಲಿ ಸೈಯದ್ ನಾಸೀರ್ ಹುಸೇನ್ ವಿಜಯೋತ್ಸವದಲ್ಲಿ ಅತಿಯಾದ ಪ್ರೇಮ ಹುಕ್ಕಿ ಬಂದು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರು. ಪ್ರಶ್ನಿಸಿದ ಮಾಧ್ಯಮಗಳ ಮೇಲೆಯೇ ಸಚಿವರು ಗರಂ ಆಗಿದ್ದರು. ಎಫ್‌ಎಸ್‌ಎಲ್ ವರದಿಯನ್ವಯ ಮೂವರ ಬಂಧನವಾಗಿದ್ದು, ನಾಸೀರ್ ಹುಸೇನ್‌ರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಿದರೆ ಪ್ರಕರಣಕ್ಕೆ ಜಯ ಸಿಗುತ್ತದೆ ಎಂದರು.
  ಶಿವಮೊಗ್ಗದಲ್ಲಿ ಬಾಬರ್, ಟಿಪ್ಪು, ಮತಾಂದರ ಫೋಟೊ, ಕೋಲಾರದಲ್ಲಿ ತಲ್ವಾರ್ ಅಳವಡಿಸಿದವರಿಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಸಿದ್ರಾಮುಲ್ಲಾ ಖಾನ್ ಅಧಿಕಾರದಲ್ಲಿದ್ದಾರೆಂದು ರೆಕ್ಕೆ ಪುಕ್ಕ ಬೆಳೆಸಿಕೊಂಡಿದ್ದಾರೆ. ಅಲ್ಲದೆ ಡಿಕೆಶಿಯವರು, ಅವರನ್ನು ಬ್ರದರ್ಸ್ ಎಂದು ತಲೆ ಮೇಲೆ ಇಟ್ಟುಕೊಂಡಿರುವುದಕ್ಕಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಮುನಿಸ್ವಾಮಿ ಆರೋಪಿಸಿದರು.

  ಹಿಂದು ಜಾಗರಣ ವೇದಿಕೆಯ ಪ್ರಾಂತ್ಯ ಮುಖಂಡ ಗೋಪಾಲ್ ಮಾತನಾಡಿ, ಎಐಸಿಸಿ ಅಧ್ಯಕ್ಷರ ಮಗನೊಬ್ಬನನ್ನು ಏನಾದರೂ ಕೇಳಿದರೆ ಪರಚಿಕೊಂಡು ಬರುತ್ತಾನೆ. ಜನಪ್ರತಿನಿಧಿಯಾಗಿ ಯಾವ ರೀತಿ ವರ್ತನೆ ಮಾಡಬೇಕೆನ್ನುವುದು ಗೊತ್ತಿಲ್ಲ. ಇನ್ಮುಂದೆ ಕ್ಷಣಕ್ಷಣಕ್ಕೂ ಎಚ್ಚರಿಕೆಯಿಂದ ಇದ್ದು ಖಂಡಿಸಿ ದೇಶದ್ರೋಹಿಗಳನ್ನು ಮಟ್ಟ ಹಾಕಲು ದೇಶಭಕ್ತರು ಮುಂದಾಗಬೇಕು ಎಂದು ಎಚ್ಚರಿಸಿದರು.
  ಮುಖಂಡರಾದ ವಿಜಯ್ ಕುಮಾರ್, ಮಮತಗೌಡ, ಮಾಗೇರಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಮಹೇಶ್, ಅರುಣ, ಜಯಂತಿಲಾಲ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts