More

    2014ರ ಕೋಮು ಗಲಭೆ ಪ್ರಕರಣ: ಶಾಸಕ ಯತ್ನಾಳ್ ವಿಚಾರಣೆ ನಡೆಸಿದ ಕೋರ್ಟ್…

    ವಿಜಯಪುರ: 2014ರಲ್ಲಿ ನಗರದಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ವಿಚಾರಣೆ ನಡೆಸಲಾಯಿತು.

    ನಗರದ ಪೊಲೀಸ್ ಚಿಂತನಾ ಸಭಾಂಗಣದಲ್ಲಿ ಗುರುವಾರ ಶಾಸಕ ಯತ್ನಾಳ್ ಹಾಗೂ ಮತ್ತಿತರ ವಿಚಾರಣೆ ನಡೆಯಿತು. ಕರೊನಾ ಹಿನ್ನೆಲೆ ಆನ್‌ಲೈನ್ ಮೂಲಕ ವಿಚಾರಣೆ ನಡೆಸಲಾಯಿತು. ವಿಚಾರಣೆ ಹಿನ್ನೆಲೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿತ್ತಲ್ಲದೇ ಶಾಸಕರನ್ನು ಹಾಜರು ಪಡಿಸಿದರು.

    ಪ್ರಕರಣದ ಹಿನ್ನೆಲೆ:
    2014ರ ಮೇ 26 ರಂದು ವಿಜಯಪುರ ನಗರದಲ್ಲಿ ಗಲಭೆ ನಡೆದಿತ್ತು. ಮೊದಲ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾದ ಹಿನ್ನೆಲೆ ಬೃಹತ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ಮಹಾತ್ಮ ಗಾಂಧಿ ವೃತ್ತ ತಲುಪುತ್ತಿದ್ದಂತೆ ಕಲ್ಲು ತೂರಾಟ ನಡೆದಿತ್ತು.

    ಈ ವೇಳೆ ಎರಡು ಕೋಮುಗಳ ಮಧ್ಯೆ ಗಲಭೆ ನಡೆದು ಲಾಠಿ ಚಾರ್ಜ್ ಕೂಡ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸನಗೌಡ ಪಾಟೀಲ್​ ಸಹಿತ ಹಲವರ ಮೇಲೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಇದೀಗ ಬೆಂಗಳೂರಿನ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಕರೊನಾ ಹಿನ್ನೆಲೆ ವಿಜಯಪುರದಿಂದಲೇ ಆನ್‌ಲೈನ್ ಮೂಲಕ ವಿಚಾರಣೆ ನಡೆಸಲಾಗಿದೆ. ಸುದೀರ್ಘ 3 ಘಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಲಾಗಿದೆ.

    8 ತಿಂಗಳು ಹೊಟೇಲ್​​​ನಲ್ಲಿ ಠಿಕಾಣಿ ಹೂಡಿ ಬಿಲ್ ಕಟ್ಟದ ಆಸಾಮಿ, ಎಸ್ಕೇಪ್ ಆಗೋಕೆ ಮಾಡಿದ ಪ್ಲಾನ್ ಇದು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts