More

    ಕೋರ್ಟ್ ಕಲಾಪ ಜೂ. 1ರಿಂದ

    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

    ಲಾಕ್​ಡೌನ್​ನಿಂದಾಗಿ ಎರಡು ತಿಂಗಳು ಸ್ತಬ್ಧವಾಗಿದ್ದ ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣ ಮತ್ತೆ ಗರಿಗೆದರಲಿದೆ. ಜೂನ್ 1ರಿಂದ ಕೋರ್ಟ್ ಕಲಾಪಗಳು ಆರಂಭವಾಗಲಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆಯ್ದ ವಕೀಲರು, ನ್ಯಾಯಾಧೀಶರು ಮತ್ತು ಸಿಬ್ಬಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.

    ಈ ಸಂಕೀರ್ಣದಲ್ಲಿ ಒಟ್ಟು 18 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಜೂ.1ರಂದು 9 ನ್ಯಾಯಾಲಯಗಳು, 2ರಂದು 9 ನ್ಯಾಯಾಲಯಗಳು ಕಾರ್ಯಾರಂಭ ಮಾಡಲಿವೆ. ಇದೇ ರೀತಿ ಒಂದು ದಿನ 9, ಮರುದಿನ ಉಳಿದ 9 ನ್ಯಾಯಾಲಯಗಳು ಕಲಾಪ ನಡೆಸಲಿವೆ. 1 ಕೋರ್ಟ್ ಹಾಲ್​ನಲ್ಲಿ 20 ವಕೀಲರಿಗೆ ಮಾತ್ರ ಅವಕಾಶ ಇರುತ್ತದೆ. ಬೆಳಗ್ಗೆ 10, ಮಧ್ಯಾಹ್ನ 10 ಪ್ರಕರಣಗಳ ವಿಚಾರಣೆ ನಡೆಯಲಿದೆ.

    ನ್ಯಾಯಾಲಯದ ಒಳಗೆ ಕಕ್ಷಿದಾರರು (ಸಾರ್ವಜನಿಕರ), ಆರೋಪಿಗಳ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೋರ್ಟ್​ನ ಸಿಬ್ಬಂದಿ, ವಕೀಲರು ಮತ್ತು ನ್ಯಾಯಾಧೀಶರಿಗೆ ಪ್ರವೇಶ ಇರುತ್ತದೆ. ಕಕ್ಷಿದಾರರು ವಕೀಲರಿಂದ ಮಾಹಿತಿ ಪಡೆಯಬಹುದು. ಪ್ರತ್ಯೇಕ ರ್ಪಾಂಗ್ ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟೈಜೇಶನ್, ಮಾಸ್ಕ್ ಕಡ್ಡಾಯ, ಪರಸ್ಪರ ಅಂತರ ಕಾಯ್ದುಕೊಳ್ಳುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ದ್ವಾರದಲ್ಲೇ ತಪಾಸಣೆ: ಸ್ವಾಗತ ದ್ವಾರದಲ್ಲೇ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿ ಒಳಗೆ ಬಿಡುತ್ತಾರೆ. ನಾಳೆ ಯಾವ ಪ್ರಕರಣಗಳ ವಿಚಾರಣೆ, ವಾದ- ವಿವಾದ ನಡೆಯುತ್ತದೆ ಎಂಬ ಕುರಿತು ಹಿಂದಿನ ದಿನವೇ ನಿರ್ಧಾರವಾಗಲಿದೆ. ಆ ಪಟ್ಟಿಯನ್ನು ವಕೀಲರು, ನ್ಯಾಯಾಧೀಶರು ಹಾಗೂ ಸಿಬ್ಬಂದಿಗೆ ಕಳುಹಿಸಲಾಗುತ್ತದೆ.

    ಮೊದಲು ಯಾವ ಕೋರ್ಟ್ ಆರಂಭ?: ಜೂ.1ರಂದು 2 ಹಿರಿಯ ದಿವಾಣಿ ನ್ಯಾಯಾಲಯ, 3 ಕಿರಿಯ ದಿವಾಣಿ ನ್ಯಾಯಾಲಯ, 1 ಜಿಲ್ಲಾ ನ್ಯಾಯಾಲಯ, 1 ಕೌಟುಂಬಿಕ ನ್ಯಾಯಾಲಯ, 1 ಕಾರ್ವಿುಕ ನ್ಯಾಯಾಲಯ ಹಾಗೂ 1 ಜೆಎಂಎಫ್​ಸಿ ನ್ಯಾಯಾಲಯ ಆರಂಭವಾಗಲಿದ್ದು, ಉಳಿದ ನ್ಯಾಯಾಲಯಗಳು ಜೂ.2ರಂದು ಆರಂಭವಾಗಲಿವೆ ಎಂದು ಅಶೋಕ ಬಳಿಗಾರ ತಿಳಿಸಿದ್ದಾರೆ.

    ಇಂದು ಸ್ಯಾನಿಟೈಜೇಶನ್: ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ಮತ್ತು ಶನಿವಾರ ಸ್ಯಾನಿಟೈಜೇಶನ್ ಕಾರ್ಯ ಜರುಗಲಿದೆ. ಸಂಪೂರ್ಣ ನ್ಯಾಯಾಲಯಕ್ಕೆ ಸ್ಯಾನಿಟೈಜೇಶನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಎಸಿ ಬಂದ್ ಕಿಟಕಿ ಓಪನ್: ಕೇಂದ್ರ ಸರ್ಕಾರದ ಸೂಚನೆಯಂತೆ ನ್ಯಾಯಾಲಯ ಸಂರ್ಕೀಣದ ಕೇಂದ್ರೀಕೃತ ಹವಾನಿಯಂತ್ರಿತ (ಸೆಂಟ್ರಲೈಸ್ಡ್ ಎಸಿ) ವ್ಯವಸ್ಥೆ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಬದಲಾಗಿ ಕಿಟಕಿ, ಬಾಗಿಲು ತೆರೆದು ಫ್ಯಾನ್ ಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಓಕ ಅವರ ನಿರ್ದೇಶನದಂತೆ ಜೂ. 1ರಿಂದ ಹುಬ್ಬಳ್ಳಿ ನ್ಯಾಯಾಲಯದ ಕಲಾಪಗಳು ಆರಂಭವಾಗಲಿವೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಲಾಗುತ್ತಿದೆ.

    | ಅಶೋಕ ಬಳಿಗಾರ, ಅಧ್ಯಕ್ಷ, ಹುಬ್ಬಳ್ಳಿ ವಕೀಲರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts