More

    ಕೋರ್ಟ್ ನಿರ್ಮಾಣಕ್ಕೆ ಅನುದಾನ

    ಹುಕ್ಕೇರಿ: ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಕ್ಯಾರಗುಡ್ಡ ಬಳಿ 5 ಎಕರೆ ಜಾಗ ಮಂಜೂರು ಮಾಡಿಸಿದ್ದೇನೆ. ಅದಕ್ಕೆ ಬೇಕಾದ ಅನುದಾನ ಮಂಜೂರಾತಿ ಮಾಡಿಸಲಾಗುವುದು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

    ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ವಕೀಲರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚುನಾವಣೆ ನಂತರ ಎಲ್ಲರೂ ಒಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. 5 ಎಕರೆಯಲ್ಲಿ ಸುಸಜ್ಜಿತ ನ್ಯಾಯಾಲಯ, ವಕೀಲರ ಭವನ, ಇ-ಲೈಬ್ರರಿ ಹಾಗೂ ನ್ಯಾಯಾಧೀಶರ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಿಸುವ ಸಂಕಲ್ಪ ನನ್ನದಾಗಿದೆ. ಜತೆಗೆ ವಕೀಲರ ಸಲಹೆಯನ್ನೂ ಪಡೆಯಲಾಗುವುದು.

    ಹುಕ್ಕೇರಿ ತಾಲೂಕಿನ ವಕೀಲರ ಸಂಘ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸಿ ಎಲ್ಲರ ಗಮನ ಸೆಳೆಯುವಂತಾಗಲಿ ಎಂದು ಆಶಿಸಿದರು.
    ಅಧ್ಯಕ್ಷ ಅನೀಸ್ ವಂಟಮೂರಿ ಮಾತನಾಡಿ, ಹುಕ್ಕೇರಿ ವಕೀಲರ ಸಂಘದ ಶ್ರೇಯೋಭಿವೃದ್ಧಿಗೆ ಕತ್ತಿ ಕುಟುಂಬ ಎಲ್ಲ ರೀತಿಯ ಸಹಾಯ ಸಹಕಾರ ನೀಡಬೇಕೆಂದು ಕೋರಿದರು.

    ನಿಕಟಪೂರ್ವ ಅಧ್ಯಕ್ಷ ಆರ್.ಪಿ.ಚೌಗಲಾ ಮಾತನಾಡಿ, ಹುಕ್ಕೇರಿಯಲ್ಲಿ ರಾಜ್ಯದ ಮೊದಲ ಇ-ಲೈಬ್ರರಿ ಪ್ರಾರಂಭಿಸಲು ಸಂಸದರಾಗಿದ್ದ ರಮೇಶ ಕತ್ತಿ ಅನುದಾನ ನೀಡಿದ್ದು ಸ್ಮರಣೀಯ ಎಂದರು.

    ರಮೇಶ ಕತ್ತಿ ಅವರನ್ನು ವಕೀಲರು ಸತ್ಕರಿಸಿದರು. ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಸಹಕಾರ್ಯದರ್ಶಿ ವಿಠ್ಠಲ ಗಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಕೆ.ಎಲ್.ಜಿನರಾಳಿ, ಡಿ.ಕೆ.ಅವರಗೋಳ, ಬಿ.ಕೆ. ಮಗೆನ್ನವರ, ಆಯ್.ಕೆ.ಹೂಲಿಕಟ್ಟಿ, ಆಯ್.ಬಿ.ಅಮ್ಮಣಗಿ, ಎ.ಎಸ್.ಹುಲ್ಲೋಳಿ, ಪ್ರಕಾಶ ಪಾಟೀಲ, ಸುಕುಮಾರ ಮುನ್ನೋಳಿ, ಮುಖಂಡ ಅಪ್ಪು ಸಂಕನ್ನವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts