More

    ಮೂಲ್ಕಿಯಲ್ಲಿ ಅನ್ಯಕೋಮಿನ ಜೋಡಿಗೆ ಸ್ಥಳೀಯರಿಂದ ಗೂಸಾ

    ಮೂಲ್ಕಿ: ಕೆ.ಎಸ್ ರಾವ್ ನಗರದ ಪೊಲೀಸ್ ಕ್ವಾರ್ಟರ್ಸ್ ಬಳಿ ಉತ್ತರ ಪ್ರದೇಶ ಮೂಲದ, ಕಟಪಾಡಿಯಲ್ಲಿ ವಾಸ್ತವ್ಯವಿರುವ ಮುಸ್ಲಿಂ ಯುವಕನ ಜತೆ ಸ್ಥಳೀಯ ಹಿಂದು ಯುವತಿ ಪತ್ತೆಯಾಗಿದ್ದು, ಸ್ಥಳೀಯ ಯುವಕರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕಟಪಾಡಿಯ ಸೆಲೂನ್‌ನಲ್ಲಿ ಕೆಲಸಕ್ಕಿದ್ದ ಉತ್ತರ ಪ್ರದೇಶದ ಫಯೀಮ್ ಎಂಬಾತ ತನ್ನ ಮಿತ್ರ, ಕೆ.ಎಸ್ ರಾವ್ ನಗರದಲ್ಲಿ ಸೆಲೂನ್‌ನಲ್ಲಿ ಕೆಲಸಕ್ಕಿರುವ ಗುಲ್ಫಾಂ ಎಂಬಾತನ ರೂಂಗೆ ಬಂದಿದ್ದನು. ಅಲ್ಲಿಗೆ ಬಂದಿದ್ದ ಕೊಲಕಾಡಿ ಮೂಲದ ಯುವತಿ ಜತೆ ಸಂಶಯಾಸ್ಪದ ರೀತಿಯಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ಬರುತ್ತಿದ್ದಾಗ ಸ್ಥಳೀಯರು ತಡೆದು ವಿಚಾರಿಸಿದ್ದಾರೆ. ಈ ಸಂದರ್ಭ ತಡಬಡಾಯಿಸಿದ ಜೋಡಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಅವರನ್ನು ಬೆನ್ನಟ್ಟಿದ್ದ ಸ್ಥಳೀಯ ಯುವಕರು ಜೋಡಿಯನ್ನು ಹಿಡಿದು ಥಳಿಸಿ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೋಡಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಕಟಪಾಡಿಯಲ್ಲಿ ನೆಲೆಸಿರುವ ಫಯೀಮ್‌ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೆಲತಿಂಗಳಿಂದ ಈತ ಕಾರ್ನಾಡುವಿನಲ್ಲಿ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿದ್ದು, ಬದಿಯಲ್ಲಿದ್ದ ಫ್ಯಾನ್ಸಿ ಸೆಂಟರ್‌ನಲ್ಲಿ ಯುವತಿ ಕೆಲಸ ಮಾಡುತ್ತಿರುವಾಗ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts