More

    ರಣಜಿ ಟ್ರೋಫಿ ಫೈನಲ್​ ಪಂದ್ಯದಲ್ಲಿ ಆಡಲು ತಯಾರಾಗಿದ್ದ ಜಡ್ಡುಗೆ ಶಾಕ್​ ಕೊಟ್ಟ ಸೌರವ್​ ಗಂಗೂಲಿ

    ನವದೆಹಲಿ: ರಣಜಿ ಟ್ರೋಫಿ ಫೈನಲ್​ ಪಂದ್ಯದಲ್ಲಿ ಆಡಲು ಟೀಮ್​ ಇಂಡಿಯಾ ಆಲ್ರೌಂಡರ್​ ಆಟಗಾರ ರವೀಂದ್ರ ಜಡೇಜಾಗೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರು ಅನುಮತಿ ನಿರಾಕರಿದ್ದಾರೆ.

    ಮಾರ್ಚ್​ 9ರಿಂದ ಆರಂಭವಾಗುವ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಪರವಾಗಿ ಆಡಲು ಅನುಮತಿ ಕೋರಲಾಗಿತ್ತು. ಆದರೆ, ಮಾರ್ಚ್​ 12ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಿರುವ ಗಂಗೂಲಿ, ದೇಶವೇ ಮೊದಲಾಗಿದ್ದು, ನಿಯಮಗಳನ್ನು ಪಾಲಿಸಲೇ ಬೇಕು ಎಂದು ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಶನ್​​ ಅಧ್ಯಕ್ಷ ಜೈದೇವ್​ ಷಾ ಅವರಿಗೆ ಹೇಳಿದ್ದಾರೆ.

    ನಾನು ಗಂಗೂಲಿ ಅವರೊಂದಿಗೆ ಮಾತನಾಡಿದೆ. ಜಡೇಜಾ ಅವರು ರಣಜಿ ಆಡಲು ಬೋರ್ಡ್​ ಅನುಮತಿ ನೀಡುವುದಿಲ್ಲ ಎಂದಿದೆ. ಮೊದಲು ದೇಶ, ಆಮೇಲೆ ಉಳಿದದ್ದು ಎಂದು ಗಂಗೂಲಿ ತಿಳಿಸಿದ್ದಾಗಿ ಷಾ ಹೇಳಿದರು.

    ಮಹತ್ವದ ದೇಶಿ ಪಂದ್ಯಾವಳಿ ಸಮಯದಲ್ಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಬಾರದು ಎಂದು ಸಲಹೆ ನೀಡಿದ ಷಾ, ಹಣ ಹರಿದಾಡುವ ಐಪಿಎಲ್​ ಸಮಯದಲ್ಲೇಕೆ ರಾಷ್ಟ್ರೀಯ ಪಂದ್ಯಗಳು ನಡೆಯುವುದಿಲ್ಲ ಎಂದು ಪ್ರಶ್ನಿಸಿದರು. ಕೊನೆ ಬಾರಿಗೆ ಫೈನಲ್​ ಪಂದ್ಯದಲ್ಲಾದರೂ ಸ್ಟಾರ್​ ಆಟಗಾರರು ಆಡಿದರೆ ದೇಶಿ ಪಂದ್ಯಾವಳಿಗಳು ಪ್ರಸಿದ್ಧಿ ಪಡೆದುಕೊಳ್ಳುತ್ತವೆ ಎಂದರು.

    ಜಡೇಜಾ ಅವರು ರಣಜಿ ಟ್ರೋಫಿ ಫೈನಲ್​ ಪಂದ್ಯದಲ್ಲಿ ಆಡುವುದನ್ನು ನೋಡಲು ನಮಗೆ ತುಂಬಾ ಇಷ್ಟವಿದೆ. ಜಡೇಜಾ ಮಾತ್ರವಲ್ಲ ಪಶ್ಚಿಮ ಬಂಗಾಳ ಪರ ಮಹಮ್ಮದ್​ ಶಮಿ ಆಡುವುದನ್ನು ನೋಡಲು ಇಚ್ಛಿಸುತ್ತೇನೆ ಎಂದರು.

    ಅಂದಹಾಗೆ ಮಾರ್ಚ್​ 9 ರಿಂದ ಆರಂಭವಾಗುವ ಫೈನಲ್​ ಪಂದ್ಯದಲ್ಲಿ ರಣಜಿ ಟ್ರೋಫಿಗಾಗಿ ಪಶ್ಚಿಮ ಬಂಗಾಳ ಮತ್ತು ಸೌರಾಷ್ಟ್ರ ತಂಡ ಸೆಣಸಾಡಲಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts