More

    ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ರಿಲೀಸ್​​​ಗೂ ಮುನ್ನ ಹೊಸ ಪೋಸ್ಟರ್​​ ಔಟ್​

    ಸಲ್ಮಾನ್ ಖಾನ್ ನಟನೆಯ ಟೈಗರ್​-3 ಸಿನಿಮಾ ಇದೇ ನವೆಂಬರ್​ ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಅಕ್ಟೋಬರ್ 6 ರಂದು, ನಿರ್ಮಾಪಕರು ಚಿತ್ರದ ಹೊಚ್ಚ ಹೊಸ ಪೋಸ್ಟರ್ ಒಂದನ್ನ ಹಂಚಿಕೊಂಡಿದ್ರು. ‘ಟೈಗರ್ 3’ ಸಿನಿಮಾದಲ್ಲಿ ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


    ‘ಟೈಗರ್ 3’ ಸಿನಿಮಾ ಇನ್ನೇನು ಕೇವಲ 10 ದಿನಗೊಳಗಾಗಿ ಬಿಡುಗಡೆಯಾಗಲಿದ್ದು, ಇದೀಗ ಚಿತ್ರತಂಡವು ಸಲ್ಮಾನ್​ ಖಾನ್​​ ಅವರ ಮತ್ತೊಂದು ಪೋಸ್ಟರ್​​ ಹಂಚಿಕೊಂಡಿದ್ದಾರೆ. ಇನ್ನೇನು ಸಿನಿಮಾ ರಿಲೀಸ್​ಗೆ ಕೌಂಟ್​​ಡೌನ್​ ಪ್ರಾರಂಭವಾಗಲಿದ್ದು, ಅಕ್ಟೋಬರ್ 16 ರಂದು ಚಿತ್ರ ಹಬ್ಬದ ವಾರವೇ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಡಲಿದೆ.


    ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಟೈಗರ್​​ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಲ್ಮಾನ್ ಖಾನ್ ಆಕ್ಷನ್‌ -ಪಠಾತ್ರದಲ್ಲಿ ಜಬರ್ದಸ್ತ್​​ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ.


    ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ಯ ಮೊದಲೆರಡು ಪಾರ್ಟ್​​ಗಳು ಭರ್ಜರಿ ಹಿಟ್​​ ಕಂಡಿತ್ತು. ಇಮ್ರಾನ್​ ಹಶ್ಮಿ ಸಿನಿಮಾದಲ್ಲಿ ವಿಲನ್​ ಪಾತ್ರವನ್ನ ಮಾಡುತ್ತಿದ್ದಾರೆಂದು ಮಾಹಿತಿ ಲಭ್ಯವಾಗಿದೆ.


    ‘ಟೈಗರ್ 3’ ಮೊದಲಾದ ಸಿನಿಮಾಗಳು ಈ ಯೂನಿವರ್ಸ್ ಅಡಿಯಲ್ಲಿ ಬರುತ್ತವೆ. ಈ ಕಾರಣದಿಂದಲೇ ‘ಟೈಗರ್ 3’ ಚಿತ್ರದಲ್ಲಿ ಶಾರುಖ್ ಖಾನ್ ಅವರು ‘ಪಠಾಣ್’ ಆಗಿ ಎಂಟ್ರಿ ಕೊಡಲಿದ್ದಾರೆ. ಅಷ್ಟೇ ಅಲ್ಲ, ‘ಪಠಾಣ್ Vs ಟೈಗರ್’ ಸಿನಿಮಾ ಕೂಡ ಸಿದ್ಧಗೊಳ್ಳುತ್ತಿದೆ. ಹೀಗಾಗಿ ಜೂನಿಯರ್ ಎನ್​ಟಿಆರ್ ಆಗಮನ ‘ಟೈಗರ್ 3’ ಚಿತ್ರದಲ್ಲಿ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದು ಸುಳ್ಳು ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts