More

    ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ: ಜಿಲ್ಲಾಧಿಕಾರಿಯಿಂದ ಬೈರವದುರ್ಗದ ಪುರಾತನ ಕಲ್ಯಾಣಿ ಸ್ಥಳ ಪರಿಶೀಲನೆ

    ಕುದೂರು: ಕುದೂರು ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಭೈರವದುರ್ಗದ ಹಳೇಪೇಟೆ ಗ್ರಾಮದಲ್ಲಿರುವ ಪುರಾತನ ಕಲ್ಯಾಣಿಯನ್ನು ಪರಿಶೀಲಿಸಿದರು.

    ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಾವಿದ್ ಎಂಬುವರು ಕೆರೆ ಅಭಿವೃದ್ಧಿ ಹೆಸರಿನಲ್ಲಿ ಕಲ್ಯಾಣಿಯ ಕಲ್ಲುಗಳನ್ನು ಕಿತ್ತಿದ್ದು, ಹಲವು ದೂರುಗಳ ನಂತರ ಸೆಪ್ಟೆಂಬರ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಾವಿದ್, ತಪು್ಪ ಒಪ್ಪಿಕೊಂಡು ಕಲ್ಯಾಣಿಯನ್ನು ಮತ್ತೆ ಕಟ್ಟಿಸಿಕೊಡುವುದಾಗಿ ತಿಳಿಸಿದ್ದರು.

    ಪ್ರಸ್ತುತ ಕಲ್ಯಾಣಿ ಇರುವ ಜಾಗ ಹಳೇಪೇಟೆಯ ಮಸೀದಿಗೆ ಸೇರಿದ್ದಾಗಿದೆ ಎಂದು ಮುಸ್ಲಿಮರು ವಾದಿಸುತ್ತಿದ್ದಾರೆ. ಆದರೆ, ಪರಿಶೀಲನೆ ನಡೆಸಿದಾಗ ಕಂದಾಯ ದಾಖಲೆಗಳಲ್ಲಿ ಸರ್ಕಾರಿ ಸ್ಮಶಾನ ಎಂದು ಕಂಡುಬಂದಿದೆ. ಈ ಎಲ್ಲ ವಿಚಾರವಾಗಿ ಜಿಲ್ಲಾಧಿಕಾರಿಗಳು ಬುಧವಾರ ಖುದ್ಧು ಸ್ಥಳ ಪರಿಶೀಲನೆ ನಡೆಸಿದರು.

    ಇದೇ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಗೋಮಾಳ ಜಾಗವನ್ನು ಖರೀದಿಸಿದ್ದು, ಒಂದು ತಿಂಗಳಿಂದ ಜೆಸಿಬಿ ಬಳಸಿ ತರಾತುರಿಯಲ್ಲಿ ಭೈರವದುರ್ಗ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿನ ಜಮೀನು ಸ್ವಚ್ಛತಾಕ ಆರ್ಯ ನಡೆಸುತ್ತಿದ್ದಾರೆ. ಹಾಗೂ ಬೆಟ್ಟಕ್ಕೆ ತೆರಳುವ ಮಾರ್ಗವನ್ನು ಬಿಟ್ಟುಕೊಡುವುದಾಗಿ ಗ್ರಾಮದ ಪ್ರಮುಖ ಬಳಿ ಒಪ್ಪಂದಕ್ಕೆ ಸಿದ್ಧರಾಗಿದ್ದಾರೆ.

    ಜಿಲ್ಲಾಧಿಕಾರಿಗೆ ಶಾಸಕರ ಪತ್ರ

    ಭೈರವದುರ್ಗದ ಗೋಮಾಳ ಜಾಗದ ಬಗ್ಗೆ ಪರಿಶೀಲನೆ ನಡೆಸಿದ್ದ ಮಾಗಡಿ ಶಾಸಕ ಎ.ಮಂಜುನಾಥ್ ಜಿಲ್ಲಾಧಿಕಾರಿಗೂ ಈ ಸಂಬಂಧ ಪತ್ರ ಬರೆದಿದ್ದರು. ಕಲ್ಯಾಣಿ ಮತ್ತು ಗೋಮಾಳ ಜಮೀನಿನ ಬಗ್ಗೆ ಕೂಡಲೇ ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಂ.ಎಸ್. ಅರ್ಚನಾ ಗ್ರಾಮಸ್ಥರಿಗೆ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts