More

    ಕರೊನಾ ಕುರಿತ ಹಣದಲ್ಲೂ ಪಾಲು ಕೇಳಿದ ಪಾಲಿಕೆ ಆಯುಕ್ತ ಎಸಿಬಿ ಬಲೆಗೆ; ಅಕೌಂಟೆಂಟ್​ ಕೂಡ ಬಂಧನ..

    ಕಲಬುರಗಿ: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಲಿಕೆಯೊಂದರ ಆಯುಕ್ತರೇ ಸಿಕ್ಕಿಹಾಕಿಕೊಂಡಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಆಯುಕ್ತರ ಜತೆಗೆ ಅಕೌಂಟೆಂಟ್​ ಒಬ್ಬರನ್ನು ಕೂಡ ಬಂಧಿಸಿದ್ದಾರೆ.
    ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳ ಮತ್ತು ಅಕೌಂಟೆಂಟ್​ ಚೆನ್ನಪ್ಪ ಬಂಧನಕ್ಕೆ ಒಳಗಾಗಿರುವ ಆರೋಪಿಗಳು. ಇವರು ಕರೊನಾ ಸುರಕ್ಷಾ ಚಕ್ರದ ಬಿಲ್ ಪಾಸ್ ಮಾಡುವ ಸಲುವಾಗಿ ಲಂಚ‌ ಕೇಳಿದ್ದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ.

    7.5 ಲಕ್ಷ ರೂ. ಮೊತ್ತದ ಬಿಲ್ ಪಾಸ್ ಮಾಡಲು ಆಯುಕ್ತರು ಶೇ. 2 ಕಮಿಷನ್​ ಕೇಳಿದ್ದರು. ಈ ಕರೋನಾ ಸುರಕ್ಷಾ ಚಕ್ರದ ನಿರ್ದೇಶಕ ಶರಣ್ ನೀಡಿದ ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಾಲಿಕೆ ಅಕೌಂಟೆಂಟ್ ಚೆನ್ನಪ್ಪನಿಗೆ ಶರಣ್ 14,500 ರೂ. ನೀಡುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದು, ರೆಡ್ ಹ್ಯಾಂಡೆಡ್​ ಆಗಿ ಹಿಡಿದಿದ್ದಾರೆ.

    ಅಕೌಂಟೆಂಟ್ ಹಣ ಪಡೆದ ಬಳಿಕ ಎಸಿಬಿ ಅಧಿಕಾರಿಗಳ ಮುಂದೆ ಕಮಿಷನರ್ ಶಂಕ್ರಣ್ಣ ವಣಿಕ್ಯಾಳಗೆ ಕರೆ ಮಾಡಿ ಹಣ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದ. ಆಯುಕ್ತರು ಮನೆಗೆ ಹಣ ತೆಗೆದುಕೊಂಡು ಬರುವಂತೆ ಚೆನ್ನಪ್ಪಗೆ ತಿಳಿಸಿದ್ದರು.

    ಎಸಿಬಿ ದಾಳಿ ವೇಳೆ ಅಕೌಂಟೆಂಟ್ ಚೆನ್ನಪ್ಪ ಬಳಿ ಇನ್ನೂ 1.45 ಲಕ್ಷ ರೂ. ಸಿಕ್ಕಿದ್ದು, ಅದು ಕೂಡ ಆಯುಕ್ತರಿಗೆ ಕೊಡಲು ಇಟ್ಟುಕೊಂಡಿರುವ ಹಣ ಎಂದು ಚೆನ್ನಪ್ಪ ತಿಳಿಸಿದ್ದ. ಇಬ್ಬರನ್ನೂ ಬಂಧಿಸಿರುವ ಎಸಿಬಿ ಅಧಿಕಾರಿಗಳು, ಅವರಿಬ್ಬರ ನಡುವಿನ ಫೋನ್​ ಸಂಭಾಷಣೆಯ ಕ್ಲಿಪ್ಪಿಂಗ್ ಕೂಡ ವಶಪಡಿಸಿಕೊಂಡಿದ್ದಾರೆ.

    ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts